ಬೆಂಗಳೂರು :ಕರ್ನಾಟಕದಲ್ಲಿ ವಿಷಕಾರಿ ಧತ್ತೂರ ಹಣ್ಣು ಮಾರಾಟ: ಅಮೆಜಾನ್‌, ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬಿಗ್‌ಬಾಸ್ಕೆಟ್‌ಗಳ ಆಹಾರ ಲೈಸನ್ಸ್‌ ಸಸ್ಪೆಂಡ್‌!

ಬೆಂಗಳೂರು :ಕರ್ನಾಟಕದಲ್ಲಿ ವಿಷಕಾರಿ ಧತ್ತೂರ ಹಣ್ಣು ಮಾರಾಟ: ಅಮೆಜಾನ್‌, ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬಿಗ್‌ಬಾಸ್ಕೆಟ್‌ಗಳ ಆಹಾರ ಲೈಸನ್ಸ್‌ ಸಸ್ಪೆಂಡ್‌!

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ದಾಳಿ ನಡೆಸಿ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಜರುಗಿಸುತ್ತಿರುವ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸದ್ಯ ತ್ವರಿತ ವಾಣಿಜ್ಯ ಅಪ್ಲಿಕೇಶನ್‌ಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳ ಮೇಲೆ ಕಣ್ಣಿಟ್ಟಿದ್ದು, ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ ಸೇರಿದಂತೆ ಕೆಲ ಸಂಸ್ಥೆಗಳು ತಮ್ಮ ಅಪ್ಲಿಕೇಶನ್‌ಗಳಲ್ಲಿ ಮಾನವ ಬಳಕೆಗಾಗಿ ವಿಷಕಾರಿ ಉಮ್ಮತ್ತಿ ಕಾಯಿ ( Datura ) ಹಣ್ಣುಗಳು ಹಾಗೂ ಅವುಗಳ ಬೀಜಗಳನ್ನು ಮಾರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಈ ಸಂಸ್ಥೆಗಳ ಆಹಾರ ಪರವಾನಗಿ ಅಮಾನತುಗೊಳಿಸಿದೆ.

ಇ-ಕಾಮರ್ಸ್‌ ಫ್ಲಾಟ್‌ಫಾರ್ಮ್‌ಗಳಲ್ಲಿ ವಿಷಕಾರಿ ಧತ್ತೂರ ಹಣ್ಣು ಮಾರಾಟ

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ತ್ವರಿತ ವಾಣಿಜ್ಯ ಫ್ಲಾಟ್‌ಫಾರ್ಮ್‌ಗಳ ಆಹಾರ ಪರವಾನಗಿ ಅಮಾನತುಗೊಳಿಸಿರುವ ಕುರಿತು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮಾಹಿತಿ ನೀಡಿದೆ. ಇದರಲ್ಲಿ, ಧತ್ತೂರ (Datura) ಸಸ್ಯದ ಹಣ್ಣುಗಳು ಹಾಗೂ ಬೀಜಗಳನ್ನು ಕೆಲವು ಆನ್‌ಲೈನ್ ಮಾರಾಟ ವೇದಿಕೆಗಳಲ್ಲಿ ಮಾರಾಟಕ್ಕಾಗಿ ಪ್ರದರ್ಶಿಸಲಾಗುತ್ತಿರುವುದು ಹಾಗೂ FSSAI ಪರವಾನಿಗೆ/ ನೊಂದಣಿಯೊಂದಿಗೆ ಮಾರಾಟ ಮಾಡಲಾಗುತ್ತಿರುವುದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.

ಈ ಧತ್ತೂರ ಸಸ್ಯವು ವಿಷಕಾರಿ ಗುಣಲಕ್ಷಣಗಳನ್ನು ಹೊಂದಿದ್ದು, ಅದರ ಹಣ್ಣುಗಳು ಹಾಗೂ ಬೀಜಗಳ ಸೇವನೆಯು ಮಾನವನ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಧತ್ತೂರ ಹಣ್ಣುಗಳು ಹಾಗೂ ಬೀಜಗಳನ್ನು ಆಹಾರ ಬಳಕೆಗಾಗಿ ಅಥವಾ ಸೇವನೆಗಾಗಿ ಮಾರಾಟ ಮಾಡುವುದು, ವಿತರಿಸುವುದು, ಮಾರಾಟಕ್ಕಾಗಿ ಪ್ರದರ್ಶಿಸುವುದು ಅಥವಾ ಯಾವುದೇ ರೀತಿಯ ಆನ್‌ಲೈನ್ ವೇದಿಕೆಗಳ ಮೂಲಕ ಪ್ರಚಾರ ಮಾಡುವುದು ಸಾರ್ವಜನಿಕ ಆರೋಗ್ಯ ಮತ್ತು ಆಹಾರ ಸುರಕ್ಷತೆಯ ಹಿತದೃಷ್ಟಿಯಿಂದ ಗಂಭೀರ ವಿಷಯವಾಗಿದೆ ಎಂದು ತಿಳಿಸಿದೆ.

Ads on article

Advertise in articles 1

advertising articles 2

Advertise under the article