ಉಳ್ಳಾಲ: ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಪ್ರಚೋದನಕಾರಿ ಕಮೆಂಟ್ ; ಸುಮೊಟೊ ಕೇಸ್ ದಾಖಲಿಸಿದ ಉಳ್ಳಾಲ ಪೊಲೀಸರು, ಕಿಡಿಗೇಡಿಗೆ ಶೋಧ..!

ಉಳ್ಳಾಲ: ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಪ್ರಚೋದನಕಾರಿ ಕಮೆಂಟ್ ; ಸುಮೊಟೊ ಕೇಸ್ ದಾಖಲಿಸಿದ ಉಳ್ಳಾಲ ಪೊಲೀಸರು, ಕಿಡಿಗೇಡಿಗೆ ಶೋಧ..!

ಉಳ್ಳಾಲ: ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ, ಸಪೋರ್ಟ್ ಮಾಡಿ ಎಂದು ಬಜ್ಪೆಯಲ್ಲಿ ಕೊಲೆಯಾಗಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಭಾವಚಿತ್ರವುಳ್ಳ ಇನ್ಸ್ ಟಾ ಗ್ರಾಮ್ ಪೇಜ್ ಒಂದರ ಪೋಸ್ಟಿನಲ್ಲಿ ಪ್ರಚೋದನಕಾರಿ ಕಮೆಂಟ್ ಹಾಕಿರುವ ಕಿಡಿಗೇಡಿಯ ವಿರುದ್ಧ ಉಳ್ಳಾಲ ಪೊಲೀಸರು ಸುಮೊಟೊ ಕೇಸ್ ದಾಖಲಿಸಿದ್ದಾರೆ.

ಬಜ್ಪೆಯಲ್ಲಿ ಕಳೆದ ವರ್ಷ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದ ಸುಹಾಸ್ ಶೆಟ್ಟಿಯ ಭಾವಚಿತ್ರವುಳ್ಳ ಇನ್ಸ್ಟಾ ಪೋಸ್ಟ್ ಒಂದರಲ್ಲಿ shankar11916 ಎಂಬ ಇನ್ಸ್ಟಾ ಖಾತೆಯಿಂದ "ಸಪೋರ್ಟ್ ಮಾಡಿ ಬ್ರೋ ಉಳ್ಳಾಲ ಮಸ್ಜಿದ್ ಹತ್ರ ಬಾಂಬ್ ಬ್ಲಾಸ್ಟ್ ಮಾಡ್ತೀನಿ" ಎಂಬ ಪ್ರಚೋದನಕಾರಿ ಸಂದೇಶವನ್ನು ಹಾಕಲಾಗಿದ್ದು,ಈ ಪೋಸ್ಟ್ ವೈರಲ್ ಆಗಿತ್ತು.

ಸೋಮವಾರ ಸಾಮಾಜಿಕ ಜಾಲತಾಣದ ಮೋನಿಟರಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿ ಸಂತೋಷ್ ದೊಡ್ಡಮನಿ ಅವರು ಈ ಸಂದೇಶವನ್ನು ಗಮನಿಸಿದ್ದು ಈ ಬಗ್ಗೆ ಅವರು ನೀಡಿದ ದೂರಿನಡಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯು ಧರ್ಮ ಧರ್ಮಗಳ ಮಧ್ಯೆ ವೈರತ್ವ ಉಂಟುಮಾಡಿ ಹಿಂಸೆಗೆ ಪ್ರಚೋದಿಸಿ ಜನರನ್ನು ಎತ್ತಿ ಕಟ್ಟುವಂತೆ ಮಾಡುವ ಉದ್ದೇಶದಿಂದ ಜಾಲತಾಣದ ಇನ್ಸ್ಟಾಗ್ರಾಮ್ ನಲ್ಲಿ ಪ್ರಚೋಧನಾಕಾರಿಯಾಗಿ ಕಾಮೆಂಟ್ ಮಾಡಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪೋಸ್ಟ್ ಹಾಕಿರುವ ವ್ಯಕ್ತಿಯನ್ನು ಅರೆಸ್ಟ್ 

Ads on article

Advertise in articles 1

advertising articles 2

Advertise under the article