ಆಂಧ್ರಪ್ರದೇಶ :ಪ್ರಿಯಕರನೊಂದಿಗೆ ಸೇರಿ ಪತಿ ಕೊಂದು ವಯಸ್ಕರ ಚಿತ್ರಗಳನ್ನು ನೋಡುತ್ತಾ ರಾತ್ರಿ ಕಳೆದ ಪತ್ನಿ...!!!

ಆಂಧ್ರಪ್ರದೇಶ :ಪ್ರಿಯಕರನೊಂದಿಗೆ ಸೇರಿ ಪತಿ ಕೊಂದು ವಯಸ್ಕರ ಚಿತ್ರಗಳನ್ನು ನೋಡುತ್ತಾ ರಾತ್ರಿ ಕಳೆದ ಪತ್ನಿ...!!!

ದುಗ್ಗಿರಾಲ: ಆಂಧ್ರಪ್ರದೇಶದ ಗುಂಟೂರಿನ ದುಗ್ಗಿರಾಲ ಮಂಡಲದ ಚಿಲುವೂರು ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ ಗಂಡನನ್ನು ಕೊಂದಿದ್ದಾಳೆ. ಕೊಲೆ ಬಳಿಕ ರಾತ್ರಿ ಒಂಟಿಯಾಗಿ ವಯಸ್ಕರ ಚಿತ್ರಗಳನ್ನು ವೀಕ್ಷಿಸುತ್ತಾ ಕಳೆದಿದ್ದಾಳೆ ಎಂದು ಪೊಲೀಸರು ಬುಧವಾರ ಸಂಜೆ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮಂಗಳಗಿರಿ ಗ್ರಾಮೀಣ ವೃತ್ತ ನಿರೀಕ್ಷಕ ವೆಂಕಟಬ್ರಹ್ಮನ್ ಮತ್ತು ದುಗ್ಗಿರಾಲ ಸಬ್-ಇನ್ಸ್‌ಪೆಕ್ಟರ್ ವೆಂಕಟರವಿ, ಬುಧವಾರ ಚಿಲುವೂರು ಮೂಲದ ಈರುಳ್ಳಿ ವ್ಯಾಪಾರಿ ಲೋಕಂ ಶಿವನಾಗರಾಜು ಎರಡು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅವರು 2007 ರಲ್ಲಿ ಲಕ್ಷ್ಮಿ ಮಾಧುರಿಯನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಾಧುರಿ ವಿಜಯವಾಡದ ಸಿನಿಮಾ ಹಾಲ್‌ನಲ್ಲಿ ಟಿಕೆಟ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಆ ಸಮಯದಲ್ಲಿ ಮಾಧುರಿ ಸತ್ತೇನಪಳ್ಳಿಯ ಗೋಪಿ ಎಂಬಾತನನ್ನು ಪರಿಚಯಿಸಿಕೊಂಡಿದ್ದರು. ಈ ಪರಿಚಯ ಬಳಿಕ ಸಲುಗೆಗೆ ತಿರುಗಿ ಇಬ್ಬರೂ ವಿವಾಹೇತರ ಸಂಬಂಧವನ್ನು ಬೆಳೆಸಿಕೊಂಡಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ನಡುವೆ ತನ್ನ ಪತಿ ಲೋಕೇಶ ​​​ ಅವರನ್ನ ಮೊದಲಿನ ಕೆಲಸ ಬಿಡುವಂತೆ ಮಾಧುರಿ ಮನವೊಲಿಸಿದ್ದಳು. ಗೋಪಿ ಹೈದರಾಬಾದ್‌ನಲ್ಲಿ ಟ್ರಾವೆಲ್ಸ್​ ವ್ಯವಹಾರ ನಡೆಸುತ್ತಿದ್ದರಿಂದ ಮಾಧುರಿ ಲೋಕೇಶ್​​ ನನ್ನು ಅಲ್ಲಿಗೆ ಕೆಲಸಕ್ಕೆ ಕಳುಹಿಸಿದ್ದಳು. ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದ ಲೊಕೇಶ್​ ನಂತರ ಚಿಲುವೂರಿಗೆ ಮರಳಿದ್ದರು. ಈ ವಿಚಾರವಾಗಿ ದಂಪತಿಗಳ ನಡುವೆ ಮನಸ್ಥಾಪವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕೇಶ್ ಹೆಚ್ಚಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರಿಂದ ಮಾಧುರಿ ಮತ್ತು ಗೋಪಿ ನಡುವಿನ ಸಂಬಂಧಕ್ಕೆಅಡ್ಡಿಯಾಗಿ ಪರಿಣಮಿಸಿದ್ದ. ಇದರಿಂದ ಪತಿಯನ್ನ ಹೇಗಾದರೂ ಮಾಡಿ ದೂರ ಮಾಡಬೇಕು ಎಂದು ನಿರ್ಧರಿಸಿ ಆಕೆ ಗಂಡನ ಕೊಲೆಗೆ ಸ್ಕೆಚ್​ ಹಾಕಿದ್ದಳು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಿರಿಯಾನಿಯಲ್ಲಿ ನಿದ್ದೆ ಮಾತ್ರೆ ಬರೆಸಿದ್ದ ಪತ್ನಿ: ಜನವರಿ 18ರ ರಾತ್ರಿ ಮಾಧುರಿ ಭೋಜನಕ್ಕೆ ಬಿರಿಯಾನಿ ತಯಾರಿಸಿ ಲೋಕೇಶ್‌ಗೆ ಬಡಿಸಿದ್ದಳು. ಈ ವೇಳೆ ಅದರಲ್ಲಿ 20 ನಿದ್ರೆ ಮಾತ್ರೆಗಳನ್ನು ಬೆರೆಸಿದ್ದಳು. ಅತ್ತ ಊಟ ಮಾಡಿದ ಲೋಕೇಶ ಗಾಢ ನಿದ್ರೆಗೆ ಜಾರಿದ್ದರು. ಅತ್ತ ರಾತ್ರಿ 11:30ರ ಸುಮಾರಿಗೆ ಮನೆಗೆ ಬಂದ ಗೋಪಿ, ಮಲಗಿದ್ದ ಲೋಕೇಶ್‌ನ ಎದೆಯ ಮೇಲೆ ಕುಳಿತಿದ್ದಾನೆ. ಇನ್ನು ಮಾಧುರಿ ಆತನ ಬಾಯಿಯ ಮೇಲೆ ದಿಂಬನ್ನು ಒತ್ತಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಲೋಕೇಶ್ ಸತ್ತಿದ್ದಾನೆ ಎಂದು ಖಚಿತಪಡಿಸಿಕೊಂಡ ಬಳಿಕ ಗೋಪಿ ಹೊರಟು ಹೋಗಿದ್ದಾನೆ. ಆ ಬಳಿಕ ಮಾಧುರಿ ರಾತ್ರಿಯ ಉಳಿದ ಸಮಯವನ್ನು ಅಶ್ಲೀಲ ವಿಡಿಯೋಗಳನ್ನು ನೋಡುತ್ತಾ ಕಳೆದಿದ್ದಾಳೆ. ಬೆಳಗ್ಗೆ 4 ಗಂಟೆ ಸುಮಾರಿಗೆ ತನ್ನ ನೆರೆಹೊರೆಯವರಿಗೆ ಕರೆ ಮಾಡಿದ ಮಾಧುರಿ, ತನ್ನ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ

ಮಾಧುರಿ ಸಂಬಂಧದ ಬಗ್ಗೆ ತಿಳಿದ ನೆರೆಹೊರೆಯವರು ಲೋಕೇಶ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇನ್ನು ಶವದ ಅಂತ್ಯಕ್ರಿಯೆ ಅಣಿಯಾಗುತ್ತಿದ್ದ ಸಂದರ್ಭದಲ್ಲಿ ಮೃತ ಲೋಕೇಶ್‌ನ ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಆತನ ಕಿವಿಯ ಬಳಿಯ ಗಾಯದಿಂದ ರಕ್ತ ಸೋರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ಆರಂಭಿಸಿದ್ದರು.

ಮೃತ ಲೋಕೇಶ್ ತಂದೆಯ ದೂರು ಆಧರಿಸಿ ಸಬ್ - ಇನ್ಸ್‌ಪೆಕ್ಟರ್ ವೆಂಕಟರವಿ ಪ್ರಕರಣ ದಾಖಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮೃತನ ಪಕ್ಕೆಲುಬುಗಳು ಮುರಿದು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿತ್ತು. ಮರಣೋತ್ತರ ಪರೀಕ್ಷೆಯ ವರದಿ ಆಧಾರದ ಮೇಲೆ ಮಾಧುರಿಯವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.

Ads on article

Advertise in articles 1

advertising articles 2

Advertise under the article