ದೆಹಲಿ :​ಚಿನ್ನ-ಬೆಳ್ಳಿ ಆಮದು ಸುಂಕ ಇಳಿಕೆಗೆ ಮಾಸ್ಟರ್ ಪ್ಲ್ಯಾನ್: ಭಾರಿ ತಗ್ಗಲಿದೆಯೇ ಅಪರಂಜಿ ದರ?

ದೆಹಲಿ :​ಚಿನ್ನ-ಬೆಳ್ಳಿ ಆಮದು ಸುಂಕ ಇಳಿಕೆಗೆ ಮಾಸ್ಟರ್ ಪ್ಲ್ಯಾನ್: ಭಾರಿ ತಗ್ಗಲಿದೆಯೇ ಅಪರಂಜಿ ದರ?

ದೆಹಲಿ :ಕಳ್ಳಸಾಗಣೆ (ಸ್ಮಗ್ಲಿಂಗ್) ತಡೆಗಟ್ಟಲು ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ದರ ನಿಯಂತ್ರಿಸಲು ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಆಮದು ಸುಂಕವನ್ನು (Import Duty) ಶೇ. 15ರಿಂದ ಶೇ. 6ಕ್ಕೆ ಇಳಿಸಲು ಚಿಂತನೆ ನಡೆಸಿದೆ. 2026ರ ಮೇ ತಿಂಗಳಷ್ಟೇ ಸುಂಕ ಏರಿಸಿದ್ದರೂ ಆಮದು ತಗ್ಗದೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ದರದ ವ್ಯತ್ಯಾಸದಿಂದಾಗಿ ಸ್ಮಗ್ಲಿಂಗ್ ಹೆಚ್ಚಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

 

ಸುಂಕ ಇಳಿಕೆಯಿಂದಾಗುವ ಪ್ರಮುಖ ಬದಲಾವಣೆಗಳು:

​ಕಳ್ಳಸಾಗಣೆಗೆ ಬ್ರೇಕ್: ಭಾರತ ಮತ್ತು ವಿದೇಶದ ಚಿನ್ನದ ಬೆಲೆಯಲ್ಲಿ ಗ್ರಾಮ್‌ಗೆ ₹1,500ಕ್ಕೂ ಹೆಚ್ಚು ವ್ಯತ್ಯಾಸವಿರುವುದರಿಂದ ಅಕ್ರಮ ಆಮದು ಹೆಚ್ಚಾಗಿತ್ತು. ಸುಂಕ ಶೇ. 6ಕ್ಕೆ ಇಳಿದರೆ ಅಕ್ರಮ ವ್ಯಾಪಾರಕ್ಕೆ ಕಡಿತ ಬೀಳಲಿದೆ.

​ಬೆಲೆಯಲ್ಲಿ ಇಳಿತಾಯ: ಆಮದು ಸುಂಕ ತಗ್ಗಿದರೆ ಪ್ರಸ್ತುತ ಗ್ರಾಮ್‌ಗೆ ₹16,298 ಇರುವ 24 ಕ್ಯಾರಟ್ ಚಿನ್ನದ ದರ ₹15,000 ಆಸುಪಾಸಿಗೆ ತಗ್ಗುವ ಸಾಧ್ಯತೆಯಿದೆ.

​ಕೈಗಾರಿಕೆಗಳಿಗೆ ವರ: ಬೆಳ್ಳಿ ಮತ್ತು ಪ್ಲಾಟಿನಂ ಮೇಲಿನ ಸುಂಕ ಕಡಿಮೆಯಾದರೆ ಸೌರಶಕ್ತಿ, ಎಲೆಕ್ಟ್ರಾನಿಕ್ಸ್ ಹಾಗೂ ಆಟೋಮೊಬೈಲ್ ಕ್ಷೇತ್ರಗಳ ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ.

​ಸದ್ಯ ಸಂಬಂಧಪಟ್ಟ ಸಚಿವಾಲಯಗಳು ಮತ್ತು ಅಧಿಕಾರಿಗಳು ಈ ಕುರಿತು ಚರ್ಚಿಸುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

 

Ads on article

Advertise in articles 1

advertising articles 2

Advertise under the article