ಬೆಂಗಳೂರು :5-ಸ್ಟಾರ್ ಹೋಟೆಲ್‌ನಲ್ಲಿ ಊಟ ಮಾಡೋ ಮುನ್ನ ಹುಷಾರ್; ಅವಧಿ ಮೀರಿದ ಹಾಲು, ಮಾಂಸ, ಮೀನು ಪತ್ತೆ..!

ಬೆಂಗಳೂರು :5-ಸ್ಟಾರ್ ಹೋಟೆಲ್‌ನಲ್ಲಿ ಊಟ ಮಾಡೋ ಮುನ್ನ ಹುಷಾರ್; ಅವಧಿ ಮೀರಿದ ಹಾಲು, ಮಾಂಸ, ಮೀನು ಪತ್ತೆ..!

ಬೆಂಗಳೂರು :ಸ್ಟಾರ್ ಹೋಟೆಲ್‌ಗಳಲ್ಲಿ ದುಬಾರಿ ಹಣ ನೀಡಿ ಊಟ ಮಾಡುವ ಅಭ್ಯಾಸ ನಿಮಗಿದ್ದರೆ ಎಚ್ಚರ. ಹೊರಗಿನಿಂದ ಆಕರ್ಷಕವಾಗಿ ಕಂಗೊಳಿಸುವ ರಾಜಧಾನಿಯ ಪ್ರಮುಖ ಸ್ಟಾರ್ ಹೋಟೆಲ್‌ಗಳು ತಮ್ಮ ಗ್ರಾಹಕರಿಗೆ ಅವಧಿ ಮೀರಿದ, ಕೊಳೆತ ಮಾಂಸ ಹಾಗೂ ತರಕಾರಿಗಳು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಬಿಬಿಎಂಪಿ ಜೊತೆಗೂಡಿ ಆಗಸ್ಟ್ 7ರಂದು ಕಾರ್ಯಾಚರಣೆ ನಡೆಸಿದೆ. ಬೃಹತ್ ಬೆಂಗಳೂರಿನಾದ್ಯಂತ 30 ವಿಶೇಷ ಕಾರ್ಯಾಚರಣೆ ಪಡೆಗಳನ್ನು ರಚಿಸಿ, ನಗರದ 26 ಪ್ರಮುಖ ಸ್ಟಾರ್ ಹೋಟೆಲ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ 35 ಬಗೆಯ ಅನುಮಾನಸ್ಪದ ಆಹಾರ ಪದಾರ್ಥಗಳ ಮಾದರಿಯನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

2006ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯನ್ವಯ ನಡೆದ ಈ ತಪಾಸಣೆ ವೇಳೆ ಅಡುಗೆ ಮನೆಗಳಲ್ಲಿನ ಅಸ್ವಚ್ಛತೆ ಕಂಡ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  • ವೆಜ್ ಹಾಗೂ ನಾನ್-ವೆಜ್ ಪದಾರ್ಥಗಳನ್ನು ಒಂದೇ ಕಡೆ ಅಸಹ್ಯಕರವಾಗಿ ಸಂಗ್ರಹಿಸಿಡಲಾಗಿತ್ತು.
  • ದಿನಸಿ, ಸಾಸ್, ಹಾಲಿನ ಉತ್ಪನ್ನಗಳು ಮತ್ತು ಬೇಕರಿ ಸಾಮಗ್ರಿಗಳ ಮೇಲೆ ಯಾವುದೇ ಲೇಬಲಿಂಗ್ ಇರಲಿಲ್ಲ.
  • ಬೂಜು ಹಿಡಿದ ತರಕಾರಿಗಳು ಹಾಗೂ ದುರ್ವಾಸನೆ ಬೀರುವ ಮಾಂಸವನ್ನು ಅಡುಗೆಗೆ ಬಳಸಲಾಗುತ್ತಿತ್ತು.

ತಪಾಸಣೆ ವೇಳೆ ಕೆಟ್ಟುಹೋಗಿದ್ದ ಅಪಾರ ಪ್ರಮಾಣದ ಮಾಂಸ ಮತ್ತು ಆಹಾರ ಧಾನ್ಯಗಳನ್ನು ಜಪ್ತಿ ಮಾಡಲಾಗಿದೆ.

  • ಹೋಟೆಲ್ ಅಟ್ರಿಯಾ: ಬರೋಬ್ಬರಿ 105 ಕೆಜಿ ಗಡುವು ಮುಗಿದ ಆಹಾರ (50 ಕೆಜಿ ಚಿಕನ್, 25 ಕೆಜಿ ಮಟನ್, 23 ಕೆಜಿ ಮೀನು, 7 ಕೆಜಿ ತರಕಾರಿ).
  • ದಿ ಲಲಿತ್ ಅಶೋಕ್: 200 ಕೆಜಿ ಕೆಟ್ಟ ತರಕಾರಿ, 76 ಕೆಜಿ ಮಾಂಸ ಹಾಗೂ 32 ಲೀಟರ್ ಅವಧಿ ಮೀರಿದ ಹಾಲು.
  • ತಾಜ್ ಯಶವಂತಪುರ: 72 ಕೆಜಿ ಕಳಪೆ ದರ್ಜೆಯ ಮಾಂಸ ಹಾಗೂ ಸಲ್ಮನ್ ಮೀನು.
  • ಫೋರ್ ಸೀಸನ್ಸ್ ಹೋಟೆಲ್: 19 ಕೆಜಿ ಬಳಕೆಗೆ ಅನರ್ಹವಾದ ಮಾಂಸ.
  • ಶಾಂಗ್ರಿ-ಲಾ ಬೆಂಗಳೂರು: 15 ಕೆಜಿ ದುರ್ವಾಸನೆ ಬೀರುವ ಮಾಂಸ.
  • ತಾಜ್ ವಿವಾಂತ (ವೈಟ್‌ಫೀಲ್ಡ್): 3 ಕೆಜಿ ಅವಧಿ ಮೀರಿದ ಬೇಕರಿ ಸಾಮಗ್ರಿಗಳು.

ನಿಯಮಗಳನ್ನು ಗಾಳಿಗೆ ತೂರಿ ಗ್ರಾಹಕರ ಜೀವದ ಜೊತೆ ಆಟವಾಡಿದ ಎಲ್ಲಾ ಹೋಟೆಲ್ ಆಡಳಿತ ಮಂಡಳಿಗಳಿಗೆ ಇಲಾಖೆಯು ಈಗಾಗಲೇ ಅಧಿಕೃತ ನೋಟಿಸ್ ಜಾರಿ ಮಾಡಿದೆ. ಜಪ್ತಿ ಮಾಡಲಾದ ಆಹಾರ ಮಾದರಿಗಳ ಲ್ಯಾಬ್ ವರದಿ ಬಂದ ತಕ್ಷಣ ನ್ಯಾಯನಿರ್ಣಯಾಧಿಕಾರಿಗಳ ಮುಖಾಂತರ ಈ ಹೋಟೆಲ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article