ಬಳ್ಳಾರಿ :ವೃದ್ಧೆಯ ಶವದ ಮುಂದೆ ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಿದ ಪ್ರಾಂಶುಪಾಲ....!

ಬಳ್ಳಾರಿ :ವೃದ್ಧೆಯ ಶವದ ಮುಂದೆ ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಿದ ಪ್ರಾಂಶುಪಾಲ....!

ಬಳ್ಳಾರಿ :ಪ್ರಾಂಶುಪಾಲರೊಬ್ಬರು ವೃದ್ಧೆಯ ಶವದ ಮುಂದೆ ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಿರುವ ಘಟನೆ ಬಳ್ಳಾರಿಯ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

 ಜನವರಿ 28 ರಂದು ಸಣ್ಣಕ್ಕಿ ಕಾಮಾಕ್ಷಮ್ಮ ಎಂಬುವವರು ನಿಧನರಾಗಿದ್ದರು. ಈ ವೇಳೆ ಗ್ರಾಮದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷರೂ ಹಾಗೂ ಮುಖ್ಯ ಶಿಕ್ಷಕರೂ ಆಗಿರುವ ಎಂ. ಹನುಮಂತಪ್ಪ, ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಶವದ ಮುಂದೆ ಕರೆತಂದು ನಿಲ್ಲಿಸಿದ್ದಾರೆ. ಅಂತಿಮ ದರ್ಶನದ ವೇಳೆ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಿರುವುದು ಈಗ ವಿವಾದದ ಕಿಡಿ ಹೊತ್ತಿಸಿದೆ.

ರಾಷ್ಟ್ರಗೀತೆಯನ್ನು ಯಾವಾಗ, ಎಲ್ಲಿ ಮತ್ತು ಯಾವ ಸಂದರ್ಭದಲ್ಲಿ ಹಾಡಬೇಕು ಎಂಬ ನಿರ್ದಿಷ್ಟ ನಿಯಮಗಳಿವೆ. ರಾಷ್ಟ್ರೀಯ ಹಬ್ಬಗಳು ಅಥವಾ ಅಧಿಕೃತ ಕಾರ್ಯಕ್ರಮಗಳಲ್ಲಿ ಗೌರವಪೂರ್ವಕವಾಗಿ ಹಾಡಬೇಕಾದ ರಾಷ್ಟ್ರಗೀತೆಯನ್ನು, ಶವ ಸಂಸ್ಕಾರದ ವೇಳೆ ಹಾಡಿಸುವ ಮೂಲಕ ಪ್ರಾಂಶುಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ‘ಪ್ರಾಂಶುಪಾಲರು ತಮಗೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

Ads on article

Advertise in articles 1

advertising articles 2

Advertise under the article