ಆಂಧ್ರಪ್ರದೇಶ :3 ವರ್ಷದ ಮಗುವಿನ ಮೇಲೆ ತಂದೆಯ ಸ್ನೇಹಿತನಿಂದಲೇ ಅತ್ಯಾ*ಚಾರ...!!!

ಆಂಧ್ರಪ್ರದೇಶ :3 ವರ್ಷದ ಮಗುವಿನ ಮೇಲೆ ತಂದೆಯ ಸ್ನೇಹಿತನಿಂದಲೇ ಅತ್ಯಾ*ಚಾರ...!!!

 ಆಂಧ್ರ ಪ್ರದೇಶ :3 ವರ್ಷದ ಹೆಣ್ಣುಮಗುವಿನ ಮೇಲೆ ಆಕೆಯ ತಂದೆಯ ಸ್ನೇಹಿತನೇ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

ಆಕೆಯ ತಂದೆಯನ್ನು ಭೇಟಿಯಾಗುವ ನೆಪದಲ್ಲಿ ಆತ ಮನೆಗೆ ಬಂದಿದ್ದ. ಆದರೆ, ಆಕೆಯ ಅಪ್ಪ ಮನೆಯಲ್ಲಿರಲಿಲ್ಲ. ಅಮ್ಮ ಒಳಗೆ ಅಡುಗೆ ಮಾಡುತ್ತಿದ್ದರು. ಈ ವೇಳೆ ಆ ಆರೋಪಿಯು ಮಗುವಿಗೆ ಬಿಸ್ಕತ್ ಕೊಡಿಸುತ್ತೇನೆ ಅಂಗಡಿಗೆ ಕರೆದುಕೊಂಡು ಹೋಗುವಾಗ ಮಧ್ಯದಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಇದಾದ ನಂತರ ಏನೂ ಆಗಿಯೇ ಇಲ್ಲವೆಂಬಂತೆ ಅವನು ಅವಳನ್ನು ವಾಪಾಸ್ ಕರೆದುಕೊಂಡು ಬಂದು ಅವಳ ಮನೆಯಲ್ಲಿ ಬಿಟ್ಟು ಓಡಿಹೋಗಿದ್ದಾನೆ. ಮನೆಯಲ್ಲಿ ಆ ಮಗು ನೋವಿನಿಂದ ನಿರಂತರವಾಗಿ ಅಳುತ್ತಲೇ ಇದ್ದುದರಿಂದ ಆ ಮಗುವಿನ ತಾಯಿ ಅವಳನ್ನು ಪರೀಕ್ಷಿಸಿದಾಗ ರಕ್ತದ ಕಲೆಗಳು ಕಂಡುಬಂದವು.

ಏನಾಯಿತೆಂದು ಕೇಳಿದಾಗ ಆಕೆ ನಡೆದ ವಿಚಾರ ಹೇಳಿದಳು. ಆರೋಪಿಯ ವಿರುದ್ಧ ಬಿಎನ್‌ಎಸ್ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article