ಬೆಂಗಳೂರು :ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ಬೆತ್ತಲೆ, ರಾಸಲೀಲೆ ವಿಡಿಯೋ ವೈರಲ್ ; ಸಿಎಂ ಗರಂ, ಗೃಹ ಇಲಾಖೆಗೆ ವರದಿ ನೀಡಲು ಸಿಎಂ ಆರ್ಡರ್..!!!

ಬೆಂಗಳೂರು : ಈ ಹಿಂದೆ ಚಿನ್ನ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಪುತ್ರಿ ರನ್ಯ ರಾವ್‌ಗೆ ಶಿಷ್ಟಾಚಾರ ಉಲ್ಲಂಘಿಸಿ ವಿಮಾನ ನಿಲ್ದಾಣದಲ್ಲಿ ವಿಐಪಿ ಟ್ರೀಟ್‌ಮೆಂಟ್ ನೀಡಿದ್ದಕ್ಕೆ ಸುದ್ದಿಯಾಗಿದ್ದ ಐಪಿಎಸ್ ಅಧಿಕಾರಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಕಚೇರಿಯಲ್ಲಿರುವಾಗಲೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಈಗ ವೈರಲ್ ಆಗಿದೆ.
ಸಮವಸ್ತ್ರದಲ್ಲಿರುವಾಗಲೇ ರಾಮಚಂದ್ರರಾವ್ ತನ್ನ ಕಚೇರಿಯ ಒಳಗಡೆಯೇ ಮಹಿಳೆಯನ್ನು ತಪ್ಪಿಕೊಂಡಿದ್ದಾರೆ. 4-5 ತಿಂಗಳಲ್ಲಿ ರಾಮಚಂದ್ರ ರಾವ್ ಪೊಲೀಸ್ ಇಲಾಖೆಯಿಂದ ನಿವೃತ್ತರಾಗಲಿದ್ದರು. ನಿವೃತ್ತರಾಗುವ ಸಮಯದಲ್ಲೇ ರಹಸ್ಯ ಕ್ಯಾಮೆರಾದ ಮುಂದೆ ಬೆತ್ತಲಾಗಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಗರಂ ಆಗಿದ್ದು, ಗೃಹ ಇಲಾಖೆಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ರನ್ಯಾರಾವ್ ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲೂ ರಾಮಚಂದ್ರರಾವ್ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು. ಆಗ ಸರ್ಕಾರಕ್ಕೆ ಮುಜುಗರ ಆಗಿತ್ತು.ಈಗ ರಾಸಲೀಲೆ ವಿಡಿಯೋ ವೈರಲ್ ಆಗುತ್ತಲೇ ಮತ್ತೆ ಸರ್ಕಾರಕ್ಕೆ ಮುಜುಗರವಾಗಿದೆ. ಈ ಹಿನ್ನಲೆಯಲ್ಲಿ ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸೂಚನೆ ನೀಡಿದ್ದು, ವರದಿ ಬಂದ ಕೂಡಲೇ ರಾಮಚಂದ್ರರಾವ್ ಮೇಲೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಅದು ಎಐ ವಿಡಿಯೋ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ!
ವಿಡಿಯೋ ವೈರಲ್ ಆದ ಬೆನ್ನಲ್ಲೇ, ಐಜಿಪಿ ರಾಮಚಂದ್ರ ರಾವ್ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. 'ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ' ಎಂದು ಅವರು ಕಿಡಿಕಾರಿದ್ದಾರೆ.
ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ' ಎಂದು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಕಕ್ಕಾಬಿಕ್ಕಿ!
ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸುವರ್ಣ ನ್ಯೂಸ್ ಪ್ರತಿನಿಧಿಗಳು ರಾಮಚಂದ್ರ ರಾವ್ ಅವರನ್ನು ಪ್ರಶ್ನಿಸಿದಾಗ, ಅವರು ಸರಿಯಾದ ಉತ್ತರ ನೀಡಲಾಗದೆ ತಬ್ಬಿಬ್ಬಾದ ಪ್ರಸಂಗವೂ ನಡೆಯಿತು. ವಿಡಿಯೋದಲ್ಲಿರುವುದು ನೀವೇ ಅಲ್ಲವೇ? ಸಮವಸ್ತ್ರದಲ್ಲೇ ಇಂತಹ ವರ್ತನೆ ಸರಿಯೇ? ಎಂಬ ನೇರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅವರು ಕಕ್ಕಾಬಿಕ್ಕಿಯಾಗಿ ಅಲ್ಲಿಂದ ನಿರ್ಗಮಿಸಿದರು. ಅವರ ಈ ವರ್ತನೆ ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.