ಸ್ಪೇನ್ :ತಲೆನೋವು ಎನ್ನುತ್ತಿದ್ದ ವ್ಯಕ್ತಿಯ MRI ಸ್ಕ್ಯಾನ್​ ಕಂಡು ದಂಗಾದ ವೈದ್ಯರು​! ರಿಪೋರ್ಟ್​ನಲ್ಲಿ ಗೊತ್ತಾಯ್ತು ಭಯಾನಕ ವಿಷಯ..!!

ಸ್ಪೇನ್ :ತಲೆನೋವು ಎನ್ನುತ್ತಿದ್ದ ವ್ಯಕ್ತಿಯ MRI ಸ್ಕ್ಯಾನ್​ ಕಂಡು ದಂಗಾದ ವೈದ್ಯರು​! ರಿಪೋರ್ಟ್​ನಲ್ಲಿ ಗೊತ್ತಾಯ್ತು ಭಯಾನಕ ವಿಷಯ..!!


ತಲೆನೋವು ಎನ್ನುತ್ತಿದ್ದ ವ್ಯಕ್ತಿಯ MRI ಸ್ಕ್ಯಾನ್​ ಕಂಡು ದಂಗಾದ ವೈದ್ಯರು​! ರಿಪೋರ್ಟ್​ನಲ್ಲಿ ಗೊತ್ತಾಯ್ತು ಭಯಾನಕ ವಿಷಯ
ಸ್ಪೇನ್​: ಕಳೆದ ಎರಡು ವಾರಗಳಿಂದ ವಿಪರೀತ ತಲೆನೋವು ಎಂದು ಆಸ್ಪತ್ರೆಗೆ ದಾಖಲಾದ 60 ವರ್ಷ ವ್ಯಕ್ತಿಯೊಬ್ಬರು, ತಮ್ಮ ಎಂಆರ್​ಐ ಸ್ಕ್ಯಾನ್​ ರಿಪೋರ್ಟ್​ ಅನ್ನು ವೈದ್ಯರಿಗೆ ತೋರಿಸಿದ್ದೇ ತಡ ಅವರ ಮಿದುಳಿನಲ್ಲಿರುವ ಸಮಸ್ಯೆ (Tape Worms) ಕಂಡು ಒಂದು ನಿಮಿಷ ವೈದ್ಯರೇ ದಂಗಾಗಿ ಹೋಗಿದ್ದಾರೆ.   

ವಯೋನ್'​ ವರದಿ ಪ್ರಕಾರ, ಕೆಲವು ದಿನಗಳಿಂದ ಸಿಕ್ಕಾಪಟ್ಟೆ ತಲೆನೋವು ಎಂದು ಹೇಳಿದ ವ್ಯಕ್ತಿ, ಈ ನೋವನ್ನು ತಡೆಯಲು ಆಗುತ್ತಿಲ್ಲ ಎಂದು ವೈದ್ಯರ ಬಳಿ ಅಳಲು ತೋಡಿಕೊಂಡರು. ಇವರ ಮಾತನ್ನು ಸೂಕ್ಷ್ಮವಾಗಿ ಆಲಿಸಿದ ಡಾಕ್ಟರ್​, ಇದು ಮಿದುಳಿನ ಕ್ಯಾನ್ಸರ್ ಇರಬಹುದು ಎಂದು ಅನುಮಾನಿಸಿ, ಎಂಆರ್​ಐ ಸ್ಕ್ಯಾನ್​ ಮಾಡಿಸುವಂತೆ ಹೇಳಿದರು. ಅಂತೆಯೇ, ರಿಪೋರ್ಟ್​ ನೋಡಿದ ವೈದ್ಯರಿಗೆ, ಅಸಲಿಗೆ ಆತನ ಮಿದುಳಿನಲ್ಲಿ ಕ್ಯಾನ್ಸರ್ ಗಡ್ಡೆ ಬದಲಿಗೆ ಹುಳುಗಳಿರುವುದು ಸ್ಪಷ್ಟವಾಯಿತು.

ಇದಕ್ಕೂ ಮೊದಲು ವ್ಯಕ್ತಿಯನ್ನು ನರರೋಗ ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ, ಅವರ ದೈಹಿಕ ಚಲನೆಯಲ್ಲಿ ಮಂದಗತಿ ಇರುವುದನ್ನು ಬಿಟ್ಟರೆ ಬೇರಾವುದೇ ತೊಂದರೆ ಕಾಣಿಸಿಲ್ಲ. ಬ್ಲಡ್​ ಟೆಸ್ಟ್​ನಲ್ಲಿಯೂ ಅಂತಹ ಸಮಸ್ಯೆ ಏನೂ ಪತ್ತೆಯಾಗಲಿಲ್ಲ. ಆದರೆ, ರಕ್ತದಲ್ಲಿ IgE (ಇಮೋಗ್ಲೋಬಿನ್​ ಈ) ಎಂಬ ಅಂಶವು ಹೆಚ್ಚಾಗಿತ್ತು. ದೇಹದಲ್ಲಿ ಯಾವುದಾದರೂ ಅಲರ್ಜಿ, ಆಟೋಇಮ್ಯೂನ್ ಕಾಯಿಲೆ ಅಥವಾ ಪರಾವಲಂಬಿ ಜೀವಿಗಳ (Parasitic infections) ಸೋಂಕು ಇದ್ದಾಗ ಮಾತ್ರ ಈ IgE ಮಟ್ಟ ಹೆಚ್ಚಾಗುತ್ತದೆ. ಇದನ್ನು ವೈದ್ಯರು ದೃಡಪಡಿಸಿಕೊಂಡರು. 

