ಕೇರಳ :ಕಣ್ಣೂರು ದೇವಸ್ಥಾನದಲ್ಲಿ ವಿವಾದ: ಮಗಳ ಅನ್ಯಜಾತಿ ವಿವಾಹಕ್ಕೆ ಅರ್ಚಕನ ಅಮಾನತು? ಆಡಳಿತ ಮಂಡಳಿ ವಿರುದ್ಧ ಆಕ್ರೋಶ!

ಕೇರಳ: ಕಣ್ಣೂರು ಮೂಲದ ಪ್ರಸಿದ್ಧ ಮುಚ್ಚಿಲೋಟ್ ಭಗವತಿ ದೇವಸ್ಥಾನದಲ್ಲಿ ಕಳೆದ ಮೂರು ಕಡೆಯಿಂದ ಧಾರ್ಮಿಕ ವಿಧಿವಿಧಾನಗಳ ಸಹಾಯಕನಾಗಿ (‘ಉಪಕರ್ಮಿ’) ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ವಿ. ರಾಜನ್ ಎಂಬುವವರನ್ನು ಸೇವೆಯಿಂದ ಅಮಾನತುಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮ ಮಗಳು ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದೇ ಈ ಕ್ರಮಕ್ಕೆ ಮೂಲ ಕಾರಣ ಎಂದು ರಾಜನ್ ಆರೋಪಿಸಿದ್ದಾರೆ.
ವಾಣಿಯ ಸಮುದಾಯಕ್ಕೆ ಸೇರಿದ ರಾಜನ್ ಅವರ ಪುತ್ರಿ, ಇತ್ತೀಚೆಗೆ ಪೊದುವಾಳ್ ಸಮುದಾಯದ ಯುವಕ ವಿವಾಹವಾಗಿದ್ದರು. ಮಗಳ ನಿಶ್ಚಿತಾರ್ಥದ ಸಮಯದಿಂದಲೇ ದೇವಸ್ಥಾನದ ಮಂಡಳಿಯು ಕರ್ತವ್ಯಕ್ಕೆ ಹಾಜರಾಗದಂತೆ ಆಡಳಿತವು ಒತ್ತಡ ಹೇರಿತ್ತು ಎನ್ನಬಹುದು, ಮದುವೆ ಮುಗಿದ ಬೆನ್ನಲ್ಲೇ ಅವರನ್ನು ಸಂಪೂರ್ಣವಾಗಿ ಸೇವೆಯಿಂದ ವಜಾಗೊಳಿಸಲಾಗಿದೆ. ಈ ಅನ್ಯಾಯವನ್ನು ಪ್ರಶ್ನಿಸಿ ರಾಜನ್ ಅವರು ಮಲಬಾರ್ ದೇವಸ್ವಂ ಮಂಡಳಿ ಹಾಗೂ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾರೆ.
ಪ್ರಕರಣದ ಮುಖ್ಯಾಂಶಗಳು ಮತ್ತು ಪರ-ವಿರೋಧ ವಾದ:
ಆಡಳಿತ ಮಂಡಳಿಯ ವಾದ: ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಐ.ವಿ. ಕೃಷ್ಣನ್ ಈ ಆರೋಪಗಳನ್ನು ತಳ್ಳಿಹಾಕಿದ್ದು, “ಜಾತಿಯ ಕಾರಣಕ್ಕಾಗಿ ಈ ಕ್ರಮ ಕೈಗೊಂಡಿಲ್ಲ. ರಾಜನ್ ಅವರು ಆಚಾರ-ವಿಚಾರಗಳನ್ನು ಉಲ್ಲಂಘಿಸಿದ್ದಾರೆ, ಶಿಸ್ತು ಕ್ರಮಕ್ಕಾಗಿ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ರಾಜನ್ ಸವಾಲು: ತಮ್ಮ ವಿರುದ್ಧ ಯಾವುದೇ ಭಕ್ತರು ದೂರು ನೀಡಲು ಸಾಕ್ಷ್ಯಗಳಿಲ್ಲ, ಕರ್ತವ್ಯ ಲೋಪ ಸಾಬೀತುಪಡಿಸಿದರೆ ತಾವೇ ಹುದ್ದೆಯಿಂದ ಕೆಳಗಿಳಿಯುವುದಾಗಿ ರಾಜನ್ ಬಹಿರಂಗ ಸವಾಲು ಹಾಕಿದ್ದಾರೆ.
ಸಮಿತಿಯ ಹೊಸ ತಿರುವು: ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಹರೀಂದ್ರನ್ ಅವರು, “ರಾಜನ್ ವಿರುದ್ಧ ಭಕ್ತರಿಂದ ಯಾವುದೇ ದೂರುಗಳು ಬಂದಿಲ್ಲ. ಮುಂದುವರಿಸುವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ” ಎಂದು ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಸ್ಥಳಿಯ ಶಾಸಕರಿಗೂ ದೂರು ನೀಡಲಿಲ್ಲ, ಮಲಬಾರ್ ದೇವಸ್ವಂ ಮಂಡಳಿಯ ಉಪಾಯುಕ್ತರು ಮುಂದಿನ ತಿಂಗಳು ಈ ಪ್ರಕರಣದ ಅಧಿಕೃತ ವಿಚಾರಣೆ ನಡೆಸಲಿದ್ದಾರೆ.