ಚಾಮರಾಜನಗರ : ಹಬ್ಬಕ್ಕೆಂದು ಬಂದು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು; ಕಾರಣ ನಿಗೂಢ...!!
Thursday, April 2, 2026
ಚಾಮರಾಜನಗರ : ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಹಾಡಿಯಲ್ಲಿ ನಡೆದಿದೆ.
ಮೀಣ್ಯಂ ಗ್ರಾ. ಪಂ. ವ್ಯಾಪ್ತಿಯ ನಾಗೇಂದ್ರ(21), ಪಾಲಾರ್ ಗ್ರಾಮದ ನದಿಯಾ(19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಪೊನ್ನಾಚಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಹಬ್ಬ ನಡೆಯುತ್ತಿತ್ತು. ಈ ಹಬ್ಬಕ್ಕೆ ನಾಗೇಂದ್ರನ ತಾತ ಶಿವಮಾದಯ್ಯ ಅವರ ಮನೆಗೆ ನಾಗೇಂದ್ರ, ನದಿಯಾ ಕಳೆದ ಮೂರು ದಿನಗಳ ಹಿಂದೆ ಆಗಮಿಸಿ ಉಳಿದುಕೊಂಡಿದ್ದರು. ಈ ನಡುವೆ ನದಿಯಾ ತಂದೆ ಮಹಾದೇವ್ ಮಲೆ ಮಹದೇಶ್ವರ ಬೆಟ್ಟದ ಠಾಣೆಗೆ ಮಗಳು ಕಾಣೆಯಾಗಿದ್ದಾಳೆಂದು ದೂರು ಕೂಡ ಕೊಟ್ಟಿದ್ದರು. ನಿನ್ನೆ ತಡರಾತ್ರಿ ನದಿಯಾ ಮತ್ತು ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟದ ಪೊಲೀಸರು, ವಿಧಿ ವಿಜ್ಞಾನ ತಂಡದ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.