ಕೋಲ್ಕತ್ತ: ಕಾಲೇಜಿನ ಕೊಠಡಿಯಲ್ಲಿ ಹಲ್​ಚಲ್​​; ಗೆದ್ದಲು ಹಿಡಿದ 1 ಕೋಟಿ ನೋಟುಗಳು, ಪಿಸ್ತೂಲ್​, ಮದ್ಯ ಪತ್ತೆ..

ಕೋಲ್ಕತ್ತ: ಕಾಲೇಜಿನ ಕೊಠಡಿಯಲ್ಲಿ ಹಲ್​ಚಲ್​​; ಗೆದ್ದಲು ಹಿಡಿದ 1 ಕೋಟಿ ನೋಟುಗಳು, ಪಿಸ್ತೂಲ್​, ಮದ್ಯ ಪತ್ತೆ..


ಕೋಲ್ಕತ್ತಾದ ಕಾಲೇಜಿನ ಕೊಠಡಿಯಲ್ಲಿ ಹಲ್​ಚಲ್​​; ಗೆದ್ದಲು ಹಿಡಿದ 1 ಕೋಟಿ ನೋಟುಗಳು, ಪಿಸ್ತೂಲ್​, ಮದ್ಯ  ಪತ್ತೆ..Kolkata

ಕೋಲ್ಕತ್ತಾ: ಇಲ್ಲಿನ ಸುರೇಂದ್ರ ನಾಥ ಕಾಲೇಜಿನ ಯೂನಿಯನ್​ ಕೊಠಡಿಯಲ್ಲಿ ಒಂದು ಕೋಟಿ ರೂ.ವರೆಗೂ ಕಂತು ಕಂತು ನೋಟುಗಳುಗೆದ್ದಲು ಹಿಡಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಆ ಬೆನ್ನಲ್ಲೇ  ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕರ ಮಧ್ಯೆ ಆರೋಪ ಮತ್ತು ಪ್ರತ್ಯಾರೋಪ ದಾಳಿಗಳು ಜೋರಾಗಿವೆ.

2019ರ ನಂತ್ರ ಓಪನ್​

 2019 ರಿಂದ ಕ್ಯಾಂಪಸ್ ಚುನಾವಣೆಗಳು ನಡೆಯದ ಕಾರಣ, ಕಾಲೇಜುಗಳಲ್ಲಿನ ಸಂಘ ಕೊಠಡಿಗಳನ್ನು ಮುಚ್ಚುವಂತೆ ಕಲ್ಕತ್ತಾ ಹೈಕೋರ್ಟ್ ಆಗಿನ ಟಿಎಂಸಿ ಸರ್ಕಾರಕ್ಕೆ ನಿರ್ದೇಶನ ನೀಡಿದ ನಂತರ 2025 ರಲ್ಲಿ ಅದನ್ನು ಮುಚ್ಚಲಾಯಿತು. ಕಳೆದ ವರ್ಷ ಜೂನ್‌ನಲ್ಲಿ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನ ಒಕ್ಕೂಟ ಕೊಠಡಿಯಲ್ಲಿ 24 ವರ್ಷದ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರ ನ್ಯಾಯಾಲಯದ ಆದೇಶ ಬಂದಿತು. ಒಂದು ವರ್ಷದ ನಂತರ ವಿದ್ಯಾರ್ಥಿಗಳ ಸಂಘ ಕೊಠಡಿಯನ್ನು ತೆರೆಯಲಾಯಿತು. 

ವಿದ್ಯಾರ್ಥಿ ಸಂಘದ ನಿಧಿಯಿಂದ ವೆಚ್ಚ  ಮಾಡಕಾದ ಬಗ್ಗೆ ಲೆಕ್ಕಪರಿಶೋಧನೆ ನಡೆಸುವಂತೆ   ಸಿಎಂ ಸುವೇಂಧು ಅಧಿಕಾರಿ ಸೂಚನೆ ಕೊಟ್ಟಿದ್ದರು.   ಹೀಗಾಗಿ ಸುರೇಂದ್ರ ನಾಥ್​ ಕಾಲೇಜಿನ ಕೊಠಡಿ ತೆರೆಯಲಾಯ್ತು.  ಮಂಗಳವಾರ ನಡೆದ ಸ್ವಚ್ಛತಾ ಕಾರ್ಯಕ್ರಮದ ವೇಳೆ ಹಣ ಸಿಕ್ಕಿದೆ ಎನ್ನಲಾಗಿದೆ.

ಅಂದಾಜು ಕೋಟಿಯವರೆಗೂ ಹಣವಿರುವ ಶಂಕೆ

ಎರಡು ಸೂಟ್‌ಕೇಸ್‌ಗಳಲ್ಲಿ  ನೂರು ರೂಪಾಯಿ ಹಾಗೂ 500 ರೂಪಾಯಿಯ ಚಾಲನೆಯಲ್ಲಿರುವ ನೋಟುಗಳು ಪತ್ತೆಯಾಗಿದೆ. ಅಂದಾಜು ಒಂದು ಲಕ್ಷದವರೆಗೂ ಇದ್ದು,  ಇದು ತೃಣಮೂಲ ಕಾಂಗ್ರೆಸ್​​ನ  ಭ್ರಷ್ಟಾಚಾರದ ಹಣವಾಗಿದ್ದು ಕೂಡಲೇ ಯೂನಿಯನ್ ನಾಯಕರನ್ನು  ಬಂಧಿಸಬೇಕು ಎಂದು ಆಡಳಿತಾರೂಢ ಬಿಜೆಪಿ ಒತ್ತಾಯಿಸಿದೆ.

ಮಳೆಗಾಲ ಆರಂಭವಾಗುವ ಮೊದಲು ಶಿಕ್ಷಣ ಸಂಸ್ಥೆಗಳು ತಮ್ಮ ಆವರಣವನ್ನು ಸ್ವಚ್ಛಗೊಳಿಸುವಂತೆ ನಾಗರಿಕ ಅಧಿಕಾರಿಗಳು ಇತ್ತೀಚೆಗೆ ಸೂಚಿಸಿದ್ದರು. ಈ ಹಿನ್ನೆಲೆ ಸುರೇಂದ್ರ ನಾಥ ಕಾಲೇಜಿನಲ್ಲಿ  ಸ್ವಚ್ಛತಾ ಕಾರ್ಯ ನಡೆಯಿತಿತ್ತು. ಈ ಸಂದರ್ಭದಲ್ಲಿ  ನಗದು ಪತ್ತೆಯಾಗಿದೆ.  ನೋಟುಗಳು ಗೆದ್ದಲು ಹಿಡಿದು ಹಾಳಾಗಿದ್ದು, ಎಣಿಸಲು ಆಗದ ಸ್ಥಿತಿಯಲ್ಲಿರುವ ನೋಟುಗಳ ಫೋಟೋ ಹಾಗೂ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ. 

ಬಿಜೆಪಿಯಿಂದ ಟಿಎಂಸಿ ವಿರುದ್ಧ ಕಿಡಿ
ಸುರೇಂದ್ರನಾಥ್ ಕಾಲೇಜಿನ ವಿದ್ಯಾರ್ಥಿ ಸಂಘವು ಸುದೀರ್ಘ ಕಾಲದಿಂದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಯೂನಿಯನ್​ ತೃಣಮೂಲ ಛಾತ್ರ ಪರಿಷದ್' (TMCP) ನಿಯಂತ್ರಣದಲ್ಲಿದೆ. ಹೀಗಾಗಿ ತೃಣಮೂಲ ಕಾಂಗ್ರೆಸ್​​​​ ನಾಯಕರಿಂದ ಭ್ರಷ್ಟಚಾರ ನಡೆದಿದೆ. ಯಾರಿಗೂ ತಿಳಿಯದಂತೆ ಯೂನಿಯನ್​​ ಕೋಣೆಯೊಳಗೆ ಇಷ್ಟೊಂದು ಹಣ ಇಡಲು ಹೇಗೆ ಸಾಧ್ಯವಾಯಿತು ಎಂದು  ಬಿಜೆಪಿ ಶಾಸಕ ಸಜಲ್ ಘೋಷ್ ಹೇಳಿದರು. 

ಟಿಎಂಸಿ ಹೇಳೋದೇನು?

ಈ ಹಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಈ ಹಣವನ್ನು  ಸಂಘಟನೆಗಳು ಅಥವಾ ವಿರೋಧ ಪಕ್ಷದವರು  ಅಧಿಕಾರದಲ್ಲಿದ್ದಾಗ ಇಟ್ಟಿದ್ದ ಹಳೆಯ ಹಣವಾಗಿರಬಹುದು. ನಮ್ಮ ಪಕ್ಷದ ಇಮೇಜ್ ಹಾಳು ಮಾಡಲು ಈ ಬಿಜೆಪಿ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಹೇಳಿದರು. 

ಏನೆಲ್ಲ ಪತ್ತೆಯಾಗಿದೆ?

ಎರಡು ಎಸಿ ಬೆಡ್‌ರೂಂಗಳು, ಮದ್ಯದ ಬಾಟಲಿಗಳು, ಕಾಂಡೋಮ್ ಪ್ಯಾಕೆಟ್‌ಗಳು ಮತ್ತು ಒಂದು ರಿವಾಲ್ವರ್  ಪತ್ತೆಯಾಗಿದೆ

Ads on article

Advertise in articles 1

advertising articles 2

Advertise under the article