ಮಧ್ಯ ಪ್ರದೇಶ :ಗೆಳೆಯನ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ!!!..

ಮಧ್ಯ ಪ್ರದೇಶ :24 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಕ್ಲಾಸ್‌ಮೇಟ್‌ನ ಬಾಡಿಗೆ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಆಕೆಯ ಶವ ಸಂಪೂರ್ಣ ನಗ್ನವಾಗಿದ್ದು, ಕೊಳೆತ ಸ್ಥಿತಿಯಲ್ಲಿತ್ತು. ಈ ಪ್ರಕರಣದ ಪ್ರಮುಖ ಆರೋಪಿ, ಆಕೆಯ ಸಹಪಾಠಿ ಪಿಯೂಷ್ ಧನೋಟಿಯಾ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ನಿನ್ನೆ ಪಿಯೂಷ್‌ನ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದವರು ದೂರು ನೀಡಿದ್ದರು. ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ, 24 ವರ್ಷದ ಯುವತಿಯ ಕೊಳೆತ ಶವ ಪತ್ತೆಯಾಗಿದೆ. ಶವವನ್ನು ಗುರುತಿಸಲಾಗದಷ್ಟು ಕೊಳೆತಿದ್ದರಿಂದ, ಆಕೆಯ ತಂದೆ ಕಾಲಿನಲ್ಲಿದ್ದ ಸಾಕ್ಸ್ ನೋಡಿ ಮಗಳನ್ನು ಗುರುತಿಸಿದ್ದಾರೆ.
ಇಂದೋರ್‌ನ ಸನ್ವರ್ ರಸ್ತೆಯಲ್ಲಿರುವ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಎಂಬಿಎ ಓದುತ್ತಿದ್ದ ಈ ಯುವತಿ ಮಂಗಳವಾರ ನಾಪತ್ತೆಯಾಗಿದ್ದಳು. ಜನನ ಪ್ರಮಾಣಪತ್ರದ ಕೆಲಸಕ್ಕೆಂದು ತಂದೆಯ ಜೊತೆ ಮನೆಯಿಂದ ಹೊರಗೆ ಹೋಗಿದ್ದಳು. ಸಂಜೆ, ತನ್ನ ಕ್ಲಾಸ್‌ಮೇಟ್ ಪಿಯೂಷ್ ಜೊತೆ ಬರ್ತ್‌ಡೇ ಪಾರ್ಟಿಗೆ ಹೋಗುತ್ತಿದ್ದೇನೆ, ರಾತ್ರಿ 11 ಗಂಟೆಗೆ ವಾಪಸ್ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದಳು. ಆದರೆ ಆಕೆ ಮನೆಗೆ ಹಿಂತಿರುಗಲೇ ಇಲ್ಲ.
ಅದೇ ರಾತ್ರಿ, ಆಕೆಯ ಫೋನ್‌ನಿಂದಲೇ ಕಾಲೇಜು ವಾಟ್ಸಾಪ್ ಗ್ರೂಪ್‌ಗೆ ಒಂದು ವಿಡಿಯೋ ಪೋಸ್ಟ್ ಆಗಿತ್ತು. ಅದರಲ್ಲಿ ಆ ಯುವತಿ ಮತ್ತು ಇನ್ನೊಬ್ಬ ಯುವಕ ಲೈಂ*ಗಿಕ ಕ್ರಿಯೆಯಲ್ಲಿ ತೊಡಗಿದ್ದರು. ವಿಡಿಯೋದಲ್ಲಿ ಯುವತಿಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು, ಆದರೆ ಯುವಕನ ಮುಖವನ್ನು ಮರೆಮಾಚಲಾಗಿತ್ತು.
ಈ ವಿಡಿಯೋವನ್ನು ಗಮನಿಸಿದ ಕಾಲೇಜು ಆಡಳಿತ ಮಂಡಳಿ, ಅದನ್ನು ಗ್ರೂಪ್‌ನಿಂದ ಡಿಲೀಟ್ ಮಾಡಿದೆ. ಬುಧವಾರ ಯುವತಿಯ ತಂದೆಗೆ ಕರೆ ಮಾಡಿ ವಿಡಿಯೋ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೆ, ಯುವತಿ ಮತ್ತು ಪಿಯೂಷ್ ಇಬ್ಬರ ಫೋನ್‌ಗಳೂ ಸ್ವಿಚ್ ಆಫ್ ಆಗಿರುವ ವಿಚಾರವನ್ನೂ ತಿಳಿಸಿದೆ. ತಕ್ಷಣ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ದೂರಿನ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲಿಲ್ಲ ಎಂದು ಕುಟುಂಬ ಆರೋಪಿಸಿದೆ. ದ್ವಾರಿಕಾಪುರಿ ಪ್ರದೇಶದ ಅಂಕಲ್ ಗಲಿಯಲ್ಲಿರುವ ಪಿಯೂಷ್ ಮನೆಗೆ ಒಬ್ಬ ಪೊಲೀಸ್ ಹೋಗಿದ್ದರೂ, ಮನೆಗೆ ಹೊರಗಿನಿಂದ ಬೀಗ ಹಾಕಿದ್ದನ್ನು ನೋಡಿ ವಾಪಸ್ ಬಂದಿದ್ದರು ಎನ್ನಲಾಗಿದೆ.