ಬೆಂಗಳೂರು :ಪ್ರೀತಿಸಿದ ಯುವತಿ ಕೈ ಕೊಟ್ಟಿದ್ದಕ್ಕೆ ಬಾಡಿ ಬಿಲ್ಡರ್ ಆತ್ಮ*ಹತ್ಯೆ...!!!

ಬೆಂಗಳೂರು :ಪ್ರೀತಿಸಿದ ಯುವತಿ ಕೈ ಕೊಟ್ಟಿದ್ದಕ್ಕೆ ಬಾಡಿ ಬಿಲ್ಡರ್ ಆತ್ಮ*ಹತ್ಯೆ...!!!

ಬೆಂಗಳೂರು: ಪ್ರೀತಿಸಿದ ಯುವತಿ ಕೈ ಕೊಟ್ಟಿದ್ದಕ್ಕೆ ಬಾಡಿ ಬಿಲ್ಡರ್ ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ನಲ್ಲಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಡಿ ಬಿಲ್ಡರ್ ಕಿರಣ್(26) ಆತ್ಮಹತ್ಯೆ ಮಾಡಿಕೊಂಡವರು.

ಮೂರು ವರ್ಷಗಳಿಂದ ಯುವತಿಯನ್ನು ಕಿರಣ್ ಪ್ರೀತಿಸುತಿದ್ದ. ವ್ಯಾಲೆಂಟೆನ್ಸ್ ಡೇ ದಿನ ಗಿಫ್ಟ್ ಕೊಡಲು ಕಿರಣ್ ಪ್ಲಾನ್ ಮಾಡಿಕೊಂಡಿದ್ದ. ಆದರೆ ಕಿರಣ್ ಬಿಟ್ಟು ಬೇರೆ ಯುವಕನೊಂದಿಗೆ ಯುವತಿ ಮದುವೆ ಫಿಕ್ಸ್ ಆಗಿದೆ. ಲಗ್ನಪತ್ರಿಕೆ ಮತ್ತು ಹೊಸ ಸೀರೆಯನ್ನು ಯುವತಿ ತೋರಿಸಿದ್ದಾರೆ. ಇದರಿಂದ ಮನನೊಂದು ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ನಲ್ಲಿರುವ ಮನೆಗೆ ಬಂದ ಕಿರಣ್ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

Ads on article

Advertise in articles 1

advertising articles 2

Advertise under the article