ಮಂಗಳೂರು :ನಾಗುರಿ ನಿವಾಸಿ, ಇನ್‌ಸ್ಟಾಗ್ರಾಮ್ ಖ್ಯಾತಿಯ ಆಶಾ ಪಂಡಿತ್ ಇನ್ನಿಲ್ಲ...!!!

ಮಂಗಳೂರು :ನಾಗುರಿ ನಿವಾಸಿ, ಇನ್‌ಸ್ಟಾಗ್ರಾಮ್ ಖ್ಯಾತಿಯ ಆಶಾ ಪಂಡಿತ್ ಇನ್ನಿಲ್ಲ...!!!

ಮಂಗಳೂರು: ಜನಪ್ರಿಯ ಇನ್‌ಸ್ಟಾಗ್ರಾಮ್ ಖ್ಯಾತಿಯ ಹಾಗೂ ತನ್ನ ವಿಭಿನ್ನ ಶೈಲಿಯ ಬೈಗುಳಗಳಿಂದಲೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಆಶಾ ಪಂಡಿತ್ (ನಾಗುರಿ) ಅವರು ಇಂದು ನಸುಕಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಿನ್ನೆ ರಾತ್ರಿ ಆಶಾ ಅವರಿಗೆ ವಾಂತಿಯಾಗಿದ್ದು, ತೀವ್ರ ಅಸ್ವಸ್ಥಗೊಂಡಿದ್ದರು.ಇಂದು ನಸುಕಿನ ಜಾವ ಹೃದಯಾಘಾತ ಸಂಭವಿಸಿ ಮನೆಯ ಅಂಗಳದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.

ಆಶಾ ಪಂಡಿತ್ ಯಾರು?

ಸೋಷಿಯಲ್ ಮೀಡಿಯಾ ಹವಾ: ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರ-ವಿಚಿತ್ರ ಬೈಗುಳಗಳ ಮೂಲಕವೇ ಕರ್ನಾಟಕದಾದ್ಯಂತ ಭಾರಿ ಸಂಚಲನ ಮೂಡಿಸಿದ್ದರು.ಮಂಗಳೂರಿನ ಪಡೀಲ್ ಎಂಬಲ್ಲಿ ಸಣ್ಣ ಗೂಡಂಗಡಿಯನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದರು.ಇವರ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದ್ದವು ಹಾಗೂ ಅಭಿಮಾನಿಗಳು ಇವರನ್ನು ಪ್ರೀತಿಯಿಂದ "ಆಶಾ ಅಕ್ಕ" ಎಂದೇ ಕರೆಯುತ್ತಿದ್ದರು.

ಮಂಗಳೂರಿನ ಸ್ಥಳೀಯ ಪ್ರತಿಭೆಗಳಲ್ಲಿ ಒಬ್ಬರಾಗಿದ್ದ ಇವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Ads on article

Advertise in articles 1

advertising articles 2

Advertise under the article