ಬೆಂಗಳೂರು :ಮದುವೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಪ್ಗೆ ಮಗು ಬಿದ್ದು ಸಾವು..!!
Thursday, March 12, 2026

ಬೆಂಗಳೂರು :ಸಂಪ್ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಅಣ್ಣಯ್ಯ ಮತ್ತು ಋತು ದಂಪತಿಯ ಎರಡೂವರೆ ವರ್ಷದ ಚಿರಾಗ್ ಮೃತ ಮಗು. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸದ್ಯ ಮೃತ ಮಗುವನ್ನು ನೆಲಮಂಗಲ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ನಡೆದಿದ್ದೇನು?
ಬೆಂಗಳೂರು ಉತ್ತರ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡರಹಳ್ಳಿಯ ನಿವಾಸಿಗಳಾದ ಅಣ್ಣಯ್ಯ ಮತ್ತು ಋತು ದಂಪತಿ ನಿನ್ನೆ ಮದುವೆ ಹಿನ್ನೆಲೆ ಕುಟುಂಬಸ್ಥರು ರೆಡಿಯಾಗುತ್ತಿದ್ದರು. ಚಿರಾಗ್ನಿಗೆ ಕೂಡ ಸ್ನಾನ ಮಾಡಿಸಿ ತಾಯಿ ರೆಡಿ ಮಾಡಿಸಿದ್ದರು. ಈ ವೇಳೆ ಅಣ್ಣಯ್ಯ ಕಾರ್ ವಾಶ್ ಮಾಡುತ್ತಿದ್ದರು. ಸಂಪ್ ಕ್ಯಾಪ್ ಓಪನ್ ಮಾಡಿ ನೀರು ತೆಗೆದುಕೊಂಡಿದ್ದಾರೆ. ಕಾರ್ ವಾಶ್ ಮಾಡಿದ ನಂತರ ಕ್ಯಾಪ್ ಮುಚ್ಚಲು ಮರೆತ ಅಣ್ಣಯ್ಯ ಮನೆ ಒಳಗೆ ಹೋಗಿದ್ದಾರೆ. ವಾಪಸ್ ಬಂದು ನೋಡುವಷ್ಟರಲ್ಲಿ ಚಿರಾಗ್ ಸಂಪ್ನಲ್ಲಿ ಬಿದ್ದು ಮೃತಪಟ್ಟಿದ್ದ.