ರಾಂಚಿ :ತಾಯಿಯ ಮೂಢನಂಬಿಕೆಗೆ ಬಲಿಯಾದ ಮಗು; ಜಾರ್ಖಂಡ್ ನ ಪಲಮು ಎಂಬಲ್ಲಿ ನಡೆದ ದುರ್ಘಟನೆ;ಮೂಢನಂಬಿಕೆ ನಂಬಿ ತನ್ನ ಮಗುವನ್ನು ಕೊಂದ ಮಹಿಳೆ.
Sunday, November 17, 2024
ಜಾರ್ಖಂಡ್: ತಾಯಿಯೊಬ್ಬಳು ಮೂಢನಂಬಿಕೆಗೆ ಒಳಗಾಗಿ ತನ್ನ ಒಂದೂವರೆ ವರ್ಷದ ಮಗಳನ್ನೇ ಕೊಲೆ ಮಾಡಿರುವ ಘಟನೆ ಜಾರ್ಖಂಡ್‌ನ ಪಲಮುದಲ್ಲಿ ನಡೆದಿದೆ. ಜಿಲ್ಲೆಯ ಹುಸೇನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾರದ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಾಯಿಯನ್ನು ಬಂಧಿಸಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಪೊಲೀಸ್ ಠಾಣೆಯ ಪ್ರಭಾರಿ ಸಂಜಯ್ ಕುಮಾರ್ ಯಾದವ್, ಆರೋಪಿ ಮಹಿಳೆಯನ್ನು ಖರಾದ್ ಗ್ರಾಮದ ನಿವಾಸಿ ಅರುಣ್ ರಾಮ್ ಪತ್ನಿ ಗೀತಾದೇವಿ (25) ಎಂದು ಗುರುತಿಸಲಾಗಿದೆ. ಮೂಢನಂಬಿಕೆಯಿಂದ ಮಗಳನ್ನು ಕೊಂದ ಗೀತಾದೇವಿ, ಆ ಬಳಿಕ ಮನೆಯಿಂದ ಒಂದೂವರೆ ಎರಡು ಕಿಲೋಮೀಟರ್ ದೂರದಲ್ಲಿರುವ ಸಿಕ್ನಿ ಬರ್ವಧೋರಾ ಅರಣ್ಯದ ಬಳಿ ಆ ಮಗುವನ್ನು ಮಣ್ಣಿನಲ್ಲಿ ಹೂತು ಹಾಕಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಪರಿಶೀಲಿಸಲಾಗಿದ್ದು, ಆರೋಪಿ ಮಹಿಳೆಯನ್ನು ಇದೀಗ ಬಂಧಿಸಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.
ಮಣ್ಣಲ್ಲಿ ಹುಗಿದು ಹಾಕಿ ಮನೆಗೆ ತೆರಳಿದ್ದ ಮಹಾತಾಯಿ: ಮಗುವನ್ನು ಮಣ್ಣಿನಲ್ಲಿ ಹೂತು ಹಾಕಿದ ಬಳಿಕ ಮನೆಗೆ ತೆರಳಿದ ಮಹಿಳೆಯನ್ನು ಅಕೆಯ ಅತ್ತೆ ಗಮನಿಸಿದ್ದು, ಮಗುವಿನ ಬಗ್ಗೆ ವಿಚಾರಿಸಿದ್ದಾರೆ. ಮಹಿಳೆಯು ಮಗುವನ್ನು ಕೊಂದಿರುವುದಾಗಿ ಕೇಳಿದ್ದಾಳೆ. ಆತಂಕಗೊಂಡ ಮಹಿಳೆಯ ಅತ್ತೆಯ ಗೋಳಾಟ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಮಹಳೆಯು ತಾನು ಮಾಟ - ಮಂತ್ರ ಕಲಿತಿರುವುದಾಗಿ ಹೇಳಿಕೊಂಡಿದ್ದು, ಹೀಗೆ ಬಲಿ ನೀಡಿದರೆ ಪವಾಡದ ಮಂತ್ರ ಕಲಿಯುವಲ್ಲಿ ಯಶಸ್ಸಾಗಬಹುದು. ಅದಕ್ಕಾಗಿ, ಮಗುವನ್ನು ಬಲಿಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಢನಂಬಿಕೆ ವಿರುದ್ಧ ಜಾಗೃತಿ ಕಾರ್ಯಕ್ರಮ, ಅಭಿಯಾನಗಳು ನಡೆಯುತ್ತಲೇ ಇವೆ. ಆದರೂ, ಮೌಢ್ಯಕ್ಕೆ ಕಡಿವಾಣ ಬಿದ್ದಿಲ್ಲ. ಮೂಢನಂಬಿಕೆಗೆ ಜನರು ಬಲಿಯಾಗುತ್ತಲೇ ಇದ್ದಾರೆ. ಡಂಗ್ವಾರ್, ಬಡೇಪುರ್, ದುಲ್ಹರ್, ಟಿಕಾರ್ ಪರ್, ಸರಸ್ವತಿ ಶಿಶು ಮಂದಿರ ಮತ್ತು ಮಿಡ್ಲ್ ಸ್ಕೂಲ್ ಸ್ಥಳಗಳಲ್ಲಿ ಮೂಢನಂಬಿಕೆ ವಿರುದ್ಧ ಜಾಗೃತಿ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆ ಈ ತಿಂಗಳು ಜಾಗೃತಿ ಅಭಿಯಾನ ನಡೆಸಲಾಗಿಲ್ಲ. ಶೀಘ್ರದಲ್ಲೇ ಕಾರ್ಯಕ್ರಮವನ್ನು ನಿರ್ಧರಿಸಿ ಮೂಢನಂಬಿಕೆ ವಿರುದ್ಧ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಹುಸೇನಾಬಾದ್ ಮಹಿಳಾ ಮತ್ತು ಮಕ್ಕಳ ರಕ್ಷಣಾ ಠಾಣೆ ಪ್ರಭಾರಿ ಪಾರ್ವತಿ ಕುಮಾರಿ ಬೇಸರ ವ್ಯಕ್ತಪಡಿಸಿದ್ದಾರೆ.