ಆಂಧ್ರಪ್ರದೇಶ :ಉಗ್ರರ ನಂಟು ; ಕರ್ನಾಟಕದ ಓರ್ವ ಸೇರಿ 12 ಮಂದಿ ಆರೋಪಿಗಳು ಅರೆಸ್ಟ್.!!!

ಆಂಧ್ರಪ್ರದೇಶದ ಪೊಲೀಸರು ಕರ್ನಾಟಕ ಸೇರಿದಂತೆ ದೇಶದ 7 ರಾಜ್ಯಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ, ನಿಷೇಧಿತ ಉಗ್ರ ಸಂಘಟನೆಗಳಾದ ಅಲ್-ಖೈದಾ ಮತ್ತು ಐಸಿಸ್(ISIS) ಜೊತೆ ಸಂಪರ್ಕ ಹೊಂದಿದ್ದ 12 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಂ ಎಂಬಾತನೂ ಸೇರಿದ್ದಾನೆ.
ಅಬ್ದುಲ್ ಸಲಾಂ (ಕರ್ನಾಟಕ), ಅಜ್ಮಾನುಲ್ಲಾ ಖಾನ್ (ಬಿಹಾರ), ಲಕ್ಕಿ ಅಹ್ಮದ್ (ದೆಹಲಿ), ಮೀರ್ ಆಸಿಫ್ ಅಲಿ (ಪ. ಬಂಗಾಳ), ಜೀಶನ್ (ರಾಜಸ್ಥಾನ), ಶಾರುಖ್ ಖಾನ್ ಮತ್ತು ಶಿಯಾಕ್ ಪಿಯಾಜ್ ಉರ್ ರೆಹಮಾನ್ (ಮಹಾರಾಷ್ಟ್ರ) ಹಾಗೂ ಆಂಧ್ರಪ್ರದೇಶದ ಮೊಹಮ್ಮದ್ ರಹಮತುಲ್ಲಾ ಶರೀಫ್, ಮಿರ್ಜಾ ಸೊಹೈಲ್ ಬೇಗ್ ಮತ್ತು ಮೊಹಮ್ಮದ್ ಡ್ಯಾನಿಶ್ ಬಂಧಿತ ಆರೋಪಿಗಳು.
ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಲ್ಲಿ ಆಂಧ್ರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಇವರು ನಿಷೇಧಿತ ಉಗ್ರ ಸಂಘಟನೆಗಳಾದ ಅಲ್ ಖೈದಾ ಮತ್ತು ಐಸಿಸ್ ಜೊತೆ ಸಂಪರ್ಕ ಹೊಂದಿದ್ದರು. ಆಂಧ್ರದ ಮೂವರು ‘ಅಲ್ ಮಾಲಿಕ್ ಇಸ್ಲಾಮಿಕ್ ಯೂತ್’ ಎಂಬ ಗುಂಪನ್ನು ರಚಿಸಿ, ಯುವಕರನ್ನು ತೀವ್ರವಾದಿ ಚಿಂತನೆಗಳತ್ತ ಆಕರ್ಷಿಸುವುದು, ಜಿಹಾದ್‌ಗೆ ತಯಾರು ಮಾಡುವುದು ಮತ್ತು ದೇಶಾದ್ಯಂತ ತಮ್ಮ ನೆಟ್‌ವರ್ಕ್ ವಿಸ್ತರಿಸುವ ಕೆಲಸದಲ್ಲಿ ತೊಡಗಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾದಿ ವಿಡಿಯೋಗಳನ್ನು ಹಂಚುತ್ತಾ, ಯುವಕರನ್ನು ಉಗ್ರ ಚಟುವಟಿಕೆಗಳತ್ತ ಆಕರ್ಷಿಸುತ್ತಿದ್ದರು.