ಬೆಂಗಳೂರು :ಬಿಗ್ ಬಾಸ್ ಟ್ರೋಫಿ ಗೆದ್ದು ವಿನ್ನರ್ ಆದ ಗಿಲ್ಲಿ ನಟ...!!!

ಬೆಂಗಳೂರು :ಬಿಗ್ ಬಾಸ್ ಸೀಸನ್ 12ರ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾತುಗಾರ, ಹಳ್ಳಿ ಹೈದ ಗಿಲ್ಲಿ ನಟ (ನಟರಾಜ್) ಬಿಗ್ ಬಾಸ್ ಟ್ರೋಫಿಯನ್ನ ಎತ್ತಿ ಹಿಡಿದಿದ್ದಾರೆ. ಮಾತಿನ ಮಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಆ ಮೂಲಕ 112 ದಿನಗಳ ಬಿಗ್ ಶೋಗೆ ಇವತ್ತು ತೆರೆ ಬಿದ್ದಿದೆ.
ಬಿಗ್ ಬಾಸ್ ಅಂದ್ರೆ ವ್ಯಕ್ತಿತ್ವದ ಆಟ. ಪ್ರತಿಭೆಯನ್ನು ಶೋಧಿಸುತ್ತ ವ್ಯಕ್ತಿತ್ವವನ್ನು ಅನಾವರಣ ಮಾಡುವ ಕಲೆಗಾರಿಕೆಯೇ ಬಿಗ್ ಬಾಸ್ನ ತಾಖತ್ತು. ವ್ಯಕ್ತಿತ್ವದ ಆಟದಲ್ಲಿ ಈ ವರ್ಷ ಒಟ್ಟು 25 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದರು. ಆಟ, ವ್ಯಕ್ತಿತ್ವ ಮತ್ತು ಭಾವನೆ ತುಂಬಿದ್ದ ಬಿಗ್ ಮನೆಯು ಯುದ್ಧ ಭೂಮಿಯಾಗಿ ಅನಾವರಣಗೊಂಡಿತ್ತು. 112 ದಿನಗಳ ಕಾಲ ನಡೆದ ಮಸ್ತ್ ಮನರಂಜನೆಯ ಧಮಾಕಾದಲ್ಲಿ ಯಾರು ಗೆಲ್ಲಬೇಕು ಅನ್ನೋದನ್ನು ವೀಕ್ಷಕರು ನಿರ್ಧರಿಸಿ, ಗಿಲ್ಲಿ ಕೈಗೆ ಟ್ರೋಫಿ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಸ್ವತಃ ಮನೆಯೊಳಗೆ ಹೋಗಿ ಟಾಪ್ 3 ಫೈನಲಿಸ್ಟ್‌ಗಳನ್ನು ವೇದಿಕೆ ಮೇಲೆ ಕರೆತಂದಿದ್ದಾರೆ. ಬಿಗ್ ಬಾಸ್ ಕನ್ನಡ 12 ಫಿನಾಲೆಯಿಂದ 2nd ರನ್ನರ್ ಅಪ್ ಆಗಿ ಅಶ್ವಿನಿ ಗೌಡ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ 12ರ ವಿನ್ನರ್‌ಗೆ ಬರೋಬ್ಬರಿ 50 ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ. 100 ದಿನಗಳ ಸ್ಪರ್ಧೆಯಲ್ಲಿ ಪ್ರತಿ ದಿನ ಸ್ಪರ್ಧಿಗಳ ಜನಪ್ರಿಯತೆ, ಬೇಡಿಕೆ, ಪ್ರಾಮುಖ್ಯತೆಗೆ ಅನುಸಾರವಾಗಿ ಪ್ರತಿ ಎಪಿಸೋಡ್ ಮೊತ್ತವನ್ನು ಪಡೆಯಲಿದ್ದಾರೆ. ಪ್ರಮುಖವಾಗಿ 50 ಲಕ್ಷ ರೂಪಾಯಿ ಬಹುಮಾನದ ಚೆಕ್ ಪ್ರಾಯೋಜಕರಿಂದ ಪಡೆಯಲಿದ್ದಾರೆ.
ಬಿಗ್ ಬಾಸ್ 12ರ ವಿನ್ನರ್‌ಗೆ 50 ಲಕ್ಷ ರೂಪಾಯಿ ನಗದು ಬಹುಮಾನದ ಜೊತೆಗೆ ಹೊಚ್ಚ ಹೊಸ ಕಾರು ಪಡೆಯಲಿದ್ದಾರೆ. ಈ ಬಾರಿ ಮಾರುತಿ ಸುಜುಕಿ ವಿಕ್ಟೋರಿಸ್ ಎಸ್‌ಯುವಿ ಕಾರು ಪಡೆಯಲಿದ್ದಾರೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 10.50 ಲಕ್ಷ ರೂಪಾಯಿಯಿಂದ 19.99 ಲಕ್ಷ ರೂಪಾಯಿ. ವಿನ್ನರ್‌ಗೆ ಟಾಪ್ ಮಾಡೆಲ್ ಕಾರನ್ನೇ ನೀಡಲಾಗುತ್ತದೆ.
ನಗದು ಬಹುಮಾನ, ಕಾರು ಸೇರಿದಂತೆ ಇತರ ಬಹುಮಾನಗಳಿಗಿಂತ ಪ್ರಮುಖವಾಗಿ ವಿನ್ನರ್‌ಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ. ಬಿಗ್ ಬಾಸ್ ಟ್ರೋಫಿ ಮನರಂಜನಾ ಕ್ಷೇತ್ರದಲ್ಲಿರುವ ಪ್ರತಿಯೊಬ್ಬ ಕಲಾವಿದನಿಗೂ ಅತ್ಯಂತ ಪ್ರಮುಖವಾಗಿದೆ. ಬಿಗ್ ಬಾಸ್ ವಿನ್ನರ್‌ಗೆ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ.