ಕಡಬ: ಫ್ರಿಡ್ಜ್ ಸ್ಫೋಟ- ಮನೆಗೆ ಭಾರೀ ಹಾನಿ, ಮಹಿಳೆ ಅಪಾಯದಿಂದ ಪಾರು..!

ಕಡಬ: ಫ್ರಿಡ್ಜ್ ಸ್ಫೋಟ- ಮನೆಗೆ ಭಾರೀ ಹಾನಿ, ಮಹಿಳೆ ಅಪಾಯದಿಂದ ಪಾರು..!


ಕಡಬ: ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಮನೆಯೊಳಗಿನ ವಸ್ತುಗಳಿಗೆ ಭಾರೀ ಹಾನಿಯಾಗಿರುವ ಘಟನೆ ದ.ಕ.ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಆತೂರಿನಲ್ಲಿ ನಡೆದಿದೆ.
ಆತೂರಿನ ಉದ್ಯಮಿ ಸಿದ್ದೀಕ್ ಅವರ ಮನೆಯ ಫ್ರಿಡ್ಜ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯೊಳಗಿದ್ದ ಪೀಠೋಪಕರಣಗಳು ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.‌ ಸ್ಫೋಟ ಸಂಭವಿಸಿದ ವೇಳೆ ಸಿದ್ದೀಕ್ ಅವರ ಪತ್ನಿ ಆರೀಫಾ ಮನೆಯಲ್ಲಿದ್ದರು. ಸ್ಫೋಟದ ತೀವ್ರತೆ ಹೆಚ್ಚಿದ್ದರೂ ಅದೃಷ್ಟವಶಾತ್ ಆರೀಫಾ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಫ್ರಿಡ್ಜ್ ಸ್ಫೋಟಗೊಂಡ ಶಬ್ದ ಕೇಳಿ ಸ್ಥಳೀಯರು ಮನೆಗೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.‌ ಫ್ರಿಡ್ಜ್ ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

Ads on article

Advertise in articles 1

advertising articles 2

Advertise under the article