ಮುಂಬೈ: ಮೃಗೀಯ ಕೃತ್ಯ; ಬೀದಿ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನ ಬಂಧನ..!!

ಮುಂಬೈ: ಮೃಗೀಯ ಕೃತ್ಯ; ಬೀದಿ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನ ಬಂಧನ..!!

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ವರದಿಯಾಗಿದೆ. 40 ವರ್ಷದ ವ್ಯಕ್ತಿಯೊಬ್ಬ ಬೀದಿ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘೋರ ಕೃತ್ಯ ಮುಂಬೈನ ಕಾಂದಿವಲಿ ಪೂರ್ವದಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಫೆಬ್ರವರಿ 1ರ ರಾತ್ರಿ ಲೋಖಂಡ್‌ವಾಲಾ ಕಾಂಪ್ಲೆಕ್ಸ್ ಸಮೀಪದ ಚರಂಡಿಯ ಬಳಿ ಈ ಅಮಾನವೀಯ ಘಟನೆ ನಡೆದಿದೆ. ಸ್ಥಳೀಯ ಸಮಾಜ ಸೇವಕಿಯೊಬ್ಬರು ಆ ಮಾರ್ಗವಾಗಿ ತೆರಳುತ್ತಿದ್ದಾಗ, ಚರಂಡಿಯ ಬಳಿ ಗುಂಪು ಸೇರಿರುವುದನ್ನು ಗಮನಿಸಿದ್ದಾರೆ. ಅಲ್ಲಿ ಹೋಗಿ ನೋಡಿದಾಗ, ಆರೋಪಿ ಸಂಜಯ್ ಗೌಡ್ (40) ಎಂಬಾತ ಚರಂಡಿಯೊಳಗೆ ನಾಯಿಯ ಮೇಲೆ ಪೈಶಾಚಿಕವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಕಂಡುಬಂದಿದೆ. ಆ ಸಮಯದಲ್ಲಿ ಮೂಕಪ್ರಾಣಿಯು ನೋವಿನಿಂದ ಕಿರುಚುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣದ ರಕ್ಷಣೆ ಮತ್ತು ಚಿಕಿತ್ಸೆ:
ಸಮಾಜ ಸೇವಕಿ ಹಾಗೂ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿ ನಾಯಿಯನ್ನು ಆತನ ಹಿಡಿತದಿಂದ ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ಶ್ವಾನವನ್ನು ಪರೆಲ್‌ನಲ್ಲಿರುವ ಪ್ರಾಣಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಯ ನಂತರ, ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸಮಾಜ ಸೇವಕಿ ನೀಡಿದ ದೂರಿನ ಮೇರೆಗೆ ಸಮತಾ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಸಂಜಯ್ ಗೌಡ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ನ ಸೆಕ್ಷನ್ 325 (ಪ್ರಾಣಿಗಳಿಗೆ ಹಾನಿ ಮಾಡುವುದು). ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಜೈಲಿಗಟ್ಟಲಾಗಿದೆ.

Ads on article

Advertise in articles 1

advertising articles 2

Advertise under the article