ಮಂಗಳೂರು :ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಗ್ ಖರೀದಿಸಿ ತಲಪಾಡಿಯಲ್ಲಿ ಮಾರಾಟಕ್ಕೆ ಯತ್ನ ; ಉಳ್ಳಾಲದ ಮೂವರ ಬಂಧನ, 12 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ...!!!

ಮಂಗಳೂರು :ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಗ್ ಖರೀದಿಸಿ ತಲಪಾಡಿಯಲ್ಲಿ ಮಾರಾಟಕ್ಕೆ ಯತ್ನ ; ಉಳ್ಳಾಲದ ಮೂವರ ಬಂಧನ, 12 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ...!!!

ಮಂಗಳೂರು: ಬೆಂಗಳೂರು ನಗರದಿಂದ ಎಂಡಿಎಂಎ ಡ್ರಗ್ಸ್ ಖರೀದಿಸಿ ತಂದು ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಳ್ಳಾಲ ತಾಲೂಕಿನ ತಲಪಾಡಿ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 118 ಗ್ರಾಮ್ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ‌

ಫೆ.12 ರಂದು ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಕಾರನ್ನು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿದ್ದಾರೆ.‌

ಉಳ್ಳಾಲ ಬಸ್ತಿ ಪಡ್ಪು ನಿವಾಸಿ ಮುಸ್ತಫಾ ಸೀದಿಯಬ್ಬ(34), ಉಳ್ಳಾಲ ಕೋಡಿ ನಿವಾಸಿ ಮೈಯದ್ದಿ (28), ಮುಕ್ಕಚೇರಿಯ ಮೊಹಮ್ಮದ್ ಶಿಫಾನ್ (28) ಬಂಧಿತರು. ಆರೋಪಿಗಳ ವಶದಿಂದ ರೂ.11,90,000 ಮೌಲ್ಯದ 118.13 ಗ್ರಾಂ ತೂಕದ ನಿಷೇದಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್-4, KA-19-MQ-3420 ನಂಬ್ರದ ಬೂದು ಬಣ್ಣದ ಸ್ವಿಪ್ಟ್ ಕಾರು ಸಹಿತ ಒಟ್ಟು ರೂ. 17,95,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆರೋಪಿ ಮುಸ್ತಫಾ ಸೀದಿಯಬ್ಬ ಎಂಬಾತನ ಮೇಲೆ ಈ ಹಿಂದೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ಮತ್ತು ಮೈಯದ್ದಿ ಎಂಬಾತನ ಮೇಲೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಮಾದಕವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

Ads on article

Advertise in articles 1

advertising articles 2

Advertise under the article