ಆಹಾರ -ಆರೋಗ್ಯ :ಡಾರ್ಕ್ ಚಾಕೊಲೇಟ್ ತಿಂದ್ರೆ ಬಿಪಿ, ಶುಗರ್ ನಿಯಂತ್ರಣಕ್ಕೆ ಬರುತ್ತಾ? ಇಲ್ಲಿದೆ ಅಸಲಿ ಸಂಗತಿ..!!

ಆಹಾರ -ಆರೋಗ್ಯ :ಡಾರ್ಕ್ ಚಾಕೊಲೇಟ್ ತಿಂದ್ರೆ ಬಿಪಿ, ಶುಗರ್ ನಿಯಂತ್ರಣಕ್ಕೆ ಬರುತ್ತಾ? ಇಲ್ಲಿದೆ ಅಸಲಿ ಸಂಗತಿ..!!


ಆಹಾರ -ಆರೋಗ್ಯ:  ಮಾರುಕಟ್ಟೆಯಲ್ಲಿ ಸಿಗೋ ಸಾಮಾನ್ಯ ಮಿಲ್ಕ್ ಚಾಕೊಲೇಟ್‌ಗಿಂತ ‘ಡಾರ್ಕ್ ಚಾಕೊಲೇಟ್’ (Dark Chocolate) ಆರೋಗ್ಯಕ್ಕೆ ಉತ್ತಮ ಎಂಬ ಮಾತು ಆಗಾಗ್ಗೆ ಕೇಳಿಬರುತ್ತದೆ. ಇದರಲ್ಲಿ ಐರನ್, ಮ್ಯಾಗ್ನೀಶಿಯಂ, ಫೈಬರ್ ಜೊತೆಗೆ ದೇಹಕ್ಕೆ ನೆರವಾಗುವ ಹಲವು ಪೋಷಕಾಂಶಗಳು ಇರುತ್ತವೆ.

ಡಾರ್ಕ್ ಚಾಕೊಲೇಟ್‌ನಿಂದ ದೇಹಕ್ಕೆ ಸಿಗುವ ಲಾಭಗಳು ಹಾಗೂ ಸೇವಿಸುವಾಗ ನೆನಪಿನಲ್ಲಿಡಬೇಕಾದ ವಿಷಯಗಳು ಇಲ್ಲಿವೆ.

  • ಉತ್ತಮ ರಕ್ತಸಂಚಾರ: ರಕ್ತನಾಳಗಳು ಸರಿಯಾಗಿ ಕೆಲಸ ಮಾಡಲು ನೆರವಾಗಿ, ರಕ್ತದೊತ್ತಡ (BP) ಹದದಲ್ಲಿರಲು ಸಹಾಯ ಮಾಡುತ್ತದೆ.
  • ಮೆದುಳು ಚುರುಕು: ಮೆದುಳಿನ ಭಾಗಕ್ಕೆ ರಕ್ತ ಪರಿಚಲನೆ ಹೆಚ್ಚಿಸಿ, ಗಮನವಿಟ್ಟು ಕೆಲಸ ಮಾಡಲು ಹಾಗೂ ಏಕಾಗ್ರತೆಗೆ ಸಪೋರ್ಟ್ ಮಾಡುತ್ತದೆ.
  • ದೇಹದ ಕೋಶಗಳಿಗೆ ರಕ್ಷಣೆ: ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಜೀವಕೋಶಗಳಿಗೆ ಹಾನಿಯಾಗದಂತೆ ಕಾಯುತ್ತವೆ.
  • ಖನಿಜಾಂಶಗಳ ಪೂರೈಕೆ: ರಕ್ತದ ಕಣ ಹೆಚ್ಚಿಸಲು ಐರನ್, ನರ ಹಾಗೂ ಸ್ನಾಯುಗಳ ಆರೋಗ್ಯಕ್ಕೆ ಮ್ಯಾಗ್ನೀಶಿಯಂ ಪೂರೈಸುತ್ತದೆ.

ಖರೀದಿಸುವ ಮುನ್ನ ಇವಿಷ್ಟು ನೆನಪಿರಲಿ

  1. ಪ್ಯಾಕ್ ಮೇಲೆ ಕೋಕೋ (Cocoa) ಪ್ರಮಾಣ ಕನಿಷ್ಠ 70% ಇದೆಯೇ ಎಂದು ನೋಡಿ.
  2. ಸಕ್ಕರೆ ಪ್ರಮಾಣ ಆದಷ್ಟು ಕಡಿಮೆ ಇರುವಂತೆ ನೋಡಿಕೊಳ್ಳಿ.
  3. ಆರ್ಟಿಫಿಷಿಯಲ್ ಕೆಮಿಕಲ್ ಬೆರೆಸಿದ ಚಾಕೊಲೇಟ್ ಬೇಡ.

ಶುಗರ್ ಇರುವವರು, ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವವರು ಮತ್ತು ಚಾಕೊಲೇಟ್ ಅಲರ್ಜಿ ಇರುವವರು ಡಾರ್ಕ್ ಚಾಕೊಲೇಟ್ ಸೇವಿಸುವ ಮುನ್ನ ಡಾಕ್ಟರ್ ಸಲಹೆ ಪಡೆಯುವುದು ಉತ್ತಮ. ಯಾವುದೇ ವಸ್ತುವನ್ನಾದರೂ ಮಿತವಾಗಿ ತಿಂದಾಗ ಮಾತ್ರ ಆರೋಗ್ಯಕ್ಕೆ ಲಾಭ ಸಿಗುತ್ತದೆ.

Ads on article

Advertise in articles 1

advertising articles 2

Advertise under the article