ಬೆಂಗಳೂರು :ಈ ಮಗು ನನ್ನದಲ್ಲ ಎಂದು ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡ್ತಿದ್ದ ಪತಿ...!!

ಬೆಂಗಳೂರು : ಗರ್ಭಿಣಿ ಮಹಿಳೆಯ ಶೀಲ ಶಂಕಿಸಿ ಪತಿಯೇ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮೊದಲ ಮಗುವಿಗಾಗಿ ಮಹಿಳೆ ಗರ್ಭಿಣಿಯಾದಾಗಿನಿಂದಲೂ ಗಂಡನಿಗೆ ಹೆಂಡತಿ ಮೇಲೆಯೇ ಅನುಮಾನ ಮೂಡಿದೆಯಂತೆ. ಮಗು ನನ್ನದಲ್ಲ ಎಂದು ಪತಿ ಅನುರಾಗ್ ಪಾಂಡೆ ಹಲ್ಲೆ ಮಾಡಿದ್ದು, ಅತ್ತೆ ರಾಣಿ ಹಾಗೂ ಮಾವ ರಾಮಪ್ರಸಾದ್ ವಿರುದ್ದ ದೂರು ದಾಖಲಾಗಿದೆ.
ಈ ಸಂಬಂಧ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂತ್ರಸ್ತೆ ತನ್ನ ಪತಿ ಅನುರಾಗ್ ಪಾಂಡೆ ಹಾಗೂ ಅತ್ತೆ ಮಾವನ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ.
ಅನುರಾಗ್ ಪಾಂಡೆ ದಂಪತಿ ಉತ್ತರ ಪ್ರದೇಶದ ಬನರಾಸ್ ನಿವಾಸಿಗಳಾಗಿದ್ದಾರೆ. ಮದುವೆಯಾದಾಗಿನಿಂದಲೂ ಇಬ್ಬರು ಚೆನ್ನಾಗಿಯೇ ಇದ್ದೆವು. 8 ವರ್ಷಗಳ ಹಿಂದೆಯೇ ಮದುವೆಯಾಗಿ ಪತ್ನಿ ಜ್ಯೋತಿಯನ್ನ ಅನುರಾಗ್ ಪಾಂಡೆ ಬೆಂಗಳೂರಿಗೆ ಕರೆತಂದಿದ್ರು. ಕೆಲ ವರ್ಷಗಳಿಂದ ದಂಪತಿಗೆ ಮಕ್ಕಳಿರಲಿಲ್ಲ. ಮಹಿಳೆ ಮೊದಲ ಮಗುವಿಗೆ ಗರ್ಭಿಣಿ ಆದ ಬಳಿಕ ಗಂಡನಿಗೆ ಅನುಮಾನ ಮೂಡಿದೆ ಎನ್ನಲಾಗ್ತಿದೆ.
ಈ ಮಗು ನನ್ನದಲ್ಲ ಎಂದು ಪತ್ನಿಯ ಶೀಲ ಶಂಕಿಸಿ ನಿತ್ಯ ಕಿರುಕುಳ ನೀಡ್ತಿದ್ದ ಪತಿ ಅನುರಾಗ್ ಪಾಂಡೆ ವಿರುದ್ಧ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ಅನುರಾಗ್ ಪಾಂಡೆ, ಅತ್ತೆ ರಾಣಿ ಹಾಗೂ ಮಾವ ರಾಮಪ್ರಸಾದ್ ವಿರುದ್ದ ದೂರು ಹಲ್ಲೆ ಹಾಗೂ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಎರಡನೇ ಮಗುವಿಗೆ ಜನ್ಮ ನೀಡಿದ ನಾಲ್ಕೇ ದಿನಕ್ಕೆ ಮನೆಯಲ್ಲಿ ಪತ್ನಿ, ಅತ್ತೆ, ಮಾವನಿಂದ ದೈಹಿಕ, ಮಾನಸಿಕ ಹಿಂಸೆ ಎಂದು ಆರೋಪ ಕೇಳಿ ಬಂದಿದೆ. ಮಹಿಳೆ ದೂರಿನನ್ವಯ ದಕ್ಷಿಣ ಮಹಿಳಾ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.