ನವದೆಹಲಿ :ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ, ಕರಾವಳಿ ಕಾರ್ಗೋ ಯೋಜನೆ, ಐಟಿ ಸಂಸ್ಥೆಗಳಿಗೆ ಟ್ಯಾಕ್ಸ್ ಫ್ರೀ, ಮದ್ಯ ಮತ್ತೆ ದುಬಾರಿ, ವಿದೇಶಿ ಔಷಧಿಗಳ ಬೆಲೆ ಇಳಿಕೆ, ಹೊಸ ತೆರಿಗೆ ನೀತಿ ಪ್ರಕಟ...!!!

ನವದೆಹಲಿ :ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ, ಕರಾವಳಿ ಕಾರ್ಗೋ ಯೋಜನೆ, ಐಟಿ ಸಂಸ್ಥೆಗಳಿಗೆ ಟ್ಯಾಕ್ಸ್ ಫ್ರೀ, ಮದ್ಯ ಮತ್ತೆ ದುಬಾರಿ, ವಿದೇಶಿ ಔಷಧಿಗಳ ಬೆಲೆ ಇಳಿಕೆ, ಹೊಸ ತೆರಿಗೆ ನೀತಿ ಪ್ರಕಟ...!!!

ನವದೆಹಲಿ: 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡನೆಯಾಗಿದ್ದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿತ್ತೀಯ ಚಟುವಟಿಕೆಗೆ ರಜೆ ಇರುವ ಭಾನುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ಒಂದು ವರ್ಷದ ಆಯವ್ಯಯದ ಲೆಕ್ಕ ಮಂಡಿಸಿದ್ದಾರೆ. ಅಭಿವೃದ್ಧಿಗೆ, ಉತ್ಪಾದನಾ ಚಟುವಟಿಕೆ, ಆರ್ಥಿಕತೆಗೆ ಉತ್ತೇಜನ ನೀಡಲು ಲೆಕ್ಕಪತ್ರ ಹಾಕಿದ್ದಾರೆ. 

