ಮಂಗಳೂರು: ನಗರದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ (ರಿ) ಮಂಗಳೂರು ಇದರ ವಾರ್ಷಿಕೋತ್ಸವ ಸಮಾರಂಭ..!! ಅಭಿನಂದನೆ,ಗೌರವಾರ್ಪಣೆ, ನೆರವು ವಿತರಣೆ,ಸಾಂಸ್ಕೃತಿಕ ಕಾರ್ಯಕ್ರಮಗಳು..!!

ಮಂಗಳೂರು: ನಗರದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ (ರಿ) ಮಂಗಳೂರು ಇದರ ವಾರ್ಷಿಕೋತ್ಸವ ಸಮಾರಂಭ..!! ಅಭಿನಂದನೆ,ಗೌರವಾರ್ಪಣೆ, ನೆರವು ವಿತರಣೆ,ಸಾಂಸ್ಕೃತಿಕ ಕಾರ್ಯಕ್ರಮಗಳು..!!

ಮಂಗಳೂರು: ನಗರದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ರಿಜಿಸ್ಟರ್ಡ್ ಮಂಗಳೂರು ಇದರ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ಜರಗಿತ್ತು.
 ಕಾರ್ಯಕ್ರಮವನ್ನು ಉದ್ಘಾಟಿಸಿ 
 ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ಡ್ ಮಂಗಳೂರಿನ ಅಧ್ಯಕ್ಷರಾದ  ಅರ್ಜುನ್ ಭಂಡಾರ್ಕರ್ ಅವರು  ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕೆಲಸ ಕಾರ್ಯಗಳು ಶ್ಲಾಘನೀಯವಾಗಿವೆ. ಅಂಗನವಾಡಿ ಕಾರ್ಯಕರ್ತರನ್ನು ಇಲಾಖೇತರ ಕೆಲಸಗಳಿಂದ ಸರಕಾರವು ಮುಕ್ತಿಗೊಳಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲು ಹೆಚ್ಚು ಅವಕಾಶ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ  ಸಂಘದ ಅಧ್ಯಕ್ಷರಾದ  ತಾರಾ ಬಲ್ಲಾಳ್ ಅಂಗನವಾಡಿ ಕಾರ್ಯಕರ್ತೆ ಹಾಗು ಸಹಾಯಕಿಯರನ್ನು ಗೌರವಧನದಿಂದ ಬಿಡುಗಡೆಗೊಳಿಸಿ ಸರಕಾರಿ  ಸಿ ಮತ್ತು ಡಿ ದರ್ಜೆ ನೌಕರರನ್ನಾಗಿ ಮಾಡ ಬೇಕು. ಇದಕ್ಕಾಗಿ ಕೋರ್ಟ್ ಮುಖಾಂತರ ಹೋರಾಟ ಮುಂದುವರೆಯುತ್ತದೆ. ಎಲ್ಲರೂ ಒಗ್ಗಟ್ಟಾಗಿದ್ದು ಸಹಕರಿಸುವಂತೆ ತಿಳಿಸಿದರು.

ಸುಮಂತ್ ರಾವ್ ಸದಸ್ಯರು ಕರ್ನಾಟಕ ರಾಜ್ಯ ಆಹಾರ ಆಯೋಗ, ನಿಶ್ಮಿತಾ ಶೋನಿತ್ ಉದ್ಯಮಿಗಳು, ಮಮತಾ ಅಣ್ಣಯ್ಯ ಕುಲಾಲ್ ಕಾರ್ಯದರ್ಶಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಮಂಜುಳಾ ಜಿ ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹಿರಿಯ ಮೇಲ್ವಿಚಾರಕಿ ಅಶ್ವಿನಿ, ಮೇಲ್ವಿಚಾರಕಿ ಅನುಪಮಾ, ಜಯಲಕ್ಷ್ಮಿ ಬಿ ಆರ್ ಅಧ್ಯಕ್ಷರು ದಕ್ಷಿಣ ಕನ್ನಡ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ  ಸಹಕಾರ ಸಂಘ ನಿಯಮಿತ, ವಿಶಾಲಾಕ್ಷಿ ಕೋಶಾಧಿಕಾರಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ, ಆಶಾಲತಾ ಎಂ ವಿ ಮಾಜಿ ಅಧ್ಯಕ್ಷರು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ  ಸಂಘ ಮಂಗಳೂರು ನಗರ, ವಿಜಯವಾಣಿ ಅಧ್ಯಕ್ಷರು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಬಂಟ್ವಾಳ, ಶೀಲಾವತಿ ಅಧ್ಯಕ್ಷರು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಮಂಗಳೂರು ನಗರ ಮುಖ್ಯ ಅತಿಥಿಗಳಾಗಿದ್ದರು.

 ಮಂಗಳೂರು ನಗರ ಸಂಘದ ಕಾರ್ಯದರ್ಶಿ ಸುಜಾತ, ಕೋಶಾಧಿಕಾರಿ  ಸವಿತಾ, ಉಪಾಧ್ಯಕ್ಷರಾದ ಭವಾನಿ ಮತ್ತು ಸುರೇಖಾ, ಜೊತೆ ಕಾರ್ಯದರ್ಶಿಗಳಾದ ಬೇಬಿ ಮತ್ತು ರೇಖಾ, ಮಮತಾ ಜಿಲ್ಲಾ ಪ್ರತಿನಿಧಿ  ಹಾಗೂ ವಲಯ ಪ್ರತಿನಿಧಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

 ಪಡೀಲ್ ವಲಯ ಕಾರ್ಯಕರ್ತೆಯರು ಪ್ರಾರ್ಥಿಸಿದರು. ಅಧ್ಯಕ್ಷೆ ಶೀಲಾವತಿ ಸ್ವಾಗತಿಸಿ ಕೋಶಾಧಿಕಾರಿ ಸವಿತ ವಂದಿಸಿದರು. ದೇವಿಕಾ  ಕಾರ್ಯಕ್ರಮ ನಿರೂಪಿಸಿದರು.
 ಕಾರ್ಯಕ್ರಮದಲ್ಲಿ ಅಭಿನಂದನೆ, ಗೌರವಾರ್ಪಣೆ, ನೆರವು ವಿತರಣೆ ಕಾರ್ಯಕ್ರಮ, ಲಕ್ಕಿ ಡಿಪ್ ಡ್ರಾ, ಬಹುಮಾನ ವಿತರಣೆ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

Ads on article

Advertise in articles 1

advertising articles 2

Advertise under the article