ಬೆಂಗಳೂರು :ಲಾರಿಗೆ ಕಾರು ಡಿಕ್ಕಿ; ಬೆಂಗಳೂರಿನ ಐವರು ಸಾವು.ಕಾರಿನಲ್ಲಿ ತಿರುಪತಿಗೆ ತೆರಳುತ್ತಿದ್ದ ಬೆಂಗಳೂರಿನ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ..!!
ಅತಿ ವೇಗದಲ್ಲಿ ಕಾರು ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಲಾರಿಯ ಕೆಳಗೆ ಸಿಲುಕಿಕೊಂಡಿತ್ತು. ಹರಸಾಹಸಪಟ್ಟು ಕಾರನ್ನು ಹೊರತೆಗೆಯಲಾಯಿತು. ಬೆಂಗಳೂರಿನ ರಾಜಾಜಿನಗರದ ಕುಟುಂಬ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತಿರುಮಲಕ್ಕೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿರುವ ಮೃತರ ಸಂಬಂಧಿಕರಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಲಾಗಿದೆ.
ಅಪಘಾತಕ್ಕೆ ಸಚಿವ ಮಂಡಿಪಲ್ಲಿ ಪ್ರತಿಕ್ರಿಯೆ: ಚಿತ್ತೂರು ಜಿಲ್ಲೆಯ ಗಂಗಾವರಂ ಮಂಡಲದ ವೈಎಸ್ಆರ್ ಜಂಕ್ಷನ್ ಬಳಿ ನಡೆದ ಭೀಕರ ರಸ್ತೆ ಅಪಘಾತದ ಬಗ್ಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಯ ಬಗ್ಗೆ ವಿಚಾರಿಸಿದರು. ಅಪಘಾತದ ಸುದ್ದಿ ತಿಳಿದು ಸಚಿವರು ಆಘಾತ ವ್ಯಕ್ತಪಡಿಸಿದರು. ಮೃತರಿಗೆ ತೀವ್ರ ಸಂತಾಪ ಸೂಚಿಸಿದರು. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಪಘಾತದ ಕಾರಣಗಳ ಬಗ್ಗೆ ವಿವರಗಳನ್ನು ತಿಳಿದುಕೊಂಡರು. ಮೃತರ ಕುಟುಂಬಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.