ಉಡುಪಿ: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು ಉಚ್ಚಿಲ ನಿವಾಸಿ ಸೇರಿ ಮೂವರು ಸಾವು..!!

ಉಡುಪಿ: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು ಉಚ್ಚಿಲ ನಿವಾಸಿ ಸೇರಿ ಮೂವರು ಸಾವು..!!

ಉಡುಪಿ: ಓಮನ್‌ ದೇಶದ ಉತ್ತರ ಅಲ್ ಬಟಿನಾ ಗವರ್ನರೇಟ್‌ನ ಲಿವಾ ವಿಲಾಯತ್‌ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಡುಪಿ ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. 

ಘಟನೆಯಲ್ಲಿ ಕಾಪು ಉಚ್ಚಿಲ ಸಮೀಪದ ಕಲತ್ತೂರು ನಿವಾಸಿ ಚೇತನ್ (26) ಸೇರಿದಂತೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದಾರೆ. ಮಸ್ಕತ್ ಎಕ್ಸ್ ಪ್ರೆಸ್ ವೇಯಲ್ಲಿ ಕಾರುಗಳು ಮತ್ತು ಟ್ರಕ್ ಸರಣಿ ಡಿಕ್ಕಿಯಾಗಿದ್ದು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. 

ಅಪಘಾತದ ಬಳಿಕ ಅವಶೇಷಗಳಲ್ಲಿ ಸಿಲುಕಿದ್ದವರನ್ನು ರಕ್ಷಣಾ ಸಿಬ್ಬಂದಿ ತೆರವು ಮಾಡಿದ್ದು, ವೈದ್ಯಕೀಯ ತಂಡಗಳು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿವೆ. ಬಳಿಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article