ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ 167 ಕೋಟಿ ರೂ ದಾಖಲೆಯ ಆದಾಯ: ಸತತ 15ನೇ ವರ್ಷವೂ ರಾಜ್ಯದ ನಂ.1 ದೇವಾಲಯ!

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ 167 ಕೋಟಿ ರೂ ದಾಖಲೆಯ ಆದಾಯ: ಸತತ 15ನೇ ವರ್ಷವೂ ರಾಜ್ಯದ ನಂ.1 ದೇವಾಲಯ!

UKKE SUBRAHMANYA income  KARNATAKA RICHEST TEMPLE  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆದಾಯ  ಶ್ರೀಮಂತ ದೇವಾಲಯ  KUKKE SUBRAHMANYA TEMPLE REVENUE

ಸುಬ್ರಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಮತ್ತೊಮ್ಮೆ ತನ್ನ ಮಹಿಮೆಯನ್ನು ಸಾಬೀತುಪಡಿಸಿದೆ. 2025-26ನೇ ಆರ್ಥಿಕ ವರ್ಷದಲ್ಲಿ ದೇವಳವು ದಾಖಲೆಯ 167.89 ಕೋಟಿ ರೂ. ಆದಾಯ ಗಳಿಸಿ ರಾಜ್ಯದ ಮುಜರಾಯಿ ಇಲಾಖೆಯ ಅಧೀನದ ದೇವಸ್ಥಾನಗಳಲ್ಲಿ ಸತತ 15ನೇ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡಿದೆ.

ಕಳೆದ 2024-25ನೇ ಸಾಲಿನಲ್ಲಿ 155 ಕೋಟಿ ರೂ. ಆದಾಯ ಗಳಿಸಿದ್ದ ದೇವಳವು, ಈ ಬಾರಿ ಸುಮಾರು 12 ಕೋಟಿ ರೂ. ಹೆಚ್ಚುವರಿ ಸಂಗ್ರಹ ಮಾಡಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಇದು ಕುಕ್ಕೆ ಕ್ಷೇತ್ರದ ಮೇಲಿನ ಭಕ್ತರ ಅಪಾರ ನಂಬಿಕೆ ಮತ್ತು ನಾಗಾರಾಧನೆಯ ವೈಭವಕ್ಕೆ ಸಾಕ್ಷಿಯಾಗಿದೆ.

UKKE SUBRAHMANYA income  KARNATAKA RICHEST TEMPLE  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆದಾಯ  ಶ್ರೀಮಂತ ದೇವಾಲಯ  KUKKE SUBRAHMANYA TEMPLE REVENUE

ಯಾವ ಮೂಲಗಳಿಂದ ಬಂದಿತು ಭಾರೀ ಆದಾಯ? ದೇವಳದ ಆದಾಯದಲ್ಲಿ ಪ್ರಮುಖ ಪಾಲು ಹರಕೆ ಸೇವೆ, ಹುಂಡಿ ಕಾಣಿಕೆ, ಶಾಶ್ವತ ಸೇವಾ ನಿಧಿ, ಛತ್ರ ಹಾಗೂ ಕಟ್ಟಡ ಬಾಡಿಗೆ, ಅನ್ನಸಂತರ್ಪಣೆ ನಿಧಿ, ಹೂಡಿಕೆ ಬಡ್ಡಿ ಮತ್ತು ಕೃಷಿ ತೋಟದ ಆದಾಯದಿಂದ ಬಂದಿದೆ.

ಹುಂಡಿಯಿಂದಲೇ ಸುಮಾರು 24.69 ಕೋಟಿ ರೂ., ಅನ್ನಸಂತರ್ಪಣೆ ನಿಧಿಯಿಂದ 9.14 ಕೋಟಿ ರೂ., ಛತ್ರ ಸಂರಕ್ಷಣಾ ವಂತಿಗೆಯಿಂದ 6.93 ಕೋಟಿ ರೂ., ಶಾಶ್ವತ ಸೇವಾ ಮೂಲ ಧನದಿಂದ 2.56 ಕೋಟಿ ರೂ., ಕಟ್ಟಡ ಮತ್ತು ಅಂಗಡಿ ಬಾಡಿಗೆಯಿಂದ ಲಕ್ಷಾಂತರ ರೂಪಾಯಿ ಆದಾಯ ದಾಖಲಾಗಿದೆ.

ಖರ್ಚು ಎಷ್ಟು? 2025-26ನೇ ಸಾಲಿನಲ್ಲಿ ದೇವಳದ ಒಟ್ಟು ವೆಚ್ಚವು 85.20 ಕೋಟಿ ರೂ. ಆಗಿದೆ. ಭಕ್ತರ ಸೇವೆ, ಅಭಿವೃದ್ಧಿ ಕಾಮಗಾರಿಗಳು, ಅನ್ನಸಂತರ್ಪಣೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೂಲಸೌಕರ್ಯ ವೃದ್ಧಿಗೆ ಈ ಮೊತ್ತ ಬಳಸಲಾಗಿದೆ.

19 ಕೋಟಿಯಿಂದ 167 ಕೋಟಿವರೆಗೆ: 2006-07ರಲ್ಲಿ ಕೇವಲ 19.76 ಕೋಟಿ ರೂ. ಆದಾಯ ಹೊಂದಿದ್ದ ಕುಕ್ಕೆ ದೇವಳವು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಮತ್ತು ಸೇವೆಗಳ ವೃದ್ಧಿಯಿಂದ ಇಂದು 167 ಕೋಟಿಗೂ ಅಧಿಕ ಆದಾಯದ ಮಹಾಕ್ಷೇತ್ರವಾಗಿ ಬೆಳೆದಿದೆ.

ವರ್ಷ

ಆದಾಯ

(ಕೋಟಿ ರೂ ಗಳಲ್ಲಿ)

2006-07 -19.76
2007-08 -24
2010-11-48
2015-16 -88
2022-23 -123
2024-25 -155
2025-26167

ರಾಜ್ಯದ ಶ್ರೀಮಂತ ದೇವಳಗಳಲ್ಲಿ ಅಗ್ರಸ್ಥಾನ: ರಾಜ್ಯದ ಪ್ರಸಿದ್ಧ ದೇವಸ್ಥಾನಗಳ ಪೈಕಿ ಈಗಾಗಲೇ ಪ್ರಮುಖ ಸ್ಥಾನದಲ್ಲಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು, ನಿರಂತರ ಆದಾಯ ವೃದ್ಧಿಯಿಂದ 'ರಾಜ್ಯದ ನಂ.1 ಆದಾಯದ ಮುಜರಾಯಿ ದೇವಳ' ಎಂಬ ಗೌರವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಭಕ್ತರ ವಿಶ್ವಾಸ, ನಾಗದೇವರ ಆರಾಧನೆ, ಧಾರ್ಮಿಕ ನಂಬಿಕೆ ಮತ್ತು ವ್ಯವಸ್ಥಿತ ಆಡಳಿತ ಇವೆಲ್ಲವೂ ಸೇರಿ ಕುಕ್ಕೆ ಕ್ಷೇತ್ರವನ್ನು ಕರ್ನಾಟಕದ ಅತ್ಯಂತ ಶ್ರೀಮಂತ ಹಾಗೂ ಭಕ್ತಿಪೂರ್ಣ ಕ್ಷೇತ್ರಗಳ ಪೈಕಿ ಅಗ್ರಸ್ಥಾನಕ್ಕೆ ತಂದು ನಿಲ್ಲಿಸಿವೆ.


Ads on article

Advertise in articles 1

advertising articles 2

Advertise under the article