ಬೆಂಗಳೂರು :ಗಂಡನನ್ನ ಬಿಟ್ಟು ಬಂದವಳ ಹಿಂದೆ ಬಿದ್ದಿದ್ದ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮ*ಹತ್ಯೆ..!!

ಬೆಂಗಳೂರು :ಗಂಡನನ್ನ ಬಿಟ್ಟು ಬಂದವಳ ಹಿಂದೆ ಬಿದ್ದಿದ್ದ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮ*ಹತ್ಯೆ..!!

ಬೆಂಗಳೂರು : ಗಂಡನನ್ನ ಬಿಟ್ಟು ಬಂದವಳ ಹಿಂದೆ ಬಿದ್ದಿದ್ದ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ನೆಲಮಂಗಲ  ಸಮೀಪದ ಅರಿಶಿನಕುಂಟೆಯಲ್ಲಿ ನಡೆದಿದೆ.

ನೆಲಮಂಗಲ ಸಮೀಪದ ಅರಿಶಿನಕುಂಟೆ ನಿವಾಸಿ ಗೀತಾ ಎಂಬಾಕೆ ಕಳೆದ 2 ತಿಂಗಳಿಂದ ಗಂಡನಿಂದ ದೂರವಾಗಿದ್ದಳು. ಬಳಿಕ ಅಲ್ಲೇ ಇಬ್ಬರು ಮಕ್ಕಳ ಜೊತೆ ಬದುಕುತ್ತಿದ್ದಳಂತೆ. ಗಂಡ ದೂರವಾದ ಬಳಿಕ ಈಕೆಗೆ ಪ್ರಿಯಕರ ರಘು ಎಂಬಾತ ಹತ್ತಿರವಾಗಿದ್ದ ಎನ್ನಲಾಗ್ತಿದೆ.

ಗಂಡನಿಲ್ಲದ ವಿಚಾರ ತಿಳಿದು ನಿತ್ಯ ಗೀತಾಳ ಮನೆ ಬಳಿ ರಘು ಬರುತ್ತಿದ್ದನಂತೆ. ಇಬ್ಬರಿಗೂ ಅನೈತಿಕ ಸಂಬಂಧವಿತ್ತು ಎನ್ನಲಾಗ್ತಿದೆ. ಮೊದಲೇ ಮದುವೆಯಾಗಿದ್ದ ಗೀತಾಗೆ ಇಬ್ಬರು ಮಕ್ಕಳು ಕೂಡ ಇದ್ದರು. ಮಗಳ ಅಕ್ರಮ ಸಂಬಂಧ ವಿಚಾರ ತಿಳಿದು ಗೀತಾಗೆ ತಾಯಿ ಕೂಡ ಬುದ್ದಿ ಹೇಳಿದ್ದರಂತೆ. ಇಬ್ಬರು ಮಕ್ಕಳಿದ್ದಾರೆ, ಇಂತಹ ಸಂಬಂಧ ಬೇಡ ಅಂದಿದ್ದರಂತೆ.

ಬಳಿಕ ಮನೆಯವರ ಮಾತಿಗೆ ಒಪ್ಪಿ ಗೀತಾ ತನ್ನ ಪ್ರಿಯಕರನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಆದ್ರೆ ರಘು ಸುಮ್ಮನೆ ಇರಲಿಲ್ಲ. ನಿತ್ಯ ಆಕೆಯ ಮನೆ ಬಳಿ ಬಂದು ಕಿರುಕುಳ ನೀಡ್ತಿದ್ದ ಎನ್ನಲಾಗ್ತಿದೆ. ಇದ್ರಿಂದ ಮನೊಂದು ಗೃಹಿಣಿ ಗೀತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗ್ತಿದೆ.

Ads on article

Advertise in articles 1

advertising articles 2

Advertise under the article