ಗುಜರಾತ್ :ಸ್ವಂತ ಮಗಳು ಅಣ್ಣನ ಮಗಳು ಇಬ್ಬರನ್ನು 7 ವರ್ಷ ನಿರಂತರ ಅತ್ಯಾ*ಚಾರ ಎಸಗಿದ ತಂದೆ...!!

ಗುಜರಾತ್: ಅಣ್ಣನ ಮಗಳನ್ನು ಸತತ 7 ವರ್ಷ ಹಾಗೂ ತನ್ನ ಮಗಳ ಮೇಲೆ ಸತತ 4 ವರ್ಷಗಳ ಅತ್ಯಾಚಾರ ಎಸಗಿದ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ನೀಚ ತಂದೆ ಅರೆಸ್ಟ್ ಆಗಿದ್ದಾನೆ. ಈ ಕಿರುಕಳ ಬೆಳಕಿಗೆ ಬಂದಿದ್ದು ಮತ್ತೊಂದು ದುರಂತದ ಮೂಲಕ.
ಈತನ ಸಹೋದರ ಮಗಳನ್ನು 10 ವರ್ಷ ವಯಸ್ಸಿದ್ದಾಗ ನೋಡಿಕೊಳ್ಳಲು ಸಮಸ್ಯೆಯಾಗುತ್ತಿದ್ದ ಕಾರಣ ಈ ನೀಚನ ಮನೆಯಲ್ಲಿ ಬಿಟ್ಟಿದ್ದಾರೆ. ನೀಚನ ಸಹೋದರ ಮೃತಪಟ್ಟಿದ್ದ. ಹೀಗಾಗಿ ಸಹೋದರನ ಪತ್ನಿ ಜೀವನ ಸಾಗಿಸಲು ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ ನೀಚನ ಮಗಳ ಜೊತೆ ಸಹೋದರನ ಮಗಳು ಬೆಳೆಯುತ್ತಾಳೆ. ಸುರಕ್ಷಿತವಾಗಿರುತ್ತಾಳೆ ಎಂದು ಮನೆಯಲ್ಲಿ ಬಿಟ್ಟಿದ್ದಾಳೆ. ಮಗಳಂತೆ ನೋಡಿಕೊಳ್ಳುತ್ತೇನೆ ಎಂದು ಸಹೋದರನ ಪತ್ನಿಗೆ ಭರವಸೆ ನೀಡಿದ್ದ.
ಕೆಲವೇ ದಿನಗಳಲ್ಲಿ ಈ ಪಾಪಿ ತಂದೆ ಕೆಲಸ ಶುರುಮಾಡಿದ್ದ. ತನ್ನ ಮಗಳು ಹಾಗೂ ಅಣ್ಣನ ಮಗಳು ಇಬ್ಬರು ಜೊತೆಯಾಗಿ ಒಂದೇ ಕೋಣೆಯಲ್ಲಿ ಮಲಗುತ್ತಿದ್ದರು. ತನ್ನ ಮಗಳು ಮಲಗುತ್ತಿದ್ದಂತೆ ಮೆಲ್ಲನೆ ಕೋಣೆಗೆ ಬರುತ್ತಿದ್ದ ಈ ನೀಚ ತಂದೆ, ಅಣ್ಣನ ಮಗಳಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸುತ್ತಿದ್ದ. ಬಳಿಕೆ ಆಕೆಯನ್ನು ದೈಹಿಕವಾಗಿ ಬಳಸಿಕೊಳ್ಳಲು ಆರಂಭಿಸಿದ್ದ. ಇದು ಸತತವಾಗಿ ಕಳೆದ 7 ವರ್ಷಗಳಿಂದ ಮುಂದುವರಿದಿತ್ತು.
ಅಣ್ಣನ ಮಗಳನ್ನು ನಿರಂತರವಾಗಿ ದೈಹಿಕವಾಗಿ ಬಳಸಿದ ಈ ನೀಚ ತಂದೆ, ಬಳಿಕ ತನ್ನ ಸ್ವಂತ ಮಗಳನ್ನೇ ಬಳಸಿಕೊಳ್ಳಲು ಮುಂದಾಗಿದ್ದ. ಕಳೆದ ನಾಲ್ಕು ವರ್ಷಗಳಿಂದ ತನ್ನ ಸ್ವಂತ ಮಗಳನ್ನೇ ಬಳಸಿಕೊಳ್ಳುತ್ತಿದ್ದ. ಅಣ್ಣನ ಮಗಳಿಗೆ ಇದೀಗ 17 ವರ್ಷ.
ತಂದೆಯ ಕಿರುಕುಳ ತಾಳಲಾರದೆ ಸ್ವಂತ ಮಗಳು ಮನೆ ಬಿಟ್ಟು ಓಡಿ ಹೋಗಿದ್ದಳು. ಮಗಳು ಕಾಣುತ್ತಿಲ್ಲ ಎಂದು ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಹೀಗಾಗಿ ಪೊಲೀಸರು ಈಕೆಯನ್ನು ಪತ್ತೆ ಹಚ್ಚಿತ್ತು.
ಮನೆಗೆ ಬಿಡಲು ಮುಂದಾಗ, ಮನೆಗೆ ವಾಪಸ್ ಕಳುಹಿಸಬೇಡಿ ಎಂದು ಗಳಗಳನೇ ಅತ್ತಿದ್ದಾಳೆ. ಅನುಮಾನಗೊಂಡ ಪೊಲೀಸರು ಹೆಣ್ಣುಮಗುವನ್ನು ಕೌನ್ಸಿಲಿಂಗ್ ಕಳುಹಿಸಿದ್ದಾರೆ. ಈ ವೇಳೆ ಹೆಣ್ಣು ಮಗು ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಕಿರುಕುಳ ಕುರಿತು ಬಾಯ್ಬಿಟ್ಟಿದ್ದಾರೆ. ಅಣ್ಣನ ಮಗಳನ್ನೂ ಇದೇ ರೀತಿ ಪೀಡಿಸಿದ್ದಾರೆ ಎಂದು ಎಲ್ಲಾ ಘಟನೆ ಹೇಳಿದ್ದಾರೆ. ಇದೀಗ 45 ವರ್ಷದ ಎಲೆಕ್ಟ್ರಿಶಿಯನ್ ಪೊಲೀಸರು ಬಂಧಿಸಿದ್ದಾರೆ.