ಮಂಗಳೂರು: ಮಂಗಳೂರು ನಗರ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಇದರ ವಾರ್ಷಿಕೋತ್ಸವ ಸಾಧಕರಿಗೆ ಅಭಿನಂದನೆ, ಗೌರವಾರ್ಪಣೆ, ನೆರವು ವಿತರಣಾ ಕಾರ್ಯಕ್ರಮ,ಲಕ್ಕಿ ಡಿಪ್ ಡ್ರಾ, ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ.
Monday, March 2, 2026
ಮಂಗಳೂರು: ಮಂಗಳೂರು ನಗರ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಇದರ ವಾರ್ಷಿಕೋತ್ಸವ ನಗರದ ಹಂಪನಕಟ್ಟೆಯಲ್ಲಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು.
ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅರ್ಜುನ್ ಭಂಡಾರ್ಕರ್ ಉದ್ಘಾಟಿಸಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕೆಲಸ ಕಾರ್ಯಗಳು ಶ್ಲಾಘನೀಯ. ಅಂಗನವಾಡಿ ಕಾರ್ಯಕರ್ತರನ್ನು ಇಲಾಖೇತರ ಕೆಲಸಗಳಿಂದ ಸರಕಾರವು ಮುಕ್ತಿಗೊಳಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲು ಹೆಚ್ಚು ಅವಕಾಶ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷರಾದ ತಾರಾ ಬಲ್ಲಾಳ್ ವಹಿಸಿ, ಅಂಗನವಾಡಿ ಕಾರ್ಯಕರ್ತೆ ಹಾಗು ಸಹಾಯಕಿಯರನ್ನು ಗೌರವಧನದಿಂದ ಬಿಡುಗಡೆಗೊಳಿಸಿ ಸರಕಾರಿ ಸಿ ಮತ್ತು ಡಿ ದರ್ಜೆ ನೌಕರರನ್ನಾಗಿ ಮಾಡ ಬೇಕು. ಇದಕ್ಕಾಗಿ ಕೋರ್ಟ್ ಮುಖಾಂತರ ಹೋರಾಟ ಮುಂದುವರೆಯುತ್ತದೆ. ಎಲ್ಲರೂ ಒಗ್ಗಟ್ಟಾಗಿದ್ದು ಸಹಕರಿಸಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಸುಮಂತ್ ರಾವ್, ಉದ್ಯಮಿ ನಿಶ್ಮಿತಾ ಶೋನಿತ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಕಾರ್ಯದರ್ಶಿ ಮಮತಾ ಅಣ್ಣಯ್ಯ ಕುಲಾಲ್, ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಜಿ, ಹಿರಿಯ ಮೇಲ್ವಿಚಾರಕಿ ಅಶ್ವಿನಿ, ಮೇಲ್ವಿಚಾರಕಿ ಅನುಪಮಾ,ದಕ್ಷಿಣ ಕನ್ನಡ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಹಕಾರ ಸಂಘದ ಜಯಲಕ್ಷ್ಮಿ ಬಿ ಆರ್, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಕೋಶಾಧಿಕಾರಿ ವಿಶಾಲಾಕ್ಷಿ, ಮಾಜಿ ಅಧ್ಯಕ್ಷೆ ಆಶಾಲತಾ ಎಂ ವಿ,ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ವಿಜಯವಾಣಿ,ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ನಗರ ಅಧ್ಯಕ್ಷೆ ಶೀಲಾವತಿ ಮುಖ್ಯ ಅತಿಥಿಗಳಾಗಿದ್ದರು.
ಮಂಗಳೂರು ನಗರ ಸಂಘದ ಕಾರ್ಯದರ್ಶಿ ಸುಜಾತ, ಕೋಶಾಧಿಕಾರಿ ಸವಿತಾ, ಉಪಾಧ್ಯಕ್ಷರಾದ ಭವಾನಿ ಮತ್ತು ಸುರೇಖಾ, ಜೊತೆ ಕಾರ್ಯದರ್ಶಿಗಳಾದ ಬೇಬಿ ಮತ್ತು ರೇಖಾ, ಮಮತಾ ಜಿಲ್ಲಾ ಪ್ರತಿನಿಧಿ ಹಾಗೂ ವಲಯ ಪ್ರತಿನಿಧಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಪಡೀಲ್ ವಲಯ ಕಾರ್ಯಕರ್ತೆಯರು ಪ್ರಾರ್ಥಿಸಿದರು. ಅಧ್ಯಕ್ಷೆ ಶೀಲಾವತಿ ಸ್ವಾಗತಿಸಿ ಕೋಶಾಧಿಕಾರಿ ಸವಿತ ವಂದಿಸಿದರು. ದೇವಿಕಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಅಭಿನಂದನೆ, ಗೌರವಾರ್ಪಣೆ, ನೆರವು ವಿತರಣಾ ಕಾರ್ಯಕ್ರಮ,ಲಕ್ಕಿ ಡಿಪ್ ಡ್ರಾ, ಬಹುಮಾನ ವಿತರಣೆ ಹಾಗೂ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.