ದೆಹಲಿ: ಗಣರಾಜ್ಯೋತ್ಸವ ಸಂದರ್ಭದಲ್ಲೇ ರಾಜಸ್ಥಾನದಲ್ಲಿ ಹತ್ತು ಸಾವಿರ ಕೇಜಿ ಸ್ಫೋಟಕ ಪತ್ತೆ ; ಅಕ್ರಮ ಶೇಖರಣೆ ಮಾಡಿದ್ದ ಒಬ್ಬನ ಬಂಧನ, ಸ್ಮಗ್ಲಿಂಗ್ ನೆಟ್ವರ್ಕ್ ಬಗ್ಗೆ ತನಿಖೆ...!!!

ದೆಹಲಿ: ಗಣರಾಜ್ಯೋತ್ಸವ ಸಂದರ್ಭದಲ್ಲೇ ರಾಜಸ್ಥಾನದಲ್ಲಿ ಹತ್ತು ಸಾವಿರ ಕೇಜಿ ಸ್ಫೋಟಕ ಪತ್ತೆ ; ಅಕ್ರಮ ಶೇಖರಣೆ ಮಾಡಿದ್ದ ಒಬ್ಬನ ಬಂಧನ, ಸ್ಮಗ್ಲಿಂಗ್ ನೆಟ್ವರ್ಕ್ ಬಗ್ಗೆ ತನಿಖೆ...!!!

ನವದೆಹಲಿ: ಗಣರಾಜ್ಯೋತ್ಸವ ಆಚರಣೆಗೆ ಉಗ್ರರ ಬೆದರಿಕೆ ನಡುವೆಯೇ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ 10,000 ಕೆಜಿ ಸ್ಫೋಟಕಗಳು ಮತ್ತು ಡಿಟೋನೇಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಗಣಿಗಾರಿಕೆ ಸಂಬಂಧಿತ ಸ್ಫೋಟಕಗಳು ಎನ್ನುವ ಮಾಹಿತಿ ಇದ್ದರೂ, ದೊಡ್ಡ ಪ್ರಮಾಣದಲ್ಲಿ ಶೇಖರಣೆ ಮಾಡಿರುವುದು ಶಂಕೆಗೆ ಕಾರಣವಾಗಿದೆ. ‌ಈ ಭಾಗದಲ್ಲಿ ದೊಡ್ಡ ಮಟ್ಟದ ಸ್ಮಗ್ಲಿಂಗ್ ನೆಟ್ವರ್ಕ್ ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು.‌

ಅಕ್ರಮ ಗಣಿಗಾರಿಕೆ ಸಂಬಂಧಿತ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ರಾಜಸ್ಥಾನದ ವಿಶೇಷ ತನಿಖಾ ತಂಡದ ಪೊಲೀಸರು ತೋಟದ ಮನೆಯೊಂದರಲ್ಲಿ 10 ಸಾವಿರ ಕೆಜಿ ಸ್ಫೋಟಕಗಳು ಹಾಗೂ ಡಿಟೋನೇಟರ್‌ಗಳನ್ನ ವಶಪಡಿಸಿಕೊಂಡಿದ್ದು, ಓರ್ವನನ್ನ ಬಂಧಿಸಿದ್ದಾರೆ. ಹರ್ಸೌರ್ ಗ್ರಾಮದ ನಿವಾಸಿ ಸುಲೇಮಾನ್ ಖಾನ್ ಎಂಬಾತ ಬಂಧಿತ ಆರೋಪಿ. 

ಪೊಲೀಸರು ಹರ್ಸೌರ್‌ ಏರಿಯಾದ ತೋಟದ ಮನೆಯೊಂದರ ಮೇಲೆ ದಾಳಿ ಮಾಡಿದಾಗ 187 ಚೀಲಗಳಲ್ಲಿ ತುಂಬಿಟ್ಟಿದ್ದ ಒಟ್ಟು 9,550 ಕೆಜಿ ಅಮೋನಿಯಂ ನೈಟ್ರೇಟ್, ಡಿಟೋನೇಟರ್ ಸೇರಿ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿದ್ದಾರೆ. ಇದರಲ್ಲಿ 9 ಪೆಟ್ಟಿಗೆಗಳಲ್ಲಿ ಡಿಟೋನೇಟರ್‌ಗಳು, 15 ಬಂಡಲ್‌ಗಳಷ್ಟು ನೀಲಿ ಫ್ಯೂಸ್ ವೈರ್, 12 ಪೆಟ್ಟಿಗೆಯಲ್ಲಿ ಕೆಂಪು ಫ್ಯೂಸ್ ವೈರ್ ಗಳನ್ನೂ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಸ್ಥಳದಲ್ಲಿದ್ದ ಸುಲೇಮಾನ್ ಖಾನ್ ಎಂಬಾತನನ್ನ ಬಂಧಿಸಲಾಗಿದೆ. ಆತನ ವಿರುದ್ಧ ಮೂರು ಕ್ರಿಮಿನಲ್‌ ಪ್ರಕರಣಗಳಿದ್ದು ಸ್ಫೋಟಕ ಸಾಮಗ್ರಿಗಳ ಸಂಗ್ರಹದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ‌

ಪ್ರಾಥಮಿಕ ತನಿಖೆಯಲ್ಲಿ ಆರೋಪಿ, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರಿಗೆ ಸ್ಫೋಟಕ ಸಾಮಗ್ರಿಗಳನ್ನು ಪೂರೈಸುತ್ತಿದ್ದ. ಮಾರುಕಟ್ಟೆಯಲ್ಲಿ ಕೋಟ್ಯಂತರ ಬೆಲೆ ಇರುವ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದ್ದವರು, ಈತನ ಅಕ್ರಮ ಚಟುವಟಿಕೆ ಬಗ್ಗೆ ಕೇಂದ್ರ ತನಿಖಾ ಏಜನ್ಸಿಗಳು ತನಿಖೆ ನಡೆಸಲಿವೆ.

Ads on article

Advertise in articles 1

advertising articles 2

Advertise under the article