ನವದೆಹಲಿ :ರಕ್ಷಣಾ ರಹಸ್ಯ ಸೋರಿಕೆ; ಪಾಕ್ ಹನಿ ಟ್ರ್ಯಾಪ್ ಬಲೆಗೆ ಬಿದ್ದ ವಾಯುಪಡೆ ಅಧಿಕಾರಿ ಬಂಧನ.
Saturday, August 8, 2026
ನವದೆಹಲಿ: ಪಾಕಿಸ್ತಾನಿ ಏಜೆಂಟ್‌ಗಳ ಹನಿ ಟ್ರ್ಯಾಪ್‌ಗೆ ಒಳಗಾಗಿ ಭಾರತದ ರಕ್ಷಣಾ ರಹಸ್ಯಗಳನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಒಬ್ಬರನ್ನು ಬಂಧಿಸಲಾಗಿದೆ. ಆರೋಪಿ ಅಧಿಕಾರಿ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ಅಧಿಕಾರಿಯ ಪರಿಚಯ ಮಾಡಿಕೊಂಡಿದ್ದ ಶಂಕಿತ ಪಾಕ್ ಮಹಿಳೆ, ವಿಡಿಯೋ ಕರೆ ಹಾಗೂ ಚಾಟಿಂಗ್ ಮೂಲಕ ಆಕರ್ಷಿಸಿ ರಕ್ಷಣಾ ಇಲಾಖೆಯ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಂಡಿದ್ದಳು.
ಈ ಪ್ರಕರಣದಲ್ಲಿ ಮತ್ತೊಬ್ಬ ಸಿಬ್ಬಂದಿ ಭಾಗಿಯಾಗಿರುವ ಶಂಕೆ ಇದ್ದು, ಅಧಿಕಾರಿಗಳ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ವಿಧಿವಿಜ್ಞಾನ (ಫೋರೆನ್ಸಿಕ್) ತಪಾಸಣೆಗೆ ಕಳುಹಿಸಲಾಗಿದೆ. ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ.