ಮೈಸೂರು :ಪಬ್ವೊಂದರಲ್ಲಿ ಭಾರಿ ಅಗ್ನಿ ಅವಘಢ; ಇಬ್ಬರು ಸಜೀವ ದಹನ; ಮಾಲೀಕ ಸೇರಿ 6 ಮಂದಿಗೆ ಗಂಭೀರ ಗಾಯ..
Monday, June 15, 2026

ಬೆಂಗಳೂರು: ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿರುವ ಫಾಕ್ಸ್ ಡೆಕ್ ಲಿಕ್ಕರ್ ಎಂಬ ಪಬ್ನಲ್ಲಿ(Mysore pub) ಸೋಮವಾರ(ಜೂ. 15) ಮಧ್ಯಾಹ್ನ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಸಜೀವದಹನವಾಗಿದ್ದು, ಮಾಲೀಕ ಸೇರಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಬ್ನ ಕಟ್ಟಡದ ಮೇಲ್ಭಾಗ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಮೃತರನ್ನು ಡಾರ್ಜಿಲಿಂಗ್‌ನ 26 ವರ್ಷದ ಸಾಹಿನ್ ಮತ್ತು ನೇಪಾಳದ 24 ವರ್ಷದ ಪ್ರಕಾಶ್ ಎಂದು ಗುರುತಿಸಲಾಗಿದೆ. ಪಬ್ ಮಾಲೀಕ ಪ್ರೀತಮ್ ಪುಮೀತ್ ಮತ್ತು ಗ್ರಾಹಕರಾದ ಸೋನು, ರಮೇಶ್, ಮಹಾದೇವ್ ಪ್ರಸಾದ್, ಪ್ರಜ್ವಲ್, ಅವಿನಾಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸರಸ್ವತಿಪುರಂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಅಗ್ನಿಶಾಮಕ ಅಧಿಕಾರಿ ರಂಗನಾಥ್, ನಾವು ಏಣಿಗಳನ್ನು ಬಳಸಿ ಸುಮಾರು 15 ಜನರನ್ನು ರಕ್ಷಿಸಿದ್ದೇವೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯನ್ನು ನಂದಿಸಲಾಗಿದೆ ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಜನರ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಇನ್ನೂ ಬೆಂಕಿ ಅವಘಡಕ್ಕೆ ಕಾರಣ ಮೇಲ್ನೋಟಕ್ದಕೆ ಶಾರ್ಟ್ ಸರ್ಕ್ಯೂಟ್ನಿಂದ ನಡೆದಿದೆ. ಮರದಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಇಡಲಾಗಿತ್ತು, ಇದು ಬೆಂಕಿ ಹಠಾತ್ತನೆ ಹರಡಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮಾಡುತ್ತಿದ್ದಾರೆ