ಮಂಗಳೂರು : ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್‌ಸೈಟ್ !ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್ ಮುಂದಿಟ್ಟು ಸೈಬರ್ ವಂಚನಾ ಜಾಲ ಪತ್ತೆ....!!
Thursday, March 26, 2026
ಮಂಗಳೂರು: ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್‌ಸೈಟ್ ಸೃಷ್ಟಿಸಿ ಸೈಬರ್ ವಂಚಕರು ಸಾರ್ವಜನಿಕರನ್ನು ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿರುವ ಅಂಶ ಬೆಳಕಿಗೆ ಬಂದಿದ್ದು ಈ ಬಗ್ಗೆ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ನಗರದ ಸೈಬರ್ ಕ್ರೈಂ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರೇವಣ ಸಿದ್ದಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಾರ್ಚ್ 25ರಂದು ಸೈಬರ್ ವಿಭಾಗದ ಅಧಿಕಾರಿಗಳು ಗೂಗಲ್ ಪರಿಶೀಲಿಸುತ್ತಿದ್ದಾಗ, 'ಮಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ಪ್ರತ್ಯೇಕ ನಕಲಿ ವೆಬ್‌ಸೈಟ್ ಇರುವುದು (https://mangalorecitypolice.com/) ಕಂಡುಬಂದಿದೆ. ಅಮಾಯಕ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರನ್ನು ನಂಬಿಸಿ, ಅವರಿಂದ ಹಣ ಲೂಟಿ ಮಾಡುವ ದುರುದ್ದೇಶದಿಂದ ಈ ಜಾಲತಾಣವನ್ನು ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ನಕಲಿ ವೆಬ್‌ಸೈಟ್‌ನಲ್ಲಿ ಕೇವಲ ಮಾಹಿತಿ ಮಾತ್ರವಲ್ಲದೆ,
ಪೊಲೀಸ್ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿ ಸೈಬರ್ ವಂಚನೆ ಎಸಗುತ್ತಿರುವ ಅಪರಿಚಿತ ವ್ಯಕ್ತಿಗಳು ಹಾಗೂ ನಕಲಿ ವೆಬ್‌ಸೈಟ್ ಸೃಷ್ಟಿಕರ್ತರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳನ್ನು ಹೊರತುಪಡಿಸಿ, ಇಂತಹ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಅದರಲ್ಲೂ ಹಣದ ಆಮಿಷ ಒಡ್ಡುವ ಆನ್‌ಲೈನ್ ಜೂಜಾಟದ ಸೈಟ್‌ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.