ಬೆಂಗಳೂರು :KPSC scam KAS ಪರೀಕ್ಷೆಯಲ್ಲಿ 25 ಮಾರ್ಕ್ಸ್‌ಗೆ 1.5 ಕೋಟಿ ಡಿಮಾಂಡ್ ಆರೋಪ!: FIR ದಾಖಲು.

ಬೆಂಗಳೂರು :KPSC scam KAS ಪರೀಕ್ಷೆಯಲ್ಲಿ 25 ಮಾರ್ಕ್ಸ್‌ಗೆ 1.5 ಕೋಟಿ ಡಿಮಾಂಡ್ ಆರೋಪ!: FIR ದಾಖಲು.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಕೆಎಎಸ್‌ (KAS) ಹುದ್ದೆಗಳ ನೇಮಕಾತಿಯಲ್ಲಿ ಕೇವಲ 25 ಅಂಕಗಳನ್ನು ನೀಡಲು ಬರೋಬ್ಬರಿ 1.5 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಧಿಕೃತ ಎಫ್‌ಐಆರ್ ದಾಖಲಾಗಿದೆ.
ಕಾಂತಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

1.5 ಕೋಟಿ ಲಂಚದ ಡೀಲ್

ದೂರುದಾರರು ನೀಡಿದ ಮಾಹಿತಿಯ ಪ್ರಕಾರ, ಒಟ್ಟು 384 ಕೆಎಎಸ್ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ಹಣ ನೀಡಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿದ ಅಭ್ಯರ್ಥಿಯ ಹೆಸರು ಸೇರಿದಂತೆ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗಿದೆ.

ನಿಯಮಗಳ ಪ್ರಕಾರ ನೇಮಕಾತಿ ಅಭ್ಯರ್ಥಿಗಳು ಆಯೋಗದ ಸದಸ್ಯರನ್ನು ಸಂಪರ್ಕಿಸುವಂತಿಲ್ಲ. ಆದರೆ, ಆರೋಪಿ ಅಭ್ಯರ್ಥಿಯು ಕೆಪಿಎಸ್‌ಸಿಯ ಸದಸ್ಯೆಯೊಬ್ಬರ ಜತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಸುಮಾರು ಎರಡು ತಿಂಗಳ ಹಿಂದೆ ನಡೆದಿದ್ದ ಸಂದರ್ಶನದ ವೇಳೆ ನಾಲ್ವರು ಸದಸ್ಯರಿದ್ದ ಪ್ಯಾನಲ್‌ನಲ್ಲಿ ಒಬ್ಬರಾಗಿದ್ದ ಈ ಕೆಪಿಎಸ್‌ಸಿ ಸದಸ್ಯೆ, ಅಭ್ಯರ್ಥಿಗೆ 25 ಅಂಕಗಳನ್ನು ನೀಡಲು 1.5 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಆಘಾತಕಾರಿ ಮಾಹಿತಿ ದೂರಿನಲ್ಲಿದೆ.

ತನಿಖೆ ಚುರುಕು

ಈ ಅಕ್ರಮಕ್ಕೆ ಪುಷ್ಟಿ ನೀಡುವಂತೆ ಅಭ್ಯರ್ಥಿ ಹಾಗೂ ಕೆಪಿಎಸ್‌ಸಿ ಸದಸ್ಯೆಯ ನಡುವೆ ನಡೆದಿರುವ ಕರೆಗಳ ವಿವರಗಳು (CDR) ಲಭ್ಯವಾಗಿವೆ. ಇಬ್ಬರ ನಡುವೆ ಎಷ್ಟು ಬಾರಿ ಸಂಭಾಷಣೆ ನಡೆದಿದೆ ಎಂಬುದು ಈ ಕಾಲ್ ರೆಕಾರ್ಡ್‌ಗಳಿಂದ ಸ್ಪಷ್ಟವಾಗಿದ್ದು, ಸಂದರ್ಶನದ ಅಭ್ಯರ್ಥಿಗಳೊಂದಿಗೆ ಸದಸ್ಯರು ಹೇಗೆ ಈ ರೀತಿ ಮಾತುಕತೆ ನಡೆಸುತ್ತಾರೆ ಎಂಬ ಸಾಲು ಸಾಲು ಪ್ರಶ್ನೆಗಳು ಎದ್ದಿವೆ.

ಪ್ರಕರಣವು ಅತ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಲಂಚದ ಡೀಲ್‌ನಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ವಿಧಾನಸೌಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article