ಬೆಳಗಾವಿ :ಪತ್ನಿ ಶೀಲ ಶಂಕಿಸಿ ಬೆತ್ತಲೆ ಮಾಡಿ, ಕರೆಂಟ್​​ ಶಾಕ್​​ ಕೊಟ್ಟು ಕೊಲೆ ಮಾಡಿದ ಪತಿ..!

ಬೆಳಗಾವಿ :ಪತ್ನಿ ಶೀಲ ಶಂಕಿಸಿ ಬೆತ್ತಲೆ ಮಾಡಿ, ಕರೆಂಟ್​​ ಶಾಕ್​​ ಕೊಟ್ಟು ಕೊಲೆ ಮಾಡಿದ ಪತಿ..!

ಬೆಳಗಾವಿ :ಶೀಲ ಶಂಕಿಸಿ ಪತ್ನಿಗೆ ಕರೆಂಟ್ ಶಾಕ್, ಲಟ್ಟಣಿಗೆಯಿಂದ ಹಲ್ಲೆ ಮಾಡಿ, ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಚಿತ್ರಹಿಂಸೆ ಕೊಟ್ಟು ಪತಿಯೇ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಖಾನಾಪುರದಲ್ಲಿ ನಡೆದಿದೆ.

ಪತ್ನಿಯನ್ನು ಮರ್ಡರ್​​ ಮಾಡಿ ಬಳಿಕ ಏನೂ ಗೊತ್ತಿಲ್ಲದಂತೆ ಡ್ರಾಮಾ ಮಾಡಿದ್ದ ಅವಿನಾಶ್​​, ಹೃದಯಾಘಾತದಿಂದ ಕಿರಣಾ ಮೃತಪಟ್ಟಿರೋದಾಗಿ ಎಲ್ಲರನ್ನ ನಂಬಿಸಿದ್ದ. ಆದ್ರೆ ಮೃತದೇಹದ ಸ್ನಾನ ಮಾಡಿಸುವ ವೇಳೆ ಅಸಲೀ ಸತ್ಯ ರಿವೀಲ್​​ ಆಗಿದೆ.

ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ ಅನ್ಯೋನ್ಯವಾಗಿದ್ದು, ಇಬ್ಬರು ಮುದ್ದಾದ ಮಕ್ಕಳು ಕೂಡ ಇದಕ್ಕೆ ಸಾಕ್ಷಿಯಾಗಿದ್ದರು. ಆದರೆ, ಕೆಲ ತಿಂಗಳುಗಳಿಂದ ಅವಿನಾಶ್​​ ಮನಸ್ಸಿನಲ್ಲಿ ಪತ್ನಿಯ ಬಗ್ಗೆ ಸಂಶಯ ಮೂಡಿದೆ. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ ಆಗುತ್ತಿತ್ತು. ಅಂಗಡಿ ಅಂದಮೇಲೆ ಜನ ಬರೋದು ಹೋಗೋದು ಸಾಮಾನ್ಯ. ಆದರೆ ಇದನ್ನೇ ದೊಡ್ಡದು ಮಾಡಿ ಅವಿನಾಶ್​​ ಜಗಳವಾಡುತ್ತಿದ್ದ. ಎರಡು ದಿನ ಹಿಂದೆ ಇದೇ ವಿಚಾರಕ್ಕೆ ಪತ್ನಿಯ ಮೇಲೆ ಹಲ್ಲೆ ಕೂಡ ಮಾಡಿದ್ದ. ಈ ವೇಳೆ ಅಲ್ಲಿಗೆ ಬಂದ ಕುಟುಂಬದ ಹಿರಿಯರು ದಂಪತಿ ಸಮಾಧಾನ ಮಾಡಿ ಹೋಗಿದ್ರು. ಹಿರಿಯರು ಹೋದ ಬಳಿಕ ಮೊನ್ನೆ ಮಧ್ಯರಾತ್ರಿ ಕಿರಣಾಳ ಮೇಲೆ ಪತಿ ತೀವ್ರವಾಗಿ ಹಲ್ಲೆ ಮಾಡಿದ್ದು, ಈ ವೇಳೆ ಆಕೆ ಪ್ರಾಣ ಬಿಟ್ಟಿದ್ದಾಳೆ.

 

ಆಕೆ ಸಾಯುತ್ತಿದ್ದಂತೆ ಮೃತ ದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದ ಅವಿನಾಶ್​​, ಬಳಿಕ ಮತ್ತೆ ಊರಿಗೆ ಶವ ತಂದು ಪತ್ನಿ ಹೃದಯಾಘಾತದಿಂದ ಸತ್ತಿದ್ದಾಳೆ ಎಂದು ಬಿಂಬಿಸಿದ್ದಾನೆ. ಈ ವೇಳೆ ಮಹಿಳೆಯರು ಶವಕ್ಕೆ ಸ್ನಾನ ಮಾಡಿಸಬೇಕು ಅಂತಾ ಬಟ್ಟೆ ತೆಗೆದಾಗ ಪಾಪಿ ಗಂಡನ ಕ್ರೌರ್ಯ ಬಯಲಾಗಿದೆ. ಕಿರಣಾ ಮೈ ತುಂಬ ಬಾಸುಂಡೆ ಬಂದಿದ್ದು, ಕಪ್ಪು ಕಲೆ ಕಂಡು ಮಹಿಳೆಯರು ಶಾಕ್​​ ಆಗಿದ್ದಾರೆ. ಬಳಿಕ ಗಂಡನೇ ಹೊಡೆದು ಪತ್ನಿಯನ್ನು ಕೊಂದಿದ್ದಾನೆ ಎಂದು ನಂದಗಡ ಠಾಣೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.

ಆರೋಪಿ ಪತಿಯನ್ನು ಬಂಧಿಸಲಾಗಿದ್ದು, ದಂಪತಿಯ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

Ads on article

Advertise in articles 1

advertising articles 2

Advertise under the article