ಉತ್ತರ ಪ್ರದೇಶ :ಟೀಂಡರ್ ಬೆಡಗಿಯ ಕರಾಳ ದಂಧೆ; ಡೇಟಿಂಗ್ ಆ್ಯಪ್‌ನಲ್ಲಿ ಆಸೆ ತೋರಿಸಿ 6 ಕೋಟಿ ಲೂಟಿ ಮಾಡಿದ ‘ಸ್ವೀಟಿ’.

ಉತ್ತರ ಪ್ರದೇಶ :ಟೀಂಡರ್ ಬೆಡಗಿಯ ಕರಾಳ ದಂಧೆ; ಡೇಟಿಂಗ್ ಆ್ಯಪ್‌ನಲ್ಲಿ ಆಸೆ ತೋರಿಸಿ 6 ಕೋಟಿ ಲೂಟಿ ಮಾಡಿದ ‘ಸ್ವೀಟಿ’.

ಉತ್ತರ ಪ್ರದೇಶ :ಡೇಟಿಂಗ್ ಆ್ಯಪ್‌ಗಳ ಮೂಲಕ ಶ್ರೀಮಂತ ಪುರುಷರನ್ನು ಬಲೆಗೆ ಬೀಳಿಸಿ ಸುಮಾರು 6 ಕೋಟಿ ರೂಪಾಯಿಗೂ ಅಧಿಕ ಹಣ ಸುಲಿಗೆ ಮಾಡಿದ್ದ ಹನಿಟ್ರ್ಯಾಪ್ ಜಾಲವೊಂದನ್ನು ಪ್ರಯಾಗ್‌ರಾಜ್ ಪೊಲೀಸರು ಬಯಲಿಗೆಳೆದಿದ್ದಾರೆ. ಹೈಕೋರ್ಟ್ ವಕೀಲರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ದಂಧೆಯ ಕರಾಳ ರೂಪ ಹೊರಬಿದ್ದಿದೆ.

ಪಲ್ಲವಿ ಸಿಂಗ್ ರಜಪೂತ್ ಅಲಿಯಾಸ್ ‘ಸ್ವೀಟಿ ತಿವಾರಿ’ ಎಂಬಾಕೆ ಈ ಜಾಲದ ಮುಖ್ಯಸ್ಥೆಯಾಗಿದ್ದು, ಈಕೆಗೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಾಥ್ ನೀಡುತ್ತಿದ್ದರು. ಸಾಮಾಜಿಕ ಜಾಲತಾಣಗಳು ಹಾಗೂ ಡೇಟಿಂಗ್ ಆ್ಯಪ್‌ಗಳಲ್ಲಿ ಪುರುಷರ ಜೊತೆ ಸೌಹಾರ್ದತೆಯಿಂದ ಮಾತನಾಡುತ್ತಿದ್ದ ಈಕೆ, ಬಳಿಕ ನೇರವಾಗಿ ಭೇಟಿಯಾಗಿ ಆಪ್ತ ಕ್ಷಣಗಳ ದೃಶ್ಯಗಳನ್ನು ರಹಸ್ಯವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದಳು.

ರಹಸ್ಯ ವಿಡಿಯೋ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಸಂತ್ರಸ್ತರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಈಕೆ, ಲಕ್ಷಾಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು. ಹಣ ನೀಡಲು ನಿರಾಕರಿಸಿದವರ ವಿರುದ್ಧ ಅತ್ಯಾಚಾರ ಅಥವಾ ಕೊಲೆ ಯತ್ನದಂತಹ ಸುಳ್ಳು ದೂರು ನೀಡಿ ಬೆದರಿಸುತ್ತಿದ್ದಳು. ಈಕೆಯ ಸುಳ್ಳು ದೂರಿನಿಂದಾಗಿ ಈಗಾಗಲೇ ಐವರು ಪುರುಷರು ಜೈಲು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯ ವೇಳೆ ಬೆಡ್ ಮೇಲೆ ಹರಡಿರುವ ನೋಟಿನ ಕಂತೆಗಳ ಪಕ್ಕದಲ್ಲಿ ಈಕೆ ಕುಳಿತಿರುವ ಫೋಟೋ ಹಾಗೂ ಬಂದೂಕು ಹಿಡಿದು ಪೋಸ್ ನೀಡಿರುವ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇವುಗಳನ್ನು ತನಿಖಾಧಿಕಾರಿಗಳು ಪ್ರಮುಖ ಸಾಕ್ಷ್ಯಗಳಾಗಿ ಪರಿಗಣಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article