ಅಮೇರಿಕಾ:ಜಗತ್ತಿನ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್...!!800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ...!!!

ಅಮೇರಿಕಾ:ಜಗತ್ತಿನ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್...!!800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ...!!!

ಅಮೇರಿಕಾ:ದುಡ್ಡು ಅಂದ್ರೆ ಎಲಾನ್ ಮಸ್ಕ್, ಎಲಾನ್ ಮಸ್ಕ್ ಅಂದ್ರೆ ದುಡ್ಡು ಅನ್ನೋ ಹಾಗಾಗಿದೆ. ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಅವರ ಆಸ್ತಿ ಈಗ ಆಲ್ ಟೈಮ್ ಹೈ ತಲುಪಿದೆ.

ಅವರ ಆಸ್ತಿ ಮೌಲ್ಯ 800 ಬಿಲಿಯನ್ ಡಾಲರ್ ದಾಟಿದೆ. 800 ಬಿಲಿಯನ್ ಎಂದರೆ 72 ಲಕ್ಷ ಕೋಟಿ ರೂ. ಈ 800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ ಇಲಾನ್ ಮಸ್ಕ್.

ಎಕ್ಸ್​ಎಐ ಅನ್ನು ಖರೀದಿಸಿದ ಬಳಿಕ ಸ್ಪೇಸ್​ಎಕ್ಸ್​ನ ಮೌಲ್ಯ ಬಹಳ ಹೆಚ್ಚಾಗಿದೆ. ಈ ಡೀಲ್​ಗೆ ಮುನ್ನ ಸ್ಪೇಸ್​ಎಕ್ಸ್ ಮೌಲ್ಯ 336 ಬಿಲಿಯನ್ ಡಾಲರ್ ಇತ್ತು. ಎಕ್ಸ್​ಎಐ ಮೌಲ್ಯ 122 ಬಿಲಿಯನ್ ಡಾಲರ್ ಇತ್ತು. ಒಪ್ಪಂದದ ಬಳಿಕ ಸ್ಪೇಸ್​ಎಕ್ಸ್​ನ ಮೌಲ್ಯ 542 ಬಿಲಿಯನ್ ಡಾಲರ್​ಗೆ ಏರಿದೆ. ಇದರಲ್ಲಿ ಇಲಾನ್ ಮಸ್ಕ್ ಅವರ ಷೇರುಪಾಲು ಶೇ. 43ರಷ್ಟಿದ್ದು, ಅದರ ಮೌಲ್ಯ 542 ಬಿಲಿಯನ್ ಡಾಲರ್ ಇದೆ. ಇದರ ಜೊತೆಗೆ ಇಲಾನ್ ಮಸ್ಕ್ ಅವರು ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾಲಕತ್ವ ಹೊಂದಿದ್ದಾರೆ.

ಇಲಾನ್ ಮಸ್ಕ್ ಅವರ ಬಹುತೇಕ ಆಸ್ತಿಗಳೆಲ್ಲವೂ ಷೇರುಗಳ ಸ್ವರೂಪದಲ್ಲೇ ಇವೆ. ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರುದಾರಿಕೆ ಇರುವುದರ ಜೊತೆಗೆ 124 ಬಿಲಿಯನ್ ಡಾಲರ್ ಮೌಲ್ಯದ ಸ್ಟಾಕ್ ಆಪ್ಷನ್ಸ್ ಕೂಡ ಮಸ್ಕ್ ಅವರಿಗಿದೆ. ಟೆಸ್ಲಾದ ಬ್ಯುಸಿನೆಸ್ ಗುರಿಯನ್ನು ಈಡೇರಿಸಿದರೆ ಈ ಸ್ಟಾಕ್ ಆಪ್ಷನ್​ಗಳು ಷೇರುಗಳಾಗಿ ಪರಿವರ್ತನೆ ಆಗುತ್ತವೆ. ಆಗ ಮಸ್ಕ್ ಅವರ ಶ್ರೀಮಂತಿಕೆಯ ಮೌಲ್ಯ 1 ಟ್ರಿಲಿಯನ್ ಡಾಲರ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತವೆ.

Ads on article

Advertise in articles 1

advertising articles 2

Advertise under the article