ಶಿವಮೊಗ್ಗ :ಕಟ್ಟಿಗೆ ಒಲೆಯಲ್ಲೇ ಆನೆಗಳಿಗೆ ರಾಗಿ ಮುದ್ದೆ ತಯಾರಿಸುತ್ತಿರುವ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ..!!

ಶಿವಮೊಗ್ಗ :ಕಟ್ಟಿಗೆ ಒಲೆಯಲ್ಲೇ ಆನೆಗಳಿಗೆ ರಾಗಿ ಮುದ್ದೆ ತಯಾರಿಸುತ್ತಿರುವ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ..!!

staff-at-sakrebailu-elephant-camp-are-preparing-food-for-elephants-in-a-wood-fired-oven

ಶಿವಮೊಗ್ಗ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಪ್ರಪಂಚದಾದ್ಯಂತ ತೈಲ ಬಿಕ್ಕಟ್ಟು ಉಂಟಾಗಿದೆ. ಅದರಲ್ಲೂ ಅಡುಗೆ ಅನಿಲದ‌ ಸಮಸ್ಯೆ ಹೆಚ್ಚಾಗಿದೆ. ಗ್ಯಾಸ್ ಬಿಸಿ ಈಗ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೂ ತಟ್ಟಿದೆ.

ಇಲ್ಲಿ ಆನೆಗಳಿಗೆ ಮುದ್ದೆ ತಯಾರು ಮಾಡಲು ಮೊದಲು ಗ್ಯಾಸ್ ಬಳಸಲಾಗುತ್ತಿತ್ತು. ಪ್ರತಿನಿತ್ಯವೂ ಒಂದು ಕ್ವಿಂಟಾಲ್​ಗೂ ಅಧಿಕ ಮುದ್ದೆಯನ್ನು 24 ಆನೆಗಳಿಗೆ ತಯಾರು ಮಾಡಲಾಗುತ್ತಿದೆ. ಈಗ ಆನೆಗಳನ್ನು ಪಳಗಿಸುವ ಕ್ರಾಲ್ ಬಳಿ ಮಾವುತರು, ಜಮೇದಾರರು ಕಟ್ಟಿಗೆ ಒಲೆಯಲ್ಲಿ ಮುದ್ದೆ ತಯಾರಿಸುತ್ತಿದ್ದಾರೆ.

ಆನೆ ಬಿಡಾರದಲ್ಲಿ ಮರಿಯಾನೆಗಳು ಸೇರಿ ಒಟ್ಟು 24 ಆನೆಗಳಿವೆ. ಇಲ್ಲಿ ಆನೆಗಳಿಗೆ ಹುರುಳಿಕಾಳು, ಕುಚ್ಚಲಕ್ಕಿ, ರಾಗಿ ಹಿಟ್ಟು, ಉಪ್ಪು, ಹೆಸರು ಕಾಳು ಸೇರಿಸಿ ಮುದ್ದೆ ತಯಾರಿಸಿ, ಆನೆಗಳ ದೇಹದ ತೂಕಕ್ಕೆ ತಕ್ಕಂತೆ ನೀಡಲಾಗುತ್ತದೆ. ಆನೆಗಳಿಗ ಮುದ್ದೆ ತಯಾರಿಸಲು ನಿತ್ಯ ಅರ್ಧ ಕಮರ್ಷಿಯಲ್ ಸಿಲಿಂಡರ್ ಬೇಕಾಗಿತ್ತು. ತಿಂಗಳಿಗೆ 15-16 ಸಿಲಿಂಡರ್ ಬೇಕಿತ್ತು. ಆದರೆ ಈಗ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದಾಗಿ ಅನಿವಾರ್ಯವಾಗಿ ಸಿಬ್ಬಂದಿ ಸೌದೆ ಒಲೆ‌ ಮೊರೆ ಹೋಗಿದ್ದಾರೆ.

ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದಾಗಿ ಸೌದೆ ಒಲೆ ಬಳಸುತ್ತಿದ್ದೇವೆ. ಗ್ಯಾಸ್ ಸಿಗದ ಕಾರಣಕ್ಕೆ ಸೌದೆ ಒಲೆಯಲ್ಲೇ ಮುದ್ದೆ ತಯಾರು ಮಾಡುತ್ತಿದ್ದೇವೆ. ಹುರುಳಿ ಕಾಳು ಬೇಯಲು ಸಮಯ ಬೇಕು. ಹಾಗಾಗಿ ರಾತ್ರಿಯೇ ಬೇಯಲು ಹಾಕಿ, ಬೆಳಗ್ಗೆ ಕಾಳು, ಅಕ್ಕಿ ಹಾಕಿ ಮುದ್ದೆ ತಯಾರು ಮಾಡಲಾಗುತ್ತದೆ‌. ಮುದ್ದೆಗಳ ಬಿಸಿ ಕಡಿಮೆಯಾದ ಮೇಲೆ ಆನೆಗಳಿಗೆ ನೀಡಲಾಗುತ್ತದೆ. ಮೇಲಾಧಿಕಾರಿಗಳ ಆದೇಶದಂತೆ ಸೌದೆ ಒಲೆ ಬಳಸಲುತ್ತಿದ್ದೇವೆ. ಮಳೆ ಬಂದ್ರೆ ಸಮಸ್ಯೆ ಉಂಟಾಗುತ್ತದೆ" ಎಂದು ತಿಳಿಸಿದರು.

staff-at-sakrebailu-elephant-camp-are-preparing-food-for-elephants-in-a-wood-fired-oven

ಹಾವೇರಿಯಲ್ಲಿ ಗ್ಯಾಸ್​ ಸಿಲಿಂಡರ್ ಏಜೆನ್ಸಿ ಮುಂದೆ ನೋ ಸ್ಟಾಕ್ ಬೋರ್ಡ್: ಹಾವೇರಿಯಲ್ಲಿ ಅಡುಗೆ ಅನಿಲ ಸಮಸ್ಯೆ ದಿನ ದಿನಕ್ಕೆ ಬಿಗಡಾಯಿಸುತ್ತಿದೆ. ಮೊದಮೊದಲು ವಾಣಿಜ್ಯ ಸಿಲಿಂಡರ್​ಗಳ ಕೊರತೆ ಕಂಡುಬಂದರೆ ಇದೀಗ ಜನಸಾಮಾನ್ಯರು ಬಳಸುವ ಅಡುಗೆ ಅನಿಲ ಸಿಲಿಂಡರ್ ಕೊರತೆಯೂ ಕಾಣಿಸಲಾರಂಭಿಸಿದೆ. ಹೆಚ್​ಪಿ ಸಿಲಿಂಡರ್ ಪೂರೈಸುವ ಏಜೆನ್ಸಿಯೊಂದು ಸೋಮವಾರ ನೋ ಸ್ಟಾಕ್ ಎಂದು ಬೋರ್ಡ್ ಹಾಕಿತ್ತು.

staff-at-sakrebailu-elephant-camp-are-preparing-food-for-elephants-in-a-wood-fired-oven

ಇದರಿಂದಾಗಿ ಸಿಲಿಂಡರ್‌ ತೆಗೆದುಕೊಳ್ಳಲು ದೂರ ದೂರದ ಗ್ರಾಮಗಳಿಂದ ಬಂದಿದ್ದ ಗ್ರಾಹಕರು ಪರದಾಡುವಂತಾಗಿತ್ತು. ಪ್ರತಿದಿನವೂ ಒಂದೊಂದು ಕಾರಣ ಹೇಳುತ್ತಿದ್ದ ಏಜೆನ್ಸಿ ಸಿಬ್ಬಂದಿ ಇದೀಗ ನೋ ಸ್ಟಾಕ್ ಬೋರ್ಡ್ ಹಾಕಿದ್ದು ಗ್ರಾಹಕರನ್ನು ರೊಚ್ಚಿಗೆಬ್ಬಿಸಿತ್ತು. "ಮನೆಯಲ್ಲಿ ರೋಗಿಗಳು, ವೃದ್ಧರು, ಬಾಣಂತಿಯರಿದ್ದಾರೆ. ಅವರಿಗೆ ಅಡುಗೆ ಮಾಡಿ ಹಾಕಲು ಸಿಲಿಂಡರ್ ಬೇಕು. ಆದರೆ ಇಲ್ಲಿ ಬಂದರೆ ಈ ರೀತಿ ನೋ ಸ್ಟಾಕ್ ಬೋರ್ಡ್​ ಹಾಕಿದ್ದಾರೆ" ಎಂದು ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article