ಆ ವ್ಯಕ್ತಿ ಇಲ್ಲಿಯವರೆಗೆ ಯಾವುದೇ ವಿದೇಶ ಪ್ರವಾಸ ಮಾಡಿರಲಿಲ್ಲ ಮತ್ತು ಅವರ ರೋಗನಿರೋಧಕ ಶಕ್ತಿಯೂ ಚೆನ್ನಾಗಿತ್ತು. ಹೀಗಾಗಿ, ವೈದ್ಯರು ಇದು ಬೇರೆ ಯಾವುದೋ ಅಂಗದಿಂದ ಮೆದುಳಿಗೆ ಹರಡಿರುವ ಕ್ಯಾನ್ಸರ್ ಇರಬಹುದು ಎಂದು ಬಲವಾಗಿ ನಂಬಿದ್ದರು. ಹೀಗಾಗಿಯೇ, ಸಿಟಿ ಸ್ಕ್ಯಾನ್, ಕೊಲೊನೋಸ್ಕೋಪಿ ಹಾಗೂ ಪಿಇಟಿ (PET) ಸ್ಕ್ಯಾನ್‌ಗಳನ್ನು ಮಾಡಿಸಿದರು. ಇಷ್ಟಾದರೂ ದೇಹದ ಯಾವುದೇ ಭಾಗದಲ್ಲೂ ಕ್ಯಾನ್ಸರ್ ಪತ್ತೆಯಾಗಲಿಲ್ಲ. ಬಳಿಕ ಕೊನೆಯದಾಗಿ ಎಂಆರ್​ಐ ಸ್ಕ್ಯಾನ್​ಗೆ ಕಳುಹಿಸಿದಾಗ ಅಸಲಿ ಸಂಗತಿ ಹೊರಬಿದ್ದಿತು.

ಮಿದುಳಿನ ಎಮ್‌ಆರ್‌ಐ ಸ್ಕ್ಯಾನ್ ರಿಪೋರ್ಟ್​ ನೋಡಿದ ವೈದ್ಯರು, ರೋಗಿಯ ತಲೆಯೊಳಗೆ ಗೆಡ್ಡೆಗಳ ಬದಲಿಗೆ ಹುಳಗಳು (ಟೇಪ್‌ವರ್ಮ್) ಹರಿದಾಡುತ್ತಿರುವುದು ಕಂಡು ದಂಗಾದರು. ವಿದೇಶಕ್ಕೆ ಹೋಗಿರುವ ಹಿಸ್ಟರಿಯೇ ಇಲ್ಲದ ವ್ಯಕ್ತಿಗೆ ಹುಳು ಬಂದಿದ್ದು ಎಲ್ಲಿಂದ? ಇದು ಹೇಗೆ ಸಾಧ್ಯ ಎಂದು ವೈದ್ಯ ತಂಡ ಗೊಂದಲಕ್ಕೆ ಒಳಗಾಯಿತು. 'ಎಮರ್ಜಿಂಗ್ ಇನ್ಫೆಕ್ಷಿಯಸ್ ಡಿಸೀಸ್' ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಸ್ಪೇನ್ ದೇಶದಲ್ಲಿ ಇಂತಹ ಪಟ್ಟಿಹುಳುಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ ಎಂದು ತಿಳಿಸಲಾಗಿದೆ.

ಈ ವ್ಯಕ್ತಿ 10 ವರ್ಷಗಳ ಹಿಂದೆ ಮನೆಕಟ್ಟುವ ಕೂಲಿಕಾರರಿಂದ ಮನೆಗಳ ನಿರ್ಮಾಣ ಕೆಲಸವನ್ನು ಮಾಡಿಸುತ್ತಿದ್ದರು. ಆ ನಂತರ ನಿವೃತ್ತಿ ಪಡೆದರು. ಇವರೊಟ್ಟಿಗೆ ಕೆಲಸ ಮಾಡಿದ್ದ ಒಂದಷ್ಟು ಸಹೋದ್ಯೋಗಿಗಳಲ್ಲಿ ಹೆಚ್ಚಿನವರು ಇಂತಹ ಪಟ್ಟಿಹುಳುಗಳ ಸೋಂಕುಗಳು ಹೆಚ್ಚಾಗಿ ಕಂಡುಬರುವ ದೇಶಗಳಿಂದ ಬಂದವರೇ ಆಗಿದ್ದರು. ಹೀಗಾಗಿ, ಅವರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡುವಾಗ ಅಥವಾ ಒಂದೇ ಶೌಚಾಲಯವನ್ನು ಬಳಸಿದಾಗ, ಯಾರೋ ಒಬ್ಬರಿಂದ ಈ ಸೋಂಕು ಹರಡಿರಬಹುದು ಎಂದು ಅನುಮಾನಿಸಲಾಗಿದೆ. ಸದ್ಯಕ್ಕೆ ಇದಕ್ಕೆ ಯಾವುದೇ ಪುರಾವೆಗಳು ಸಿಗದಿರುವುದು ಇಲ್ಲಿ ಗಮನಾರ್ಹ.

Ads on article

Advertise in articles 1

advertising articles 2

Advertise under the article