ಮಂಗಳೂರು :ಕಾವೂರು ಗ್ರಾಮದ ಮಂಜಲಕಟ್ಟೆಯಲ್ಲಿ ದೊಂಪದ ಬಲಿ ಉತ್ಸವ; ಜುಮಾದಿ ಬಂಟ ದೈವಗಳಿಗೆ ಶ್ರೀಮತಿ ಶಕಿಲ ಮತ್ತು ಶ್ರೀ ಸುಬ್ಬಯ್ಯ ಶೆಟ್ಟಿ ದಂಪತಿಗಳಿಂದ ಬೆಳ್ಳಿ ಅಣಿಗಳ ಸಮರ್ಪಣೆ, ಸನ್ಮಾನ...!!!
Tuesday, January 27, 2026
ಮಂಗಳೂರು:ಕಾವೂರು ಗ್ರಾಮದ ಮಂಜಲಕಟ್ಟೆಯಲ್ಲಿ ಜುಮಾದಿ ಬಂಟ, ಜಾರಂದಾಯ ಬಂಟ ದೈವಗಳ ವರ್ಷಾವಧಿ ಸೇವೆ ಮಂಜಲಕಟ್ಟೆ ದೊಂಪದ ಬಲಿ, ಅಣಿಗಳ ಸಮರ್ಪಣೆ, ಸನ್ಮಾನ ಶನಿವಾರ ನಡೆಯಿತು. ಶಿಲ್ಪಿ ಮಾನಂಪಾಡಿ ದಾಮೋದರ ಆಚಾರ್ಯ, ದೈವನರ್ತಕ ಉಮೇಶ ಪಂಬದ ಗಂಧಕಾಡು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಟಿ.ಸುಬ್ಬಯ್ಯ ಶೆಟ್ಟಿ ಮಾತನಾಡಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಆರ್.ಭಂಡಾರಿ, ಶಕೀಲಾ ಶೆಟ್ಟಿ, ಕೆನರಾ ಜ್ಯುವೆಲರ್ಸ್ ಮಾಲಕ ಧನಂಜಯ್ ಪಾಲ್ಕೆ, ಸುಧಾಕರ ಶೆಟ್ಟಿ ಕಾವೂರಗುತ್ತು, ಪ್ರಭಾಕರ ಶೆಟ್ಟಿ, ಆಶಾಜ್ಯೋತಿ ರೈ, ಕೃಪಾನಾಥ ಆರ್.ಭಂಡಾರಿ, ದೀಪಕ್ ಪೂಜಾರಿ, ಭರತ್ ಅಡಪ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಧರ್ ಮಣಿಯಾಣಿ, ಉಮೇಶ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪುರುಷೋತ್ತಮ ಎನ್. ಪೂಜಾರಿ ವಂದಿಸಿ, ದೇವಿಕಾ ಸುಳ್ಯ ಸ್ವಾಗತಿಸಿ ನಿರೂಪಿಸಿದರು.
ಬೆಳಿಗ್ಗೆ ಭಂಡಾರ ಏರಿ ಮೈಸಂದಾಯ ನೇಮ ಜರುಗಿತು. ಸಂಜೆ ಜುಮಾದಿ ಬಂಟ ದೈವಗಳಿಗೆ ಶಕಿಲ ಮತ್ತು ಟಿ.ಸುಬ್ಬಯ ಶೆಟ್ಟಿ ಅವರ ಕೊಡುಗೆಯಾದ ಬೆಳ್ಳಿಯ ಅಣಿಗಳನ್ನು ಕಾವೂರುಗುತ್ತುವಿನಿಂದ ಮೆರವ ಣಿಗೆ ಮೂಲಕ ಮಂಜಲಕಟ್ಟೆಗೆ ತಂದು ಸೈವಗಳಿಗೆ ಸಮರ್ಪಿಸಲಾಯಿತು. ಗಗ್ಗರ ಸೇವೆ, ಹೋಮ, ದೈವ ದರ್ಶನ, ಜುಮಾದಿ ಬಂಟ ದೈವಗಳ ನೇಮ ಜರುಗಿತು.
ಇಂದು ನೇಮೋತ್ಸವ:
ಕ್ಷೇತ್ರದಲ್ಲಿ ಜ.25ರಂದು ಸಂಜೆ 5ರಿಂದ ಗಗ್ಗರ ಸೇವೆ, 6.30ಕ್ಕೆ ಹೋಮ, ರಾತ್ರಿ 7ಕ್ಕೆ ದೈವ ದರ್ಶನ, 8 ರಿಂದ ಜಾರಂದಾಯ ಬಂಟ ದೈವದ ನೇಮ ನಡೆಯಲಿದೆ.