ದೆಹಲಿ :Road miracle ಬರಲಿವೆ ಪರಸ್ಪರ ಮಾತಾಡಿಕೊಳ್ಳುವ ವಾಹನಗಳು! ಆ್ಯಕ್ಸಿಡೆಂಟ್ ತಡೆಯಲಿವೆ!
Thursday, August 6, 2026

ನವದೆಹಲಿ: ‘ಮುಂದೆ ಅಪಾಯವಿದೆ, ಹುಷಾರ್!’ ಎಂದು ನಿಮ್ಮ ವಾಹನಕ್ಕೆ ಪಕ್ಕದಲ್ಲೇ ಹೋಗುತ್ತಿರುವ ಇನ್ನೊಂದು ವಾಹನವೇ ಸಂದೇಶ ಕಳುಹಿಸಿದರೆ ಹೇಗಿರುತ್ತೆ? ಹೌದು, ಇದು ಯಾವುದೋ ವೈಜ್ಞಾನಿಕ ಸಿನಿಮಾದ ಕಥೆಯಲ್ಲ! ಶೀಘ್ರದಲ್ಲೇ ಭಾರತದ ರಸ್ತೆಗಳಲ್ಲಿ ಈ ಪವಾಡ ನಡೆಯಲಿದೆ.
ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ. 2028ರ ಅಕ್ಟೋಬರ್ 1ರಿಂದ ದೇಶದಲ್ಲಿ ಉತ್ಪಾದನೆಯಾಗುವ ಪ್ರತಿಯೊಂದು ಹೊಸ ವಾಹನದಲ್ಲೂ ‘ವಾಹನದಿಂದ ವಾಹನಕ್ಕೆ’ (Vehicle-to-Vehicle – V2V) ಸಂಪರ್ಕ ಕಲ್ಪಿಸುವ ತಂತ್ರಜ್ಞಾನವನ್ನು ಸರ್ಕಾರ ಕಡ್ಡಾಯಗೊಳಿಸುತ್ತಿದೆ.
ಏನಿದು ‘ಮಾತಾಡಿಕೊಳ್ಳುವ’ ವಾಹನಗಳ ಕಲ್ಪನೆ?
ಈ ವ್ಯವಸ್ಥೆಯಲ್ಲಿ ವಾಹನಗಳು ಮನುಷ್ಯರಂತೆ ಶಬ್ದ ಮಾಡಿ ಮಾತಾಡುವುದಿಲ್ಲ! ಬದಲಿಗೆ, ತಮ್ಮಲ್ಲಿರುವ ‘ಆನ್‌ಬೋರ್ಡ್ ಯೂನಿಟ್’ (OBU) ಎಂಬ ರೇಡಿಯೊ ತಂತ್ರಜ್ಞಾನದ ಮೂಲಕ ಕ್ಷಣಾರ್ಧದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ.
- ಮಾಹಿತಿ ವಿನಿಮಯ: ರಸ್ತೆಯಲ್ಲಿ ಹೋಗುವಾಗ ವಾಹನಗಳು ತಮ್ಮ ವೇಗ, ನಿಖರ ಸ್ಥಳ (GPS) ಮತ್ತು ಬ್ರೇಕ್ ಹಾಕಿರುವ ಸ್ಥಿತಿಯನ್ನು ಪರಸ್ಪರ ರವಾನಿಸಿಕೊಳ್ಳುತ್ತವೆ.
- ಕಣ್ಣಿಗೆ ಕಾಣದ ಅಪಾಯದ ಮುನ್ಸೂಚನೆ: ಕುರುಡು ತಿರುವುಗಳಲ್ಲಿ (Blind Curves) ಬರುವ ವಾಹನಗಳು, ದಟ್ಟ ಮಂಜು ಅಥವಾ ಭಾರಿ ಮಳೆಯಿಂದಾಗಿ ಕಣ್ಣಿಗೆ ಕಾಣಿಸದ ಎದುರಿನ ಅಪಾಯಗಳ ಬಗ್ಗೆ ಇದು ಚಾಲಕನಿಗೆ ಕೆಲವೇ ಮಿಲಿ ಸೆಕೆಂಡ್‌ಗಳಲ್ಲಿ ಎಚ್ಚರಿಕೆ ರವಾನಿಸುತ್ತದೆ.