ಮಹಾರಾಷ್ಟ್ರ :ನೋಡುಗರನ್ನು ಆಕರ್ಷಿಸಿದ ದೇಶದ ಅತಿ ಉದ್ದದ ಓತಿಕ್ಯಾತ - ಕೊಲ್ಲಾಪುರದಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನ - ಇಗ್ವಾನಾ ನೋಡಿ ಆಶ್ಚರ್ಯ ಚಕಿತರಾದ ವೀಕ್ಷಕರು...!!

ಮಹಾರಾಷ್ಟ್ರ: ನಿಮ್ಮ ಪರಿಸರದ ಸುತ್ತ ಓತಿಕ್ಯಾತ ಕಂಡು ಬರುವುದು ಕಾಮನ್. ಇವು ನಮಗೆನೂ ಹಾನಿ ಮಾಡದಿದ್ದರೂ, ಅನೇಕ ಜನರು ಅವುಗಳಿಗೆ ಹೆದರುತ್ತಾರೆ.
ಸಾಮಾನ್ಯವಾಗಿ ಆರು ಇಂಚಿನಿಂದ ಒಂದು ಅಡಿಯಷ್ಟು ಉದ್ದ ಇರುವುದು ಕಂಡು ಬರುತ್ತವೆ. ಆದರೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ದೇಶದ ಅತಿ ಉದ್ದದ ಇಗ್ವಾನ - ಓತಿಕ್ಯಾತ ನೋಡುಗರ ಪ್ರಮುಖ ಆಕರ್ಷಣೆ ಆಗಿದೆ. ಪ್ರದರ್ಶನಕ್ಕೆ ಬಂದ ವೀಕ್ಷಕರು ಈ ಓತಿಕ್ಯಾತವನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಹಾಗಾದರೆ ಆ ಇಗ್ವಾನ ಎಷ್ಟು ಉದ್ದವಾಗಿದೆ? ಅದು ಯಾವ ಜಾತಿಗೆ ಸೇರಿದೆ? ಈ ಬಗ್ಗೆ ಮುಂದೆ ತಿಳಿದುಕೊಳ್ಳೋಣ.
ದೇಶದ ಅತಿ ಉದ್ದದ ಓತಿಕ್ಯಾತ( ಊಸರವಳ್ಳಿ) ಫೆಬ್ರವರಿ 13 ರಿಂದ 16 ರವರೆಗೆ ಮೂರು ದಿನಗಳ ಕಾಲ ಕೊಲ್ಲಾಪುರದ ಮೆರ್ರಿ ವೆದರ್ ಮೈದಾನದಲ್ಲಿ ನಡೆದ ಕೃಷಿ - ಜಾನುವಾರು ಮೇಳದಲ್ಲಿ ಪ್ರದರ್ಶಿಸಲಾಯಿತು. ಮುಂಬೈನ ಕಿಶೋರ್ ಚವ್ಹಾಣ್ ಬೆಳೆಸಿದ ಇಗ್ವಾನಾ ಈ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಎಂಟು ವರ್ಷದ ಹಲ್ಲಿ ಐದೂವರೆ ಅಡಿ ಉದ್ದ ಮತ್ತು 20 ಕೆಜಿ ತೂಕ ಹೊಂದಿದೆ. ಪ್ರದರ್ಶನಕ್ಕೆ ಬಂದ ಜನರು ದೇಶದ ಈ ಅತಿ ಉದ್ದದ ಓತಿಕ್ಯಾತವನ್ನು ಕುತೂಹಲದಿಂದ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದರು.
ಬಣ್ಣ ಬದಲಿಸುವ ಊಸರವಳ್ಳಿ: ಹವಾಮಾನ ಬದಲಾವಣೆಗಳಿಗೆ ಅನುಗುಣವಾಗಿ ಅವು ಬಣ್ಣಗಳನ್ನು ಬದಲಾಯಿಸುತ್ತವೆ. ಇಗ್ವಾನಾಗಳು ಹೆಚ್ಚಾಗಿ ಮಧ್ಯ ಮತ್ತು ದಕ್ಷಿಣ ಅಮೆರಿಕದ ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಓತಿಕ್ಯಾತಗಳು ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಕಂಡುಬರುತ್ತವೆ. ಇಗ್ವಾನಾ ಕುಲದ ಈ ಊಸರವಳ್ಳಿಗಳು ಅವುಗಳ ವಿಶೇಷ ಲಕ್ಷಣಗಳಿಂದಾಗಿ ಬಹಳ ಜನಪ್ರಿಯವಾಗಿವೆ. ಬೂದು ಬಣ್ಣದಲ್ಲಿ ಹುಟ್ಟುವ ಈ ಓತಿಕ್ಯಾತಗಳು ಹವಾಮಾನ ಬದಲಾವಣೆಗಳಿಗೆ ಅನುಗುಣವಾಗಿ ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸುತ್ತವೆ.
ಎಂಟು ವರ್ಷಗಳಿಂದ ಓತಿಕ್ಯಾತಗಳನ್ನು ಸಾಕುತ್ತಿರುವ ಕಿಶೋರ್ ಚವ್ಹಾಣ್ ಕೊಲ್ಲಾಪುರದ ಪ್ರಾಣಿ ಪ್ರಿಯ. ಅವರು ಎಂಟು ವರ್ಷಗಳ ಹಿಂದೆ ಕೇರಳದಲ್ಲಿ ಇಗ್ವಾನಾ ಖರೀದಿಸಿ ತಂದಿದ್ದರು. ಅಂದಿನಿಂದ ಅವರು ತಮ್ಮ ಮನೆಯಲ್ಲಿ ಇತರ ಪ್ರಾಣಿಗಳ ಜೊತೆಗೆ ಅದನ್ನು ಸಾಕುತ್ತಿದ್ದಾರೆ. ಅವರು ಅದನ್ನು ತಮ್ಮ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಾರೆ. ಅವರು ಈ ಓತಿಕ್ಯಾತಕ್ಕೆ 'ಟೋನ್ಯಾ' ಎಂದು ಹೆಸರಿಸಿದ್ದಾರೆ. ದೇಶದ ಈ ಅತಿ ಉದ್ದದ ಊಸರವಳ್ಳಿಯನ್ನು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ನಡೆಯುವ ಪ್ರದರ್ಶನಗಳಿಗೆ ಕರೆದುಕೊಂಡು ಹೋಗುತ್ತಾರೆ. ಆ ಪ್ರದರ್ಶನಗಳಲ್ಲಿ ಇದುವೇ ಪ್ರಮುಖ ಆಕರ್ಷಣೆ ಆಗಿರುತ್ತೆ.
ಇದು ಸಸ್ಯಹಾರಿ ಪ್ರಾಣಿ: ಈ ಹಲ್ಲಿ ಸಸ್ಯಾಹಾರಿಯಾಗಿದೆ. ಈ ಓತಿಕ್ಯಾತಕ್ಕೆ ಪ್ರತಿದಿನ ಸ್ನಾನ ಮಾಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಸಸ್ಯಾಹಾರಿ ಆಹಾರ ತಿನ್ನುತ್ತದೆ. ಇದು ತರಕಾರಿ, ಕ್ಯಾರೆಟ್, ಸೌತೆಕಾಯಿ, ಕುಂಬಳಕಾಯಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ತಿನ್ನುತ್ತದೆ. ಮುಂಬೈನಂತಹ ಆರ್ದ್ರ ವಾತಾವರಣವಿರುವ ನಗರದಲ್ಲಿ ಬೆಳೆದ ಈ ಊಸರವಳ್ಳಿ ದೈಹಿಕವಾಗಿ ಬಲಶಾಲಿಯಾಗಿದೆ.
ಹೆಣ್ಣು ಓತಿಕ್ಯಾತವನ್ನು ಸಹ ಬೆಳೆಸಿರುವ ಕಿಶೋರ್: ಕಿಶೋರ್ ಚವ್ಹಾಣ್ ಇಗ್ವಾನಾ ಜಾತಿಯ ಹೆಣ್ಣು ಓತಿಕ್ಯಾತವನ್ನು ಹೊಂದಿದ್ದಾರೆ. ಹೆಣ್ಣು ಓತಿಕ್ಯಾತಕ್ಕೆ 'ರಾಖಾ' ಎಂದು ಹೆಸರಿಟ್ಟಿದ್ದಾರೆ. ಅವಳಿಗೆ ಈಗ ನಾಲ್ಕು ವರ್ಷ. ಈ ಜಾತಿಯ ಇಗ್ವಾನಗಳು ವರ್ಷಕ್ಕೆ ಎರಡು ಬಾರಿ (ಆರು ತಿಂಗಳಿಗೊಮ್ಮೆ) ಸಂತಾನೋತ್ಪತ್ತಿ ಮಾಡುತ್ತವೆ. ಒಮ್ಮೆ ಹೆಣ್ಣು ಓತಿಕ್ಯಾತ 20-22 ಮೊಟ್ಟೆಗಳನ್ನು ಇಡುತ್ತದೆ. ಇವುಗಳಲ್ಲಿ 15 ಅಥವಾ ಅದಕ್ಕಿಂತ ಹೆಚ್ಚು ಮರಿಗಳಾಗುತ್ತವೆ.
ಸಾಮಾನ್ಯವಾಗಿ ಕಾಡು ಮತ್ತು ಮರುಭೂಮಿಯಲ್ಲಿ ಕಂಡುಬರುವ ಇಗ್ವಾನಾಗಳು ಕೀಟಗಳನ್ನು ತಿನ್ನುತ್ತವೆ. ಅವು ಹಸಿರು ಬಣ್ಣದಲ್ಲಿ ಜನಿಸುತ್ತವೆ. ನಂತರ ಅವುಗಳ ಚರ್ಮದ ಬಣ್ಣ ಕಾಲಾನಂತರದಲ್ಲಿ ಬದಲಾಗುತ್ತದೆ. ಅವು ವಯಸ್ಸಾದಂತೆ ಕಂದು ಬಣ್ಣಕ್ಕೆ ತಿರುಗುತ್ತವೆ. ಆದಾಗ್ಯೂ, ಕಿಶೋರ್ ಚವ್ಹಾಣ್ ಸಾಕುತ್ತಿರುವ ಇಗ್ವಾನಾ ಹಲ್ಲಿ ಮಾಂಸವನ್ನು (ಕೀಟಗಳನ್ನು) ತಿನ್ನುವುದಿಲ್ಲ. ಇದು ಸಂಪೂರ್ಣವಾಗಿ ಸಸ್ಯಾಹಾರಿ.