ಬೆಂಗಳೂರು :ಛೇ ಎಂಥಾ ಜನ! ಐಷಾರಾಮಿ ಕಾರಲ್ಲಿ ಐಸ್‌ಕ್ರೀಂ ಚೆಲ್ಲಿದ ಮಗು: ಸಿಟ್ಟಿಗೆದ್ದು ಕೊಂದೇ ಬಿಟ್ಟ ತಾಯಿಯ ಲಿವ್‌ಇನ್ ಸಂಗಾತಿ..

ಬೆಂಗಳೂರು :ಛೇ ಎಂಥಾ ಜನ! ಐಷಾರಾಮಿ ಕಾರಲ್ಲಿ ಐಸ್‌ಕ್ರೀಂ ಚೆಲ್ಲಿದ ಮಗು: ಸಿಟ್ಟಿಗೆದ್ದು ಕೊಂದೇ ಬಿಟ್ಟ ತಾಯಿಯ ಲಿವ್‌ಇನ್ ಸಂಗಾತಿ..


ಛೇ ಎಂಥಾ ಜನ! ಐಷಾರಾಮಿ ಕಾರಲ್ಲಿ ಐಸ್‌ಕ್ರೀಂ ಚೆಲ್ಲಿದ ಮಗು: ಸಿಟ್ಟಿಗೆದ್ದು ಕೊಂದೇ ಬಿಟ್ಟ ತಾಯಿಯ ಲಿವ್‌ಇನ್ ಸಂಗಾತಿ..Bengaluru

ಬೆಂಗಳೂರು : ಮಾರ್ಚ್​​ನಲ್ಲಿ 6 ವರ್ಷದ ಪಿ. ವೆನ್ನೆಲ ಹೆಸರಿನ ಬಾಲಕಿ  ಮೃತಪಟ್ಟಿದ್ದ ಘಟನೆ ವರದಿಯಾಗಿತ್ತು. ಈ ಘಟನೆಯ ಸಂಬಂಧ ತನಿಖೆ ನಡೆಸಿದ ಬೆಂಗಳೂರಿನ ಕಾಡುಗೋಡಿ ಪೊಲೀಸರಿಗೆ, ಸಿಕ್ಕಿದ್ದು ಭಯಾನಕ ಸತ್ಯ.


 ಸದ್ಯ ಆರೋಪಿ ​​ 10 ದಿನಗಳ ಕಾಲ ಪೊಲೀಸರ ವಶದಲ್ಲಿದ್ದು. ತಾಯಿ ಪ್ರಿಯಾಂಕಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಯಾರು ಈ ಬಾಲಕಿ? 

ಬಾಲಕಿ ವೆನ್ನೆಲಾ ದಾವಣಗೆರೆಯ ಶಿಕ್ಷಣ ತಜ್ಞ ಪ್ರವೀಣ್  ಹಾಗೂ  ವಕೀಲೆ ಪ್ರಿಯಾಂಕಾರ ಪುತ್ರಿ. ಪ್ರಿಯಾಂಕಾ ತನ್ನ ಕಾಲೇಜು ಸ್ನೇಹಿತ ಹಾಗೂ  ರಿಯಲ್ ಎಸ್ಟೇಟ್ ಉದ್ಯಮಿ ಮೋಹನ್  ಜೊತೆ  ಸಂಬಂಧ ಬೆಳೆಸಿದ್ದರು. ಈ ಹಿನ್ನೆಲೆ ಪತಿಯಿಂದ ದೂರವಾಗಿ ಬೆಂಗಳೂರಿನ ಪೂರ್ವ ಭಾಗದ ಐಷಾರಾಮಿ ವಿಲ್ಲಾದಲ್ಲಿ ಆತನೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದಳು

ಮಾರ್ಚ್ 24ರಂದು ನಡೆದಿದ್ದೇನು?

ಮೋಹನ್ ಮತ್ತು ಪ್ರಿಯಾಂಕಾ ಜೊತೆಗೆ  ವೆನ್ನೆಲಾ ಸಹ ಮಾರ್ಚ್ 24 ರಂದು ಬೆಂಗಳೂರಿನ  ಪ್ರಸಿದ್ಧ ಏರಿಯಾ ಆದ ಇಂದಿರಾನಗರಕ್ಕೆ ಭೇಟಿ ಕೊಟ್ಟಿದ್ದರು. ಇಲ್ಲಿ ತಿಂಡಿ-ತಿನಿಸಿನ ಅಂಗಡಿಗೆ ತೆರಳಿದ್ದರು.  ಆ ದಿನವೇ ಮೂವರು ತಮ್ಮ ಮಲ್ಟಿ-ಯುಟಿಲಿಟಿ ವಾಹನದಲ್ಲಿ ಬೆಂಗಳೂರು ಹೊರವಲಯದ ಕಡೆಗೆ ಹೊರಟಾಗ ಅಲ್ಲಿ ಹೊಸಕೋಟೆ ಬಿರಿಯಾನಿ ಹಾಗೂ ಐಸ್​ಕ್ರೀಂ ತಿನ್ನಲು ನಿಂತರು

ಹೊಟ್ಟೆಗೆ ಗುದ್ದಿ ಬಾಯಿ ಮುಚ್ಚಿದ್ದ ಪಾಪಿ

ಹೊಸಕೋಟೆಯಿಂದ ವಾಪಸ್​ ಹೊರಟಾಗ ಆಕಸ್ಮಿಕವಾಗಿ ಐಸ್​ಕ್ರೀಂ ಕಾರಿನಲ್ಲಿ ಬಿದ್ದಿದೆ. ಹೀಗಾಗಿ, ಕಾರನ್ನು ಅರ್ಧದಾರಿಯಲ್ಲೇ  ನಿಲ್ಲಿಸಿ ಹೊಟ್ಟೆಗೆ ಗುದ್ದಿದ್ದಾನೆ. ಮಗು ಜೋರಾಗಿ ಅಳಲು ಶುರು ಮಾಡಿದಾಗ ಆಕೆಯ ಬಾಯನ್ನು ಮುಚ್ಚಿ ಉಸಿರುಗಟ್ಟಿಸಿದ್ದಾನೆ ಎಂದು ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ

ಎಸಿ ಹಾಕಿದ್ರಿಂದ ಮಗು ಸತ್ತಿದೆ ಎಂದಿದ್ದ ಕಿರಾತಕರು

ಘಟನೆ ನಡೆದ ಮರುದಿನ ಬೆಳಿಗ್ಗೆ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಮಗು ಅದಾಗಲೇ ಮೃತಪಟ್ಟಿದೆ ಎಂದಿದ್ದರು. ಕಾರಿನಲ್ಲಿ ಎಸಿ ಆನ್​ ಮಾಡಿ, ಮಗುವನ್ನು ಮಗಿಸಿ ಕೆಫೆಗೆ ಹೋದಾಗ ಉಸಿರುಗಟ್ಟಿ ಮೃತಪಟ್ಟಿರಬೇಕು ಎಂದು ಸುಳ್ಳು ಕತೆ ಕಟ್ಟಿದ್ದರು. 

ವರದಿಯಿಂದ ಸಿಕ್ತು ನಿಜಾಂಶ

ಆದರೆ, ಇತ್ತೀಚೆಗೆ ಪೊಲೀಸರಿಗೆ ಸಿಕ್ಕ ಹಿಸ್ಟೋಪಾಥಾಲಜಿ ವರದಿ ಪ್ರಕಾರ,  ಹೊಟ್ಟೆಗೆ ಬಿದ್ದ ಬಲವಾದ ಪೆಟ್ಟು ಬಿದ್ದಿರುವುದರಿಂದ ಒಳಭಾಗದಲ್ಲಿ ಗಾಯವಾಗಿದೆ.ಬಾಯಿ-ಮೂಗು ಮುಚ್ಚಿ ಉಸಿರುಗಟ್ಟಿಸಿದ್ದರಿಂದಲೇ ಮಗು ಸಾವನ್ನಪ್ಪಿದೆ  ಎಂದಿದ್ದರು. 

ಮೋಹನ್​ಗೂ ಮದುವೆಯಾಗಿತ್ತು

ಆರೋಪಿ ಮೋಹನ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ತನ್ನ ಕುಟುಂಬವನ್ನು ತೊರೆದು ಆತ ಪ್ರಿಯಾಂಕಾ ಜೊತೆ ವಾಸಿಸುತ್ತಿದ್ದ. ಪ್ರಿಯಾಂಕಾ ತನ್ನ ಪತಿ ಪ್ರವೀಣ್‌ಗೆ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. 

ವೆನ್ನಿಲಾ ತಂದೆಯಿಂದ ದೂರು

ಮಗಳ ಸಾವಿನ ನಂತರ ಪತಿ ಪ್ರವೀಣ್ ಜೂನ್ 4 ರಂದು ಕಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಮತ್ತು ಮೋಹನ್ ವಿರುದ್ಧ ಕೊಲೆ ದೂರು ದಾಖಲಿಸಿದ್ದರು. ತನ್ನ ಮತ್ತು ಮೋಹನ್ ಅವರ ಹೊಸ ಖಾಸಗಿ ಜೀವನಕ್ಕೆ 6 ವರ್ಷದ ಮಗಳು ವೆನ್ನೆಲಾ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಇಬ್ಬರೂ ಸೇರಿ ಮಗುವನ್ನು ಹತ್ಯೆ ಮಾಡಿದ್ದಾರೆ ಎಂದು ತಂದೆ ಆರೋಪಿಸಿದ್ದರು. ಸದ್ಯ ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ (FSL) ನೆರವಿನೊಂದಿಗೆ ಕಾರನ್ನು ತಪಾಸಣೆಗೆ ಒಳಪಡಿಸಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article