ಬೆಂಗಳೂರು :​ಬಾಕ್ಸಾಫೀಸ್‌ನಲ್ಲಿ ರಾಕಿ ಬಾಯ್ ಅಬ್ಬರ: ಬಿಡುಗಡೆಯಾದ ಮೊದಲ ದಿನವೇ ‘ಟಾಕ್ಸಿಕ್’ ಗಳಿಸಿದ್ದೆಷ್ಟು ಗೊತ್ತಾ?

ಬೆಂಗಳೂರು :​ಬಾಕ್ಸಾಫೀಸ್‌ನಲ್ಲಿ ರಾಕಿ ಬಾಯ್ ಅಬ್ಬರ: ಬಿಡುಗಡೆಯಾದ ಮೊದಲ ದಿನವೇ ‘ಟಾಕ್ಸಿಕ್’ ಗಳಿಸಿದ್ದೆಷ್ಟು ಗೊತ್ತಾ?

ಬೆಂಗಳೂರು :ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ದೇಶ-ವಿದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಯಾವುದೇ ಪ್ರೀಮಿಯರ್ ಶೋಗಳಿಲ್ಲದೆ ಆರು ಭಾಷೆಗಳಲ್ಲಿ ತೆರೆಕಂಡಿರುವ ಈ ಚಿತ್ರ ವಿಶ್ವದಾದ್ಯಂತ ಹೊಸ ದಾಖಲೆ ಬರೆದಿದೆ.


ಬಾಕ್ಸಾಫೀಸ್ ಕಲೆಕ್ಷನ್ ವಿವರ:

​ವಿಶ್ವದಾದ್ಯಂತ ಕಲೆಕ್ಷನ್: ಮೊದಲ ದಿನವೇ ವಿಶ್ವದಾದ್ಯಂತ ₹125 ಕೋಟಿಗೂ ಅಧಿಕ ಬಂಪರ್ ಗಳಿಕೆ ಕಂಡಿದೆ.

​ಭಾರತದಲ್ಲಷ್ಟೇ ಗಳಿಕೆ: ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ₹90 ರಿಂದ ₹95 ಕೋಟಿ ಕಲೆಕ್ಷನ್ ಮಾಡಿದೆ.

​ಭಾಷಾವಾರು ಕಲೆಕ್ಷನ್: ಹಿಂದಿಯಲ್ಲಿ ₹50 ಕೋಟಿಗೂ ಅಧಿಕ, ಕನ್ನಡದಲ್ಲಿ ₹20 ಕೋಟಿಗೂ ಅಧಿಕ ಹಾಗೂ ತೆಲುಗಿನಲ್ಲಿ ₹11 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಹೊಸ ದಾಖಲೆ ಬರೆದ ‘ಟಾಕ್ಸಿಕ್’:

ಈ ವರ್ಷ ಬಿಡುಗಡೆಯಾದ ‘ಧುರಂಧರ್ 2’ (₹140.6 ಕೋಟಿ) ಚಿತ್ರದ ನಂತರ ಮೊದಲ ದಿನವೇ ₹100 ಕೋಟಿ ದಾಟಿದ ಭಾರತದ ಎರಡನೇ ಅತಿ ದೊಡ್ಡ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಟಾಕ್ಸಿಕ್’ ಪಾತ್ರವಾಗಿದೆ. ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

 

Ads on article

Advertise in articles 1

advertising articles 2

Advertise under the article