ಮಧ್ಯಪ್ರದೇಶ :ಸ್ನಾನಕ್ಕೆ ಹೋಗಿ ನೀರಲ್ಲಿ ಮುಳುಗಿದ 9 ಸ್ನೇಹಿತರು; 7 ಬಾಲಕರ ರಕ್ಷಣೆ, ಇಬ್ಬರು ಸಾವು...

ಮಧ್ಯಪ್ರದೇಶ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಭಾರಿ ದುರಂತವೊಂದು ಸಂಭವಿಸಿದೆ. ಸೋಮವಾರ ಸಂಜೆ ಕರೋಂಡಿಯಾ ಗ್ರಾಮದ ಗಣಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಇಬ್ಬರು ಹದಿಹರೆಯದವರು ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಕಿಶನ್‌ಪುರ ನಿವಾಸಿಗಳಾದ ಅನಸ್ ಖಾನ್ (16) ಮತ್ತು ಶುಭಮ್ ಜತ್ವಾ (17) ಎಂದು ಗುರುತಿಸಲಾಗಿದೆ. ಇತರ ಏಳು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ರಕ್ಷಣಾ ತಂಡವು ಸ್ಥಳಕ್ಕಾಗಮಿಸಿ ರಾತ್ರಿ 10:30 ರ ಸುಮಾರಿಗೆ ಅಪ್ರಾಪ್ತ ವಯಸ್ಕರಲ್ಲಿ ಒಬ್ಬನ ಶವವನ್ನು ಹೊರತೆಗೆದರು. ಇನ್ನೋರ್ವನ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.
ಒಂಬತ್ತು ಅಪ್ರಾಪ್ತ ವಯಸ್ಕ ಮಕ್ಕಳು ಆಳವಾದ ನೀರಿನಲ್ಲಿ ಮುಳುಗಿದ್ದರಿಂದ ಈ ದುರಂತ ಸಂಭವಿಸಿದೆ. ಈ ಕುರಿತು ನಾನಖೇಡಾ ಸಿಎಸ್ಪಿ ಶ್ವೇತಾ ಗುಪ್ತಾ ಮಾತನಾಡಿ, "ಸೋಮವಾರ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಕರೋಂಡಿಯಾ ಬಳಿಯ ಗಣಿಯಲ್ಲಿ ಸ್ನಾನ ಮಾಡಲು ಒಂಬತ್ತು ಸ್ನೇಹಿತರು ಹೋಗಿದ್ದರು. ಇಬ್ಬರು ಅಪ್ರಾಪ್ತ ವಯಸ್ಕರು ನೀರಿನ ಆಳವನ್ನು ತಿಳಿಯುವಲ್ಲಿ ವಿಫಲರಾದರು ಮತ್ತು ಮುಳುಗಲು ಪ್ರಾರಂಭಿಸಿದರು. ಇತರ ಸ್ನೇಹಿತರು ಅವರನ್ನು ರಕ್ಷಿಸಲು ಮುಂದೆ ಧಾವಿಸಿದರು, ಆದರೆ ಗಣಿಯ ಹೆಚ್ಚು ಆಳವಾಗಿದ್ದರಿಂದ ಸ್ಥಳದಲ್ಲಿ ಆತಂಕ ಶುರುವಾಯಿತು. ಸ್ಥಳೀಯ ನಿವಾಸಿಗಳು ಮತ್ತು ರಕ್ಷಣಾ ತಂಡಗಳ ಸಹಾಯದಿಂದ, ಏಳು ಮಕ್ಕಳನ್ನು ರಕ್ಷಿಸಲಾಯಿತು. ಅನಸ್ ಖಾನ್ (16) ಮತ್ತು ಶುಭಮ್ ಜತ್ವಾ (17) ಎಂಬ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದರು'' ಎಂದು ಮಾಹಿತಿ ನೀಡಿದರು.
ಪೋಷಕರ ಕೂಗು ಮತ್ತು ಕಿರುಚಾಟದ ನಡುವೆಯೇ ರಕ್ಷಣಾ ಕಾರ್ಯ ಆರಂಭವಾಯಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿತು. ಆಡಳಿತವು SDERF ಮತ್ತು ಗೃಹರಕ್ಷಕ ದಳದ ತಂಡಗಳನ್ನು ಕಳುಹಿಸಿ ಕಾರ್ಯಾಚರಣೆ ಪ್ರಾರಂಭಿಸಿತು. ಸಂಜೆ 5 ಗಂಟೆ ಸುಮಾರಿಗೆ, ಉಳಿದ ಇಬ್ಬರು ಮಕ್ಕಳಿಗಾಗಿ ಡೈವರ್‌ಗಳನ್ನು ಬಳಸಿಕೊಂಡು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಹುಡುಕಾಟವು ಹಲವು ಗಂಟೆಗಳ ಕಾಲ ಮುಂದುವರೆಯಿತು ಮತ್ತು ನೀರೊಳಗೆ ರಕ್ಷಣಾ ಕ್ಯಾಮರಾಗಳನ್ನು ಸಹ ಬಳಸಲಾಯಿತು. ರಾತ್ರಿ 10:30 ಕ್ಕೆ, ರಕ್ಷಣಾ ತಂಡವು ಒಬ್ಬನ ಶವವನ್ನು ಹೊರತೆಗೆದಿದ್ದು ಇನ್ನೊಬ್ಬನಿಗಾಗಿ ಶೋಧಕಾರ್ಯವನ್ನು ತಡರಾತ್ರಿಯವರೆಗೂ ಮುಂದುವರೆಸಿತು.
ಘಟನೆಯ ಬಗ್ಗೆ ನಿಯಂತ್ರಣ ಕೊಠಡಿಯಿಂದ ಮಾಹಿತಿ ಬಂದ ತಕ್ಷಣ, ನಮ್ಮ ತಂಡ ಸ್ಥಳಕ್ಕೆ ತಲುಪಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಂತರ, ಕಾರ್ಯಾಚರಣೆಯಲ್ಲಿ ಮತ್ತೊಂದು ತಂಡವನ್ನು ನಿಯೋಜಿಸಲಾಯಿತು. ಸಂಜೆಯಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಶುಭಮ್ ರಾತ್ರಿ 10:30 ರ ಸುಮಾರಿಗೆ ಪತ್ತೆಯಾಗಿದ್ದಾನೆ. ಎರಡೂ ತಂಡಗಳು ಮತ್ತೊಬ್ಬ ಬಾಲಕ ಅನಸ್ಗಾಗಿ ಹುಡುಕಾಟ ನಡೆಸುತ್ತಿವೆ" ಎಂದು ಎಸ್‌ಡಿಇಆರ್‌ಎಫ್ ಮತ್ತು ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಸಂತೋಷ್ ಜಾಟ್ ಹೇಳಿದರು.