ಕೇರಳ :ಮಂಡಿ ನೋವೆಂದು ಅಳುತ್ತಿದ್ದ ಬಾಲಕ! ಎಕ್ಸ್​-ರೇ ರಿಪೋರ್ಟ್​ ನೋಡಿದ ವೈದ್ಯನಿಗೆ ಕಾದಿತ್ತು ಭಯಾನಕ ಸಂಗತಿ...!!!

ಕೇರಳ :ಮಂಡಿ ನೋವೆಂದು ಅಳುತ್ತಿದ್ದ ಬಾಲಕ! ಎಕ್ಸ್​-ರೇ ರಿಪೋರ್ಟ್​ ನೋಡಿದ ವೈದ್ಯನಿಗೆ ಕಾದಿತ್ತು ಭಯಾನಕ ಸಂಗತಿ...!!!

ಮಂಡಿ ನೋವೆಂದು ಅಳುತ್ತಿದ್ದ ಬಾಲಕ! ಎಕ್ಸ್​-ರೇ ರಿಪೋರ್ಟ್​ ನೋಡಿದ ವೈದ್ಯನಿಗೆ ಕಾದಿತ್ತು ಭಯಾನಕ ಸಂಗತಿ | School Boy

ಕೊಚ್ಚಿ: ಕಳೆದ ನಾಲ್ಕು ತಿಂಗಳಿಂದ ಆಗಾಗ್ಗೆ ಕಾಣಿಸುತ್ತಿದ್ದ ಮಂಡಿ ನೋವಿನ ಬಗ್ಗೆ ತನ್ನ ತಾಯಿಯ ಹತ್ತಿರ ಅಳಲು ತೋಡಿಕೊಳ್ಳುತ್ತಿದ್ದ ಪುಟ್ಟ ಪೋರನಿಗೆ ಎಕ್ಸ್​-ರೇ ಮಾಡಿದ ವೈದ್ಯರು, ರಿಪೋರ್ಟ್​ ನೋಡಿ ಒಂದು ನಿಮಿಷ ಬೆರಗಾದ ಘಟನೆ ಕೇರಳದ ಕೊಚ್ಚಿಯಲ್ಲಿ ವರದಿಯಾಗಿದೆ. 
ಕೆನಡಾದಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿರುವ ಮಹಿಳೆ, ಎನಾರ್ಕುಲಂ ಸಮೀಪದಲ್ಲಿರುವ ಮೆಡಿಕಲ್​ ಟ್ರಸ್ಟ್​ ಆಸ್ಪತ್ರೆಗೆ ತನ್ನ ಮಗನನ್ನು ಕರೆದುಕೊಂಡ ಬಂದರು. ಈ ವೇಳೆ, ವೈದ್ಯರ ಬಳಿ ಆತ ಕಳೆದ ನಾಲ್ಕು ತಿಂಗಳಿಂದ ಮಂಡಿ ನೋವು ಎನ್ನುತ್ತಿದ್ದಾನೆ. ಕೆಲವೊಮ್ಮೆ, ಸೊಂಟದ ಭಾಗದಲ್ಲಿ ವಿಪರೀತ ನೋವಾಗ್ತಿದೆ ಎಂದು ಅಳುತ್ತಾನೆ ಎಂದು ಸಮಸ್ಯೆ ವಿವರಿಸದರು. ಸೊಂಟಕ್ಕೂ, ಮಂಡಿಗೂ ಏನು ಸಂಬಂಧ? ಅಂತದ್ದೇನಾಯಿತು ಮಗುವಿಗೆ? ಎಂದು ಯೋಚಿಸಿದ ಡಾಕ್ಟರ್​, ತಕ್ಷಣವೇ ಎಕ್ಸ್​-ರೇ ಮಾಡಿಸಲು ಸೂಚಿಸಿದರು. 

12 ಸೆ.ಮೀ ಪೆನ್ಸಿಲ್ ತುಂಡು

ಕೂಡಲೇ ಎಕ್ಸ್​-ರೇ ಮಾಡಿಸಿಕೊಂಡು ಬಂದ ಮಹಿಳೆ, ವೈದ್ಯರ ಕೈಗೆ ರಿಪೋರ್ಟ್​ ನೀಡಿದರು. ಇದನ್ನು ತೆರೆದು ನೋಡಿದ ಡಾಕ್ಟರ್​ಗೆ ಮಗುವಿನ ಬೆನ್ನಿನಲ್ಲಿ 12 ಸೆ.ಮೀ ಉದ್ದದ ಪೆನ್ಸಿಲ್​ ತುಂಡು ಇರುವುದು ಅಚ್ಚರಿ ತಂದಿತು. ಪೆನ್ಸಿಲ್​ ಇರುವ ಸ್ಥಳವನ್ನು ಗುರುತಿಸಲು ಅಲ್ಟ್ರಾಸೌಂಡ್ ಮತ್ತು ಎಂಆರ್​ಐ ಸ್ಕ್ಯಾನ್‌ಗಳನ್ನು ಬಳಸಿದ ವೈದ್ಯರು, ಕಡೆಗೂ ಶಸ್ತ್ರಚಿಕಿತ್ಸೆಯ ಮೂಲಕ ಪೆನ್ಸಿಲ್ ಅನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಮುಖ ರಕ್ತನಾಳಗಳಿಗೆ ಪೆನ್ಸಿಲ್​ ತುಂಡಿನ ತುದಿ ಭಾಗವು ಹಾನಿ ಮಾಡಿಲ್ಲ ಎಂದು ಡಾ. ಜಾನಿ ವಕಯಿಲ್ ಫ್ರಾನ್ಸಿಸ್ ತಿಳಿಸಿದ್ದಾರೆ. 

ಪೆನ್ಸಿಲ್​ ತುಂಡು ಅಲ್ಲಿಗೆ ಹೋಗಿದ್ಹೇಗೆ?

ನಾಲ್ಕು ತಿಂಗಳ ಹಿಂದೆ, ಕೆನಡಾದ ತನ್ನ ಶಾಲೆಯಲ್ಲಿ ಆಟವಾಡುತ್ತಿದ್ದ ಬಾಲಕ, ಏಕಾಏಕಿ ಮತ್ತೊಂದು ಮಗುವಿನ ತೊಡೆಯ ಮೇಲೆ ಕೂತಿದ್ದಾನೆ. ಈ ವೇಳೆ, ಕೆಳಗೆ ಕುಳಿತಿದ್ದ ಪೋರನ ಕೈಯಲ್ಲಿದ್ದ ಪೆನ್ಸಿಲ್ ಎರಡು​ ತುಂಡಾಗಿ, ಅದರ ಒಂದು ತುದಿ ಬಾಲಕನ ಬೆನ್ನಿನೊಳಗೆ ಹೊಕ್ಕಿದೆ. ಮತ್ತೊಂದು ತುಂಡು ಸಿಕ್ಕಿರಲಿಲ್ಲ. ಮಗುವಿಗೆ ಗುದದ್ವಾರದ ಭಾಗದಲ್ಲಿ ಆಗಿದ್ದ ಗಾಯವು, ಔಷಧಿಗಳಿಂದ ಗುಣವಾಗಿತ್ತು. ಆದ್ರೆ, ಒಳಗೆ ಹೊಕ್ಕಿದ್ದ ಪೆನ್ಸಿಲ್​ ತುಂಡು ಮಾತ್ರ ಮಂಡಿ ಮತ್ತು ಸೋಟದಲ್ಲಿ ನೋವು ಕೊಡುತ್ತಿತ್ತು. ಈ ಬಗ್ಗೆ ಬಾಲಕನಿಗಾಗಲಿ ಅಥವಾ ಅವನ ತಾಯಿಗಾಗಲಿ ಕಿಂಚಿತ್ತು ಅರಿವಿರಲಿಲ್ಲ,(ಏಜೆನ್ಸೀಸ್). 

Ads on article

Advertise in articles 1

advertising articles 2

Advertise under the article