ಹಳಿಯಾಳ :ಚಾಲಕನ ಬೇಜವಾಬ್ದಾರಿಗೆ ಐದು ವರ್ಷದ ಹಸುಗೂಸು ಬಲಿ...!!!

ಹಳಿಯಾಳ :ಚಾಲನಾ ತರಬೇತಿ ಇಲ್ಲದ ಚಾಲಕನೊಬ್ಬ ಇಕೋ ವ್ಯಾನ್ ಅನ್ನು ಮನೆಯ ಕಟ್ಟೆಯ ಮೇಲೆ ಹರಿಸಿದ ಪರಿಣಾಮ ಐದು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಳಿಯಾಳ ತಾಲೂಕಿನ ಕಾವಲವಾಡ ಗ್ರಾಮದಲ್ಲಿ ನಡೆದಿದೆ.
ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಐದು ವರ್ಷದ ಬಾಲಕ ಹುಜೇರ ಸಲೀಂ ಶಿಗಳ್ಳಿ ಮೇಲೆ ನಿಯಂತ್ರಣ ತಪ್ಪಿದ ಇಕೋ ವ್ಯಾನ್ (ಕೆಎ 65 ಎಂ 3351) ಅತಿವೇಗವಾಗಿ ನುಗ್ಗಿದೆ. ಡಿಕ್ಕಿಯ ತೀವ್ರತೆಗೆ ಬಾಲಕ ಹುಜೇರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪಘಾತದ ವೇಳೆ ಬಾಲಕನ ಪಕ್ಕದಲ್ಲೇ ಇದ್ದ ಆತನ ಅಜ್ಜಿ ಆಶಾಬಿ ಗಫೂರ್ಸಾಬ್ ಮುಲ್ಲಾ (60)ಗೂ ಗಂಭೀರ ಗಾಯಗಳಾಗಿದ್ದು, ಕೈ ಮೂಳೆ ಮುರಿತವಾಗಿದೆ.
ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಆರೋಪಿ ಗೋರೆಸಾಬ್ ವಲಿಸಾಬ್ ಉಗ್ರಾಣಿ ಎಂಬಾತನಿಗೆ ಯಾವುದೇ ಚಾಲನಾ ತರಬೇತಿ ಇರಲಿಲ್ಲ. ತರಬೇತಿ ಇಲ್ಲದಿದ್ದರೂ ಹೊಸದಾಗಿ ಖರೀದಿಸಿದ್ದ ಕಾರನ್ನು ರಸ್ತೆಗೆ ಇಳಿಸಿದ್ದ ಚಾಲಕ, ನಿಯಂತ್ರಣ ಸಿಗದೆ ನೇರವಾಗಿ ಮನೆಯ ಕಟ್ಟೆಯೊಳಗೆ ಕಾರನ್ನು ನುಗ್ಗಿಸಿದ್ದಾನೆ.
ಘಟನೆ ನಡೆದ ಬೆನ್ನಲ್ಲೇ ಹಳಿಯಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಗೋರೆಸಾಬ್‌ನನ್ನು ಬಂಧಿಸಿದ್ದಾರೆ