ಮನೆವಾರ್ತೆ :ನಿಮ್ಮ ಮನೆಯ ಗ್ಯಾಸ್​ ಸಿಲಿಂಡರ್ ಬೇಗನೆ ಖಾಲಿಯಾಗುತ್ತದೆಯೇ?; ಹೆಚ್ಚು ಸಮಯದವರೆಗೆ ಬರುವಂತೆ ಮಾಡಲು ಇಲ್ಲಿವೆ ಸರಳ ಟಿಪ್ಸ್!!!!

ಮನೆವಾರ್ತೆ :ನಿಮ್ಮ ಮನೆಯ ಗ್ಯಾಸ್​ ಸಿಲಿಂಡರ್ ಬೇಗನೆ ಖಾಲಿಯಾಗುತ್ತದೆಯೇ?; ಹೆಚ್ಚು ಸಮಯದವರೆಗೆ ಬರುವಂತೆ ಮಾಡಲು ಇಲ್ಲಿವೆ ಸರಳ ಟಿಪ್ಸ್!!!!

ಗ್ಯಾಸ್ ಸಿಲಿಂಡರ್ ಉಳಿಸಲು ಸರಳ ಟಿಪ್ಸ್  Simple tips to save gas cylinders  gas cylinder saving tips  gas cylinder saving

ಮನೆವಾರ್ತೆ :ಇತ್ತೀಚಿನ ದಿನಗಳಲ್ಲಿ ಅಡುಗೆ ಅನಿಲವು ಪ್ರತಿಯೊಂದು ಮನೆಯಲ್ಲೂ ಮೂಲಭೂತ ಅವಶ್ಯಕತೆಯಾಗಿದೆ. ಚಳಿಗಾಲದ ಸಮಯದಲ್ಲಿ ತಮ್ಮ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿಯಾಗುತ್ತದೆ ಎನ್ನುವುದು ಹಲವರ ದೂರು. ಹೆಚ್ಚುತ್ತಿರುವ ಹಣದುಬ್ಬರದ ಜೊತೆಗೆ ಆಗಾಗ್ಗೆ ಸಿಲಿಂಡರ್ ಬದಲಾಯಿಸುವುದು ಜೇಬಿನ ಮೇಲೆ ಹೊರೆಯಾಗಿ ಪರಿಣಮಿಸುತ್ತದೆ. ಗ್ಯಾಸ್​ ಸಿಲಿಂಡರ್ ಬೇಗನೆ ಖಾಲಿಯಾಗಲು ಕೆಲವೊಮ್ಮೆ ಕಾರಣ ಅನಿಲ ಬಳಕೆಯಿಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ.

ಕೆಲವು ಸಣ್ಣ ತಪ್ಪುಗಳಿಂದ ಅಡುಗೆ ಅನಿಲ ಬೇಗನೆ ಖಾಲಿಯಾಗುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹೌದು, ಚಿಕ್ಕ ಅಜಾಗರೂಕತೆಯು ಗ್ಯಾಸ್ ಕಡಿಮೆಯಾಗುವಂತೆ ಮಾಡಬಹುದು. ಇದರಿಂದಾಗಿಯೇ ಸಿಲಿಂಡರ್ ನಿಗದಿತ ಸಮಯಕ್ಕಿಂತ ಮೊದಲು ಖಾಲಿಯಾಗುತ್ತದೆ. ನಿಮ್ಮ ಗ್ಯಾಸ್ ಸಿಲಿಂಡರ್ ಹೆಚ್ಚು ಸಮಯದವರೆಗೆ ಬರುವಂತೆ ಹಾಗೂ ಅಡುಗೆಮನೆಯ ವೆಚ್ಚ ಕಡಿಮೆ ಮಾಡಲು ಬಯಸಿದರೆ, ತಜ್ಞರು ಸೂಚಿಸುವಂತಹ ಕೆಲವು ಸರಳ ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಬಹುದು.

ಸರಿಯಾಗಿರುವ ಪಾತ್ರೆಗಳನ್ನು ಉಪಯೋಗಿಸಿ: ಅಡುಗೆ ಮಾಡುವಾಗ ಯಾವಾಗಲೂ ಚಪ್ಪಟೆ ತಳವಿರುವ ಪಾತ್ರೆಗಳನ್ನು ಉಪಯೋಗಿಸಬೇಕಾಗುತ್ತದೆ. ಈ ಪಾತ್ರೆಗಳು ಬರ್ನರ್ ಮೇಲೆ ಸರಿಯಾಗಿ ಹೊಂದಿಕೊಳ್ಳುತ್ತವೆ. ಅನಿಲ ಶಾಖದ ಸರಿಯಾದ ರೀತಿಯಲ್ಲಿ ವಿತರಣೆಯಾಗುತ್ತದೆ ಎಂಬುದನ್ನು ಖಚಿತಪಡಿಸುತ್ತವೆ. ಬಾಗಿದ ಅಥವಾ ತೆಳುವಾದ ತಳವನ್ನು ಹೊಂದಿರುವ ಪಾತ್ರೆಗಳು ಶಾಖವನ್ನು ಸಮವಾಗಿ ವಿತರಿಸಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ಅಡುಗೆ ಬೇಯಲು ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಹೆಚ್ಚಿನ ಅಡುಗೆ ಅನಿಲ ಬಳಕೆಯಾಗುತ್ತದೆ.

ಸ್ವವ್ ಉರಿ ನಿಯಂತ್ರಿಸಿ: ಬಹುತೇಕ ಜನರು ಹೆಚ್ಚಿನ ಶಾಖದಲ್ಲಿ ಬೇಯಿಸುತ್ತಾರೆ. ಇದರಿಂದ ಅನಿಲವನ್ನು ತ್ವರಿತವಾಗಿ ಖಾಲಿಯಾಗುತ್ತದೆ. ಹೆಚ್ಚಿನ ಶಾಖವು ಆಹಾರವನ್ನು ತ್ವರಿತವಾಗಿ ಸುಡಲು ಕೂಡ ಕಾರಣವಾಗಬಹುದು. ಮಧ್ಯಮ ಇಲ್ಲವೇ ಕಡಿಮೆ ಶಾಖದಲ್ಲಿ ಬೇಯಿಸುವುದು ಅನಿಲವನ್ನು ಉಳಿಸುತ್ತದೆ, ಸರಿಯಾದ ಅಡುಗೆಯನ್ನು ಖಚಿತಪಡಿಸುತ್ತದೆ.

ಪ್ರೆಶರ್ ಕುಕ್ಕರ್‌ಗಳನ್ನು ಹೆಚ್ಚಾಗಿ ಬಳಸಿ: ಪ್ರೆಶರ್ ಕುಕ್ಕರ್‌ಗಳು ಅನಿಲವನ್ನು ಉಳಿಸಲು ಉತ್ತಮ ಮಾರ್ಗವಾಗಿದೆ. ಆಹಾರವನ್ನು ಕಡಿಮೆ ಸಮಯದಲ್ಲಿ ಬೇಯಿಸಲಾಗುತ್ತದೆ. ಇದು ಅಡುಗೆ ಅನಿಲ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆ, ತರಕಾರಿಗಳು ಮತ್ತು ಅಕ್ಕಿಯಂತಹ ಅಡುಗೆ ಭಕ್ಷ್ಯಗಳನ್ನು ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಪಾತ್ರೆಯ ಮುಚ್ಚಳ ಮುಚ್ಚಿ ಬೇಯಿಸಿ: ಮುಚ್ಚಳವಿಲ್ಲದೇ ಅಡುಗೆ ಮಾಡುವ ಸಮಯದಲ್ಲಿ ಶಾಖವು ಹೊರಹೋಗುತ್ತದೆ. ಅಡುಗೆ ಸಮಯವು ಕೂಡ ಹೆಚ್ಚಾಗುತ್ತದೆ. ಮುಚ್ಚಳವನ್ನು ಹಾಕಿ ಬೇಯಿಸುವುದರಿಂದ ಹಬೆ ಹೊರಬರಲು ತಡೆಯುತ್ತದೆ. ಜೊತೆಗೆ ಆಹಾರವನ್ನು ವೇಗವಾಗಿ ಬೇಯಿಸಲು ಕೂಡ ಅನುವು ಮಾಡಿಕೊಡುತ್ತದೆ. ಇದರಿಂದ ಅಡುಗೆ ಅನಿಲವನ್ನು ಉಳಿಸುತ್ತದೆ.

ಆಗಾಗ್ಗೆ ಬರ್ನರ್ ಸ್ವಚ್ಛಗೊಳಿಸಿ: ಬರ್ನರ್ ಕೊಳಕಾಗಿದ್ದರೆ ಇಲ್ಲವೇ ರಂಧ್ರಗಳು ಮುಚ್ಚಿಹೋಗಿದ್ದರೆ, ಅಡುಗೆ ಅನಿಲ ಸರಿಯಾಗಿ ಉರಿಯುವುದಿಲ್ಲ. ಇದು ಜ್ವಾಲೆಯನ್ನು ದುರ್ಬಲಗೊಳಿಸುತ್ತದೆ, ಇದರ ಪರಿಣಾಮವಾಗಿ ಹೆಚ್ಚಿನ ಅಡುಗೆ ಅನಿಲ ಉಪಯೋಗಿಸಬೇಕಾಗುತ್ತದೆ. ಕನಿಷ್ಠ ವಾರಕ್ಕೊಮ್ಮೆ ಆದರೂ ಬರ್ನರ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ತುಂಬಾ ಮುಖ್ಯವಾಗುತ್ತದೆ.

ಅಡುಗೆ ಅನಿಲ ಸೋರಿಕೆ ಸೂಕ್ಷ್ಮವಾಗಿ ಚೆಕ್​ ಮಾಡಿ: ಸ್ಟವ್​ಗೆ ಸಂಪರ್ಕ ಕಲ್ಪಿಸುವ ಪೈಪ್ ನಿಯಂತ್ರಕ (ರೆಗ್ಯುಲೇಟರ್) ಅಥವಾ ಸಿಲಿಂಡರ್‌ನಿಂದ ಆಗುವಂತಹ ಅನಿಲ ಸೋರಿಕೆಯು ಕೂಡು ಗ್ಯಾಸ್​ ಸಿಲಿಂಡರ್ ಬೇಗನೇ ಖಾಲಿಯಾಗಲು ಕಾರಣವಾಗುತ್ತದೆ ಇದರ ಅಪಾಯಕಾರಿಯಾಗಬಹುದು. ಈ ಕುರಿತು ನಿಯತಕಾಲಿಕವಾಗಿ ಪರಿಶೀಲಿಸುತ್ತಾ ಇರಬೇಕಾಗುತ್ತದೆ. ಯಾವುದೇ ಸೋರಿಕೆ ಕಂಡುಬಂದರೆ ತಕ್ಷಣವೇ ಸಿಲಿಂಡರ್ ಅನ್ನು ಆಫ್ ಮಾಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

Ads on article

Advertise in articles 1

advertising articles 2

Advertise under the article