ಬಜೆಟ್ ಮುಖ್ಯಾಂಶಗಳು 

  • ವಿದೇಶ ಯಾತ್ರೆ ಕೈಗೊಳ್ಳುವವರಿಗಾಗಿ ಈವರೆಗೂ ಇದ್ದ ಟಿಡಿಎಸ್ ಮೊತ್ತ ಶೇ 2ಕ್ಕೆ ಇಳಿಕೆ. ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್‌ ಕಡಿತ
  • ವಿತ್ತ ಸಚಿವೆ ಹೊಸ ತೆರಿಗೆ ನೀತಿಯನ್ನು ಘೋಷಿಸಿದ್ದು, ಭಾರತೀಯ ಸ್ತಿರಾಸ್ಥಿ ಮೇಲಿನ ತೆರಿಗೆ ಕಡಿತ ಮಾಡಿದ್ದಾರೆ. ಇದರೊಂದಿಗೆ ವಿದೇಶ ಯಾತ್ರೆಗಳ ಟಿಸಿಎಂಸ್ ಕಡಿತ, ಅಪಘಾತ ವಿಮೆಗೆ ಟಿಡಿಎಸ್ ಮುಕ್ತಿ.
  • ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲ. ಮಾ.31ರ ತನಕ ಪರಿಷ್ಕೃತ ತೆರಿಗೆ ಸಲ್ಲಿಸಲು ಅವಕಾಶ 
  • ಮೋಟಾರು ಅಪಘಾತ ಕ್ಲೇಮುಗಳಿಗೆ ತೆರಿಗೆ ವಿನಾಯಿತಿ,  ಬೆಂಗಳೂರು ಸೇರಿದಂತೆ ಏಳು ಹೈಸ್ಪೀಡ್‌ ರೈಲು ಯೋಜನೆ ಘೋಷಣೆ 
  • 2ನೇ ಮತ್ತು 3ನೇ ಹಂತದ ನಗರಗಳಿಗಾಗಿ ಎಂಎಸ್‌ಎಂಇಗಳಿಗಾಗಿ ಕಾರ್ಪೊರೇಟ್ ಮಿತ್ರ ಯೋಜನೆ ಘೋಷಣೆ
  • 13 ಕ್ಯಾನ್ಸರ್ ಔಷಧಿಗಳ ತೆರಿಗೆ ವಿನಾಯಿತಿ, ತಮಿಳುನಾಡು, ಕೇರಳ, ಮಧ್ಯ ಪ್ರದೇಶ ಮತ್ತು ಒಡಿಶಾದಲ್ಲಿ ಅಪೂರ್ವ ಖನಿಜಗಳ ಕಾರಿಡಾರ್ ಘೊಷಣೆ
  • ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ, ಖಾದಿ ಕೈಮಗ್ಗಗಳಿಗೆ ಉತ್ತೇಜನ.
  • ರಿಫಾರ್ಮ್‌ ಎಕ್ಸ್ಪ್ರೆಸ್ ಘೋಷಣೆ: ಉದ್ಯೋಗ ಸೃಷ್ಟಿ, ಉತ್ಪಾದನೆಗೆ ಉತ್ತೇಜನ, ಆರ್ಥಿಕ ಬೆಳವಣಿಗೆಗೆ ಉತ್ತೇಜನ
  • ಮೀಸಲು ವ್ಯಾಪಾರ ಕಾರಿಡಾರ್‌ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 20 ಹೊಸ ಜಲಮಾರ್ಗ ಆರಂಭ, ಹಡಗು ದುರಸ್ತಿ ಕೇಂದ್ರಗಳನ್ನು ವಾರಣಾಸಿ ಮತ್ತು ಪಟ್ನಾದಲ್ಲಿ ಸ್ಥಾಪಿಸುವ ಗುರಿ. ಕರಾವಳಿ ಕಾರ್ಗೋ ಉತ್ತೇಜನ ಯೋಜನೆಯನ್ನು ಒಳನಾಡು ಜಲಮಾರ್ಗ ಮತ್ತು ಕರಾವಳಿಯಲ್ಲೂ ಜಾರಿಗೆ 
  • ಸೆಮಿ ಕಂಡಕ್ಟರ್‌ ವಲಯಕ್ಕಾಗಿ ₹40,000 ಕೋಟಿ ಮೀಸಲು, ಸೇವಾ ವಲಯದಲ್ಲಿ ಎಐ ಪರಿಣಾಮ ಅಧ್ಯಯನಕ್ಕೆ ಉನ್ನತ ಮಟ್ಟದ ಸ್ಥಾಯಿ ಸಮಿತಿ ಘೋಷಣೆ, ಶೈಕ್ಷಣಿಕ್, ಔದ್ಯೋಗಿಕ ಮತ್ತು ಉದ್ಯಮದಲ್ಲಿ ಪರಿಣಾಮ ಕುರಿತ ಅಧ್ಯಯನ 
  • ಅನಿವಾಸಿ ಭಾರತೀಯರು ಪೋರ್ಟ್‌ ಪೋಲಿಯೊ ಹೂಡಿಕೆ ಯೋಜನೆಯಡಿ ಭಾರತದ ಷೇರುಗಳಲ್ಲಿ ಹೂಡಿಕೆಗೆ ಅವಕಾಶ
  • ಕರ್ನಾಟಕ ಮತ್ತು ಕೇರಳವನ್ನು ಒಳಗೊಂಡು ಕರಾವಳಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ತೆಂಗು, ಗಂಧ, ಗೇರು ಬೆಳೆಗೆ ಉತ್ತೇಜನ
  • ಕ್ಯಾನ್ಸರ್‌ ಮತ್ತು ಶುಗರ್ ಕಾಯಿಲೆಗಳು ಸೇರಿದಂತೆ ಇತರ ರೋಗಿಗಳು ಬಳಸುವ, ವಿದೇಶಗಳಿಂದ ಆಮದಾಗುವ 17 ಔಷಧಿಗಳ ಬೆಲೆ ಇಳಿಕೆ, ಏಳು ಅಪರೂಪದ ಕಾಯಿಲೆಗಳ ಔಷಧಿ ಬೆಲೆ ಇಳಿಕೆ

ಯಾವೆಲ್ಲ ವಸ್ತುಗಳ ಬೆಲೆ ಇಳಿಕೆ :

  • * ಸೆಣಬು ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆ.
  • * ಬೀಡಿ, ಪಾದರಕ್ಷೆಗಳ ದರ ಇಳಿಕೆ, ಲಿಥೀಯಂ ಬ್ಯಾಟರಿ ದರ ಇಳಿಕೆ
  • * ಸಿಎನ್‌ಜಿ ಬಯೋಗ್ಯಾಸ್ ದರ ಕಡಿಮೆ
  • * ಕ್ಯಾನ್ಸರ್‌ ಮತ್ತು ಶುಗರ್ ಕಾಯಿಲೆಗಳ ಇತರ 17 ಔಷಧಿಗಳ ಬೆಲೆ ಇಳಿಕೆ
  • * ದುಬಾರಿ ಬೆಲೆಯ ಔಷಧಿಗಳ ಆಮದು ಸುಂಕಕ್ಕೆ ವಿನಾಯಿತಿ. 

ಯಾವುದೆಲ್ಲ ದುಬಾರಿ ಆಗಿದೆ?

  • * ಮದ್ಯಗಳ ಮೇಲೆ ಕೇಂದ್ರ ಸರ್ಕಾರದಿಂದ ಸುಂಕ ಏರಿಕೆ. ಬಿಯರ್, ವಿಸ್ಕಿ, ರಮ್ ಸೇರಿದಂತೆ ವಿವಿಧ ಮದ್ಯದ ದರ ದುಬಾರಿ
  • * ಸಿಗರೇಟ್ ಮತ್ತು ಪಾನ್ ಮಸಾಲ ದರ ಹೆಚ್ಚಳ 
  • * ಸೋಲಾರ್ ಗ್ಯಾಸ್ ಬಳಕೆಯ ಉತ್ಪನ್ನಗಳ ತೆರಿಗೆ ಕಡಿತ. 
  • * ಬಯೋಗ್ಯಾಸ್ ಸಿಎನ್‌ಜಿಗಳ ಟ್ಯಾಕ್ಸ್‌ ವಿನಾಯಿತಿ

ಐಟಿ ಸಂಸ್ಥೆಗಳಿಗೆ ಪ್ರೋತ್ಸಾಹ- ಟ್ಯಾಕ್ಸ್ ಹಾಲಿಡೇ ಘೋಷಣೆ, ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿ ಮಾಹಿತಿ ತಂತ್ರಜ್ಞಾನ ಅಡಿಯಲ್ಲಿ 300 ರಿಂದ 2000 ಕೋಟಿ ರೂ.ಗಳ ಯೋಜನೆ ಘೋಷಣೆ. ಮ್ಯಾಟ್ ಟ್ಯಾಕ್ಸ್‌ಗಳ ವಿನಾಯಿತಿ ಘೋಷಣೆ. ಅತಿಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರದ ಸುಲಭ ಸಾಲದ ಸೌಲಭ್ಯ. ಭಾರತದಲ್ಲಿ ಹೂಡಿಕೆ ಮಾಡುವ ವಿದೇಶಿ ಕಂಪೆನಿಗಳಿಗೆ ಟ್ಯಾಕ್ಸ್ ಹಾಲಿಡೇ ಘೋಷಣೆ. ಡೇಟಾ ಸರ್ವೀಸ್ ಸೆಂಟರ್ ಕಂಪೆನಿಗಳಿಗೆ ತೆರಿಗೆಯಿಂದ ವಿನಾಯತಿ. 


ಐಟಿ ಸಂಸ್ಥೆಗಳಿಗೆ ಪ್ರೋತ್ಸಾಹ- ಟ್ಯಾಕ್ಸ್ ಹಾಲಿಡೇ ಘೋಷಣೆ, ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿ ಮಾಹಿತಿ ತಂತ್ರಜ್ಞಾನ ಅಡಿಯಲ್ಲಿ 300 ರಿಂದ 2000 ಕೋಟಿ ರೂ.ಗಳ ಯೋಜನೆ ಘೋಷಣೆ. ಮ್ಯಾಟ್ ಟ್ಯಾಕ್ಸ್‌ಗಳ ವಿನಾಯಿತಿ ಘೋಷಣೆ. ಅತಿಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರದ ಸುಲಭ ಸಾಲದ ಸೌಲಭ್ಯ. ಭಾರತದಲ್ಲಿ ಹೂಡಿಕೆ ಮಾಡುವ ವಿದೇಶಿ ಕಂಪೆನಿಗಳಿಗೆ ಟ್ಯಾಕ್ಸ್ ಹಾಲಿಡೇ ಘೋಷಣೆ. ಡೇಟಾ ಸರ್ವೀಸ್ ಸೆಂಟರ್ ಕಂಪೆನಿಗಳಿಗೆ ತೆರಿಗೆಯಿಂದ ವಿನಾಯತಿ. 

ಆರೋಗ್ಯ ಮತ್ತು ವಿದ್ಯಾಭ್ಯಾಸದ ಟಿಸಿಎಸ್ ಶೇ. 5ರಿಂದ ಶೇ. 2ಕ್ಕೆ ಇಳಿಕೆ. ವಿದೇಶ ಯಾತ್ರೆಗಳ ಟಿಸಿಎಸ್ ಶೇ. ಎರಡರಷ್ಟು ಇಳಿಕೆ. ಅನಿವಾಸಿ ಭಾರತೀಯರ ಸ್ಥಿರಾಸ್ತಿಯ ಮೇಲೆ ಟಿಡಿಎಸ್ ಕಡಿತ. ಮುಂಬೈನಲ್ಲಿ Indian Institute of Creative Technology ನಿರ್ಮಾಣ. 

ಕಂಪನಿಗಳಿಗೆ ಹೊಸ ತೆರಿಗೆ ಪದ್ಧತಿಗೆ ಸೇರಲು ಉತ್ತೇಜನ:

ತೆರಿಗೆಯ ಶೇ.15 ರಿಂದ, 14% ಮ್ಯಾಟ್ ರೇಟ್‌ಗೆ ಇಳಿಕೆ, ಆ ಮೂಲಕ ಹೊಸ ತೆರಿಗೆ ಪದ್ಧತಿಗೆ ಬದಲಾಯಿಸಿಕೊಳ್ಳಲು ಉತ್ತೇಜನ. ಆದಾಯ ತೆರಿಗೆ ಸಲ್ಲಿಕೆಯಲ್ಲಿ ತಪ್ಪಾಗಿದ್ದರೆ ಶಿಕ್ಷೆಯ ಬದಲು ಇನ್ನು ಮುಂದೆ ದಂಡ. ಸುಂಕ ವಿನಾಯತಿಯಲ್ಲಿ ಆಮದಾಗುವ ವಸ್ತುಗಳ ಮಿತಿ ಹೆಚ್ಚಳ. ಚರ್ಮೋತ್ಪನ್ನಗಳ ಮೇಲಿನ ಆಮದು ಸುಂಕ ಇಳಿಕೆ. ವಿಮಾನ ಬಿಡಿಭಾಗಗಳ ಸುಂಕ ಇಳಿಕೆ.

ಚರ್ಮ ಉತ್ಪಾದನೆಗಳ ರಫ್ತಿಗೆ ಉತ್ತೇಜನ.

ಹಲವು ಉತ್ಪನ್ನಗಳ ಆಮದಿಗೆ ತೆರಿಗೆ ವಿನಾಯಿತಿ.

ಭಾರತದಲ್ಲಿ ಉತ್ಪಾದನೆಯಾಗುವ ಸೀ ಫುಡ್‌ಗಳ ರಫ್ತಿಗೆ ಉತ್ತೇಜನ, ಚರ್ಮ-ಸಿಂಥೆಟಿಕ್-ಶೂಗಳ ಉತ್ತೇಜನ.

Ads on article

Advertise in articles 1

advertising articles 2

Advertise under